top of page

10-12ನೇ ತರಗತಿ ಓದಿ, ಸಾವಿರಾರು ಕೋಟಿ ಆಸ್ತಿ ಮಾಡಿರೋ ನೀವೇ ಅದೃಷ್ಟವಂತರು!' ಪ್ರಿಯಾಂಕ್ ಖರ್ಗೆಗೆ ಪ್ರತಾಪ್ ಸಿಂಹ ತಿರುಗೇಟು

  • Writer: Ananthamurthy m Hegde
    Ananthamurthy m Hegde
  • Jul 8
  • 2 min read
ree

ದಾವಣಗೆರೆ: ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ನಡುವಿನ ವಾಕ್ಸಮರ ಮುಂದುವರೆದಿದೆ. ಆರ್‌ಎಸ್‌ಎಸ್‌ ಮೇಲಿನ ನಿಷೇಧ ತೆರವು ಮಾಡಿದ್ದೇ ತಪ್ಪಾಯ್ತು. ಮುಂದೆ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ್ರೆ ಆರ್‌ಎಸ್‌ಎಸ್‌ ನಿಷೇಧಿಸೋ ಬಗ್ಗೆ ಚಿಂತನೆ ಮಾಡ್ತೀವಿ ಅಂತ ಪ್ರಿಯಾಂಕ್ ಖರ್ಗೆ ಹೇಳಿದ್ದರು. ಅದಕ್ಕೆ ಟಾಂಗ್ ಕೊಟ್ಟಿದ್ದ ಪ್ರತಾಪ್ ಸಿಂಹ, ಅಯ್ಯೋ ಪ್ರಿಯಾಂಕಾ, ನೀವು ಯಾರ ಮಗಳ ಹೆಸರಿಟ್ಟುಕೊಂಡಿದ್ದೀರಾ ಆ ರಾಜೀವ್ ಗಾಂಧಿ ಕೈಯಲ್ಲೇ RSS ಬ್ಯಾನ್ ಮಾಡಲಾಗಲಿಲ್ಲ ಅಂತ ಹೇಳಿದ್ದರು. ಇದಕ್ಕೆ ಕೆರಳಿದ್ದ ಪ್ರಿಯಾಂಕ್ ಖರ್ಗೆ, ಹೆಸರಿಟ್ಟುಕೊಂಡ ಮಾತ್ರಕ್ಕೆ ನರಿಗಳು ಸಿಂಹ ಆಗಲ್ಲ ಅಂತ ಟೀಕಿಸಿದ್ದರು. ಇದೀಗ ಪ್ರಿಯಾಂಕ್ ಖರ್ಗೆ ಮಾತಿಗೆ ಪ್ರತಾಪ್ ಸಿಂಹ ಕೌಂಟರ್ ಕೊಟ್ಟಿದ್ದಾರೆ. ದಾವಣಗೆರೆಯಲ್ಲಿಮಾತನಾಡಿದ ಅವರು, ನನ್ನ ಬೈದ್ರೆ ನಿಮಗೆ ಅಷ್ಟು ಖುಷಿ ಸಿಗುತ್ತೆ ಅಂದ್ರೆ ಅದಕ್ಕೆ ಕಲ್ಲು ಹಾಕಲ್ಲ ಎಂದಿದ್ದಾರೆ.

ಪ್ರಿಯಾಂಕ್ ಖರ್ಗೆ ಸಾಹೇಬ್ರೇ, ನನ್ನ ಬೈಯ್ರಿ!

ಪ್ರಿಯಾಂಕ್ ಖರ್ಗೆ ಸಾಹೇಬ್ರೇ, ನೀವು ನನ್ನನ್ನು ಯಾವುದೇ ಪ್ರಾಣಿಗೆ ಹೋಲಿಸಿ, ನಿಮ್ಮ ಪದಕೋಶದಲ್ಲಿದ್ದ ಅಷ್ಟು ಪದ ಬಳಸಿ ನನ್ನ ಬೈಯ್ರಿ, ಪ್ರತಿ ನಿತ್ಯ ಆರ್‌ಎಸ್‌ಎಸ್, ಬಿಜೆಪಿ ವಿರುದ್ಧ ಮಾತನಾಡ್ತೀರಿ. ಪ್ರತಾಪ್ ಸಿಂಹಗೂ ಬೈಯ್ರಿ, ನನ್ನ ನಿಂದಿಸಿ. ಡಿಪಾರ್ಟ್ಮೆಂಟ್ ಏಜೆನ್ಸಿಗಳನ್ನು ಮಾಡಿದ್ದೀರಿ. ನನ್ನ ಬೈದ್ರೆ ನಿಮಗೆ ಅಷ್ಟು ಖುಷಿ ಸಿಗುತ್ತೆ ಅಂದ್ರೆ ಅದಕ್ಕೆ ನಾನು ಕಲ್ಲು ಹಾಕಲ್ಲ ಅಂತ ಪ್ರತಾಪ್ ಸಿಂಹ ಹೇಳಿದ್ದಾರೆ.

ಸರ್ ನಿಮ್ಮ ಇಲಾಖೆ ಸಾಧನೆ ಬಗ್ಗೆ ಮಾತನಾಡಿ

ಸರ್, ನಿರುದ್ಯೋಗ ಭತ್ಯೆ ಕೊಡ್ತೀನಿ ಅಂತಾ ಅಧಿಕಾರಕ್ಕೆ ಬಂದ್ರಿ. ಎರಡು ವರ್ಷ ಆದರೂ ಯುವನಿಧಿ ಜಾರಿ ಆಗಲಿಲ್ಲ. ಒಂದೂವರೆ ಲಕ್ಷ ಇಂಜಿನಿಯರಿಂಗ್ ಗ್ರಾಜ್ಯೂಯಟ್ಸ್ ಪ್ರತಿ ವರ್ಷ ಬರ್ತಿದ್ದಾರೆ. ಇಂಜಿನಿಯರಿಂಗ್ ಮುಗಿಸಿದವರು ಆರ್ಟ್ಸ್ ಕಲಿತವರ ರೀತಿ ಪರಿಸ್ಥಿತಿ ಬಂದಿದೆ ಅಂತ ಪ್ರತಾಪ್ ಸಿಂಹ ಆರೋಪಿಸಿದ್ರು. ಸರ್, ನಿಮ್ಮ ಇಲಾಖೆಯ ಬಗ್ಗೆ ಮಾತನಾಡಿ, ನಿಮ್ಮ ಇಲಾಖೆ ಸಾಧನೆ ಬಗ್ಗೆ ಮಾತನಾಡಿ ಅಂತ ಪ್ರಿಯಾಂಕ್ ಖರ್ಗೆ ಕಾಲೆಳೆದಿದ್ದಾರೆ.

ನಿಮ್ಮಂತ ಅದೃಷ್ಟವಂತರು ಯಾರೂ ಇಲ್ಲ

ಸರ್ ನಿಮ್ಮ ರೀತಿಯ ಅದೃಷ್ಟವಶಂತರು ಯಾರೂ ಇರಲ್ಲ ಸರ್. ಹತ್ತು, ಹನ್ನೆರಡನೇ ತರಗತಿ ಓದಿ ಸಾವಿರಾರು ಕೋಟಿ ಆಸ್ತಿ, ಒಂದೇ ಸಂಖ್ಯೆಯ ಹತ್ತಾರು ಕಾರು ಖರೀದಿಸುವ ಶಕ್ತಿ ಎಲ್ಲರಿಗೂ ಸಿಗಲ್ಲ ಸರ್ ಅಂತ ಪ್ರತಾಪ್ ಸಿಂಹ ತಿರುಗೇಟು ಕೊಟ್ಟಿದ್ದಾರೆ. ಬಡವರಿಗೆ ಬದುಕಲು ದಾರಿ ಮಾಡಿಕೊಡಿ, ನನ್ನ ದಿನಾಲೂ ಬೈಯ್ರಿ, ಆದ್ರೆ ನಮ್ಮ ಹುಡುಗರಿಗೆ ಕೆಲಸ ಕೊಡಿ ಅಂತ ಪ್ರತಾಪ್ ಸಿಂಹ ಹೇಳಿದ್ದಾರೆ.

ನೀವೇ KIADB ಭೂಮಿ ಹೊಡಿಬೇಡಿ ಸರ್

ಸಿದ್ದಾರ್ಥ, ಬುದ್ಧ ಅಂತಾ ಟ್ರಸ್ಟ್ ಮಾಡಿ ನೀವೇ KIADB ಭೂಮಿ ಹೊಡಿಬೇಡಿ ಸರ್. ಕಂಪನಿಗಳಿಗೆ ಕೆಐಎಡಿಬಿ ಭೂಮಿ ಕೊಡಿಸಿ, ವಿದ್ಯಾವಂತ ಯುವಕರಿಗೆ ಕೆಲಸ ಕೊಡುವ ಹಾಗೇ ಮಾಡಿ ಸರ್ ಅಂತ ಪ್ರತಾಪ್ ಸಿಂಹ ಪ್ರಿಯಾಂಕ್ ಖರ್ಗೆಗೆ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.

ಶಾಮನೂರು ಕುಟುಂಬಸ್ಥರ ವಿರುದ್ಧ ಕಿಡಿ

ಇನ್ನು ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಕುಟುಂಬದ ವಿರುದ್ಧ ಆಕ್ರೋಶ ಹೊರ ಹಾಕಿದ ಪ್ರತಾಪ್ ಸಿಂಹ, ನಿಮ್ಮ ಮಾವನವರು ಮುಖ್ಯಮಂತ್ರಿ ಆಗಬೇಕು ಅಂತ ಕನಸು ಕಾಣ್ತಿದ್ದಾರೆ. ಆದ್ರೆ ದಾವಣಗೆರೆಗೆ ಏನಾದ್ರೂ ಕೆಲಸ ಆಯ್ತಾ? ಯಾವುದೇ ಕೆಲಸ ಆಗ್ತಿಲ್ಲ ಅಂತ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ವಿರುದ್ಧ ವಾಗ್ದಾಳಿ ನಡೆಸಿದ್ರು.

ಅನ್ಯ ಪಕ್ಷದವರ ಜೊತೆ ಹೋಗಿ ಅಡ್ಜಸ್ಟ್‌ಮೆಂಟ್

ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರೇ, ‌ನಿಮ್ಮನ್ಮು ಕೇಳಲು ಬಯಸುವೆ. ನೀವು ಏನು ಮಾಡಬೇಡಿ, ನಿಮ್ಮ ಮಾವನವರು ಇದ್ದಾರೆ  ಅವರ ಆಶೀರ್ವಾದ ಇದೆ. ನಿಮ್ಮ ಮಾವನವರು ಅನ್ಯ ಪಕ್ಷದವರ ಜೊತೆ ಹೋಗಿ ಅಡ್ಜಸ್ಟ್‌ಮೆಂಟ್ ಮಾಡಿ ನಿಮ್ಮನ್ನು ಎಂಪಿ ಮಾಡಿಬಿಟ್ರು. ಸಭೆ ಸಮಾರಂಭಗಳಲ್ಲಿ ಪರದೆ ಹಿಂದೆ ಹೋಗಿ ಥ್ಯಾಂಕ್ ಯೂ ಸೋ ಮಚ್ ಅಂತೀರಿ. ಒಂದು ಹುಲಿಯನ್ನೇ ಹೊಡೆದು ನನ್ನ ಗೆಲ್ಲಿಸಿದ್ರಿ ಅಂತೀರಿ ಅಂತ ಪ್ರತಾಪ್ ಸಿಂಹ ಹೇಳಿದ್ರು. ಇಲ್ಲಿ ಕೇ

ಅಮಿತ್ ಶಾ ನಿಮ್ಮನ್ನು ಚಾಲಾಕಿ ಎಂದಿದ್ರು

ಪ್ರಭಾ ಮಲ್ಲಿಕಾರ್ಜುನ ಅವರೇ, ಅಮಿತ್ ಶಾ ನಿಮ್ಮನ್ನು ಹೊಗಳಿದ್ದರು ಅಂತೀರಿ. ಅಮಿತ್ ಶಾ ನಿಮ್ಮನ್ನು ಹೊಗಳಲಿಲ್ಲ, ಬಹಳ ಚಾಲಾಕಿ ಅಂದ್ರು. ಯಾವ ಪಕ್ಷದವರ ಜೊತೆ ಅಡ್ಜಸ್ಟ್‌ಮೆಂಟ್ ಮಾಡಿ ಗೆಲ್ಲುತ್ತೀರಿ ಅಂತ ನಿಮ್ಮ ಚಾಲಾಕಿತನ ಬಗ್ಗೆ ಹೇಳಿದ್ರು ಅಂತ ಪ್ರತಾಪ್ ಸಿಂಹ ಟೀಕಿಸಿದ್ರು.

Comments


Top Stories

bottom of page