ವೈದ್ಯಕೀಯ ಕನಸುಗಳಿಗೆ ಬೆಳಕಿನ ದಾರಿ – Parishrama NEET Academy & PU College
- Ananthamurthy m Hegde
- May 20
- 2 min read
ವೈದ್ಯಕೀಯ ಪದವಿಯನ್ನು ಪಡೆಯುವುದು ಸಾವಿರಾರು ವಿದ್ಯಾರ್ಥಿಗಳ ಕನಸು. ರೋಗಿಗಳಿಗೆ ಪರಿಹಾರ ನೀಡುವ, ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುವ ಈ ವೃತ್ತಿ, ಸಮಾಜದಲ್ಲಿ ಅತ್ಯಂತ ಗೌರವಪೂರ್ವಕ ಸ್ಥಾನ ಹೊಂದಿದೆ. ಆದರೆ ಈ ಕನಸು ಸಾಕಾರವಾಗಲು ಕೇವಲ ಆಸೆ ಸಾಲದು – ನಿಖರ ಮಾರ್ಗದರ್ಶನ, ಆಳವಾದ ಅಧ್ಯಯನ, ನಿತ್ಯದ ಪರಿಶೀಲನೆ ಮತ್ತು ಪ್ರೇರಣಾದಾಯಕ ವಾತಾವರಣ ಅನಿವಾರ್ಯ. ಈ ಎಲ್ಲವನ್ನೂ ಒದಗಿಸುವ ಸಂಸ್ಥೆ Parishrama NEET Academy & PU College

ಶ್ರದ್ಧೆಯ ಸಂಕೇತ “ಪರಿಶ್ರಮ”:
ಶ್ರೀ ಪ್ರದೀಪ್ ಈಶ್ವರ ಅವರ ದೃಷ್ಟಿ, ಧೈರ್ಯ ಮತ್ತು ಶ್ರದ್ಧೆಯಿಂದ ಆರಂಭಗೊಂಡ Parishrama NEET Academy & PU College, ಕೇವಲ ೧೬ ವಿದ್ಯಾರ್ಥಿಗಳೊಂದಿಗೆ ಆರಂಭವಾಗಿ ಇಂದು ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಕನಸುಗಳನ್ನು ಸಾಕಾರಗೊಳಿಸುವ ಭರವಸೆಯ ಕೇಂದ್ರವಾಗಿದೆ. ವಿಜ್ಞಾನಾಧಾರಿತ ಹಾಗೂ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ವಿಧಾನಗಳಿಂದ NEET ಪರೀಕ್ಷೆಯಲ್ಲಿ ಟಾಪ್ ರ‍್ಯಾಂಕ್ ಗಳಿಸುವ ಸಾವಿರಾರು ವಿದ್ಯಾರ್ಥಿಗಳನ್ನು ರೂಪಿಸಿದೆ.
ಪರಿಶ್ರಮದ ವೈಶಿಷ್ಟ್ಯಗಳು – ಭವಿಷ್ಯದ ಕನಸುಗಳಿಗೆ ಆಧಾರಸ್ತಂಭ
೧. ಪರಿಣತ ಶಿಕ್ಷಕ ವೃಂದ ಹಾಗೂ ವೈಯಕ್ತಿಕ ಮಾರ್ಗದರ್ಶನ: Physics, Chemistry, Biology ಮತ್ತು Mathematics ತಜ್ಞರಿಂದ ರೂಪುಗೊಂಡ ಶಿಕ್ಷಕವೃಂದ, ನಿರಂತರವಾಗಿ ವಿದ್ಯಾರ್ಥಿಗಳೊಂದಿಗೆ ನಿತ್ಯ ಅಧಿವೇಶನಗಳನ್ನು ನಡೆಸುತ್ತಾರೆ. ಅವರ ಬೋಧನೆ ಶೈಲಿ ಕೇವಲ ವಿಷಯಾಧ್ಯಯನಕ್ಕೆ ಸೀಮಿತವಲ್ಲದೆ, ಶ್ರಮ, ಆತ್ಮವಿಶ್ವಾಸ ಮತ್ತು ಸ್ಪೂರ್ತಿಯನ್ನೂ ಜತೆಗೆ ತುಂಬುತ್ತದೆ.
೨. ಸಾಧನೆಯ ದಾಖಲೆಗಳು: ಪ್ರತಿವರ್ಷ Parishrama ವಿದ್ಯಾರ್ಥಿಗಳು NEET ಪರೀಕ್ಷೆಯಲ್ಲಿ ಟಾಪ್ ರ‍್ಯಾಂಕ್ ಗಳಿಸುತ್ತಿದ್ದು, ದೇಶದ ಖ್ಯಾತ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. SSLC ಟಾಪರ್‌ಗಳಿಗೆ ೧೦೦% ವಿದ್ಯಾರ್ಥಿವೇತನದ ಅವಕಾಶವನ್ನುParishrama ನೀಡುತ್ತಿದೆ- ಇದು ಸಂಸ್ಥೆಯ ಶ್ರೇಷ್ಠತೆಯ ಪ್ರತಿಬಿಂಬ.
೩. ಸಂಪೂರ್ಣ ಪಠ್ಯಾಧಾರಿತ ಅಧ್ಯಯನ ವ್ಯವಸ್ಥೆ: OTES ಮೂಲಕ ತತ್ವಾಧಾರಿತ ವಿವರಣೆಗಳು, ಹಿಂದಿನ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ, ಮಾದರಿ ಪರೀಕ್ಷೆಗಳ ತಯಾರಿ, ಆನ್‌ಲೈನ್ ಲರ್ನಿಂಗ್ ಪ್ಲಾಟ್‌ಫಾರ್ಮ್ ಬಳಸುವ ಅವಕಾಶವನ್ನು Parishrama ಸಂಪೂರ್ಣವಾಗಿ NEET ಪಠ್ಯಕ್ರಮಕ್ಕೆ ಅನುಗುಣವಾಗಿ ವಿನ್ಯಾಸಗೊಂಡಿದೆ.
೪. ನಿರಂತರ ಮೌಲ್ಯಮಾಪನ ವ್ಯವಸ್ಥೆ: ಪ್ರತಿದಿನದ ಪರೀಕ್ಷೆಗಳು, ವಾರದ ವಿಶ್ಲೇಷಣೆ, ಮಾಸಿಕ ಪರೀಕ್ಷೆಗಳು ಮತ್ತು ಪೂರ್ಣ ಪ್ರಮಾಣದ NEET ಮಾದರಿ ಪರೀಕ್ಷೆಗಳ ಪ್ರಗತಿಯನ್ನು ವಿದ್ಯಾರ್ಥಿಗಳು,Parishrama App ಮೂಲಕ ನಿರಂತರವಾಗಿ ವೀಕ್ಷಿಸಬಹುದು.
೫. ಜಾಗತಿಕ ಮಟ್ಟದ ಪಾಠಶಾಲಾ ಮತ್ತು ವಸತಿ ಸೌಲಭ್ಯಗಳು: ವಿದ್ಯಾರ್ಥಿಗಳ ಆಧ್ಯಾತ್ಮಿಕ, ದೈಹಿಕ ಮತ್ತು ಮಾನಸಿಕ ಬೆಳವಣಿಗೆಗಾಗಿ ಪ್ರತ್ಯೇಕ ಹಾಸ್ಟೆಲ್, ಪೌಷ್ಟಿಕ ಆಹಾರ, ವೈದ್ಯಕೀಯ ನೆರವು, ಶಿಸ್ತುಬದ್ಧ ಸಂವಹನ ವ್ಯವಸ್ಥೆ ಸೇರಿದಂತೆ ಎಲ್ಲಾ ಸೌಲಭ್ಯಗಳು Parishramaದಲ್ಲಿ ಲಭ್ಯ.
ದೀರ್ಘಕಾಲಿಕ ವಸತಿ ಯೋಜನೆ: ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ವಾಸಿಸುತ್ತಾ ಸಂಪೂರ್ಣ ಮಾರ್ಗದರ್ಶನದೊಂದಿಗೆ NEETಗೆ ತಯಾರಾಗುತ್ತಾರೆ.
ದೀರ್ಘಕಾಲಿಕ ಅರ್ಧ ವಸತಿ ಯೋಜನೆ: ಪಾಠಗಳ ನಂತರ ಮನೆಗೆ ಮರಳಲು ಅವಕಾಶವಿರುವ ಈ ಯೋಜನೆ, ಪೋಷಕರು ಹಾಗೂ ವಿದ್ಯಾರ್ಥಿಗಳ ನಿರ್ವಹಣಾ ಸೌಕರ್ಯಕ್ಕೆ ಸೂಕ್ತವಾದದ್ದು.
ಪಿಯು ಜೊತೆಯಲ್ಲೇ NEET ಪರೀಕ್ಷೆಗೂ ತಯಾರಿ: PU ಕಾಲೇಜು ಮತ್ತು NEET ತರಬೇತಿ ಒಂದೇ ಕಟ್ಟಡದಲ್ಲಿ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ವಿಶೇಷ ಪಠ್ಯಕ್ರಮವನ್ನು ಅನುಸರಿಸಿ, ಪಿಸಿಎಂಬಿ ವಿಷಯಗಳಲ್ಲಿ ನಿಪುಣರಾದ ಶಿಕ್ಷಕರು ನಡೆಸುವ ತರಬೇತಿಯೊಂದಿಗೆ ಪಿಯು ಬೋರ್ಡ್ ಮತ್ತು NEETಎರಡಕ್ಕೂ ಸಮಾನ ಗಮನ ನೀಡುವ ಅವಕಾಶ. ಇದರಿಂದ ವಿದ್ಯಾರ್ಥಿಗಳು ಪಿಯು ಬೋರ್ಡ್ ಪರೀಕ್ಷೆ ಹಾಗೂ ಓಇಇಖಿ ಎರಡರಲ್ಲೂ ಸಮಾನ ಶ್ರದ್ಧೆಯೊಂದಿಗೆ ತಯಾರಾಗಬಹುದು. ಪರಿಶ್ರಮ ತನ್ನ ವಿದ್ಯಾರ್ಥಿಗಳಿಂದ ಕೇವಲ ಶೈಕ್ಷಣಿಕ ಸಾಧನೆ ಮಾತ್ರವಲ್ಲ, ಮೌಲ್ಯಾಧಾರಿತ ಬದುಕು ಕೂಡ ನಿರೀಕ್ಷಿಸುತ್ತದೆ. ಶಿಸ್ತಿನ ಜೊತೆಗೆ ಪ್ರೇರಣೆಯು ಪರಿಶ್ರಮದ ಧ್ಯೇಯವಾಗಿದೆ.
ಪ್ರವೇಶಕ್ಕೆ ಅರ್ಜಿ ಹಾಕಲು ಇದು ಸೂಕ್ತ ಸಮಯ! ನಿಮ್ಮ ವೈದ್ಯಕೀಯ ಕನಸುಗಳಿಗೆ ದಾರಿ ಇಲ್ಲಿ ಪ್ರಾರಂಭವಾಗುತ್ತದೆ.
Parishrama NEET Academy & PU College– where dreams meet direction.












Comments