top of page
ಉತ್ತರ ಕನ್ನಡ


CSKಗೆ ದೊಡ್ಡ ಆಘಾತ; ಭರ್ಜರಿ ಫಾರ್ಮ್ ನಲ್ಲಿರುವ ಆಯುಷ್ ಮ್ಹಾತ್ರೆಗೆ ಗಾಯ; ಈಗ ಸೀಸನ್ ನಿಂದಲೇ ಔಟ್!
ಚೆನ್ನೈ: ಈಗಾಗಲೇ ಮಹೇಂದ್ರ ಸಿಂಗ್ ಧೋನಿ ಅವರು ಅಲಭ್ಯರಾಗಿರುವುದರಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಐಪಿಎಲ್ 2026ರ ಸೀಸನ್ ನ ಆರಂಭದಿಂದಂಲೂ ಭರ್ಜರಿ ಫಾರ್ಮ್ನಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಯುವ ಬ್ಯಾಟರ್ ಆಯುಷ್ ಮ್ಹಾತ್ರೆ ಅವರು ಗಾಯದ ಕಾರಣದಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ. ಅವರು ಈ ಸೀಸನ್ ನಲ್ಲಿ ಉಳಿದ ಪಂದ್ಯಗಳನ್ನು ಆಡಲು ಲಭ್ಯವಿಲ್ಲ ಎಂದು ಫ್ರಾಂಚೈಸಿಯು ಅಧಿಕೃತವಾಗಿ ತಿಳಿಸಿದ್ದು ಇದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಏಪ್ರಿಲ್ 18 ರಂದು ಹೈದರಾಬಾದ್ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ
Apr 211 min read


ದೆಹಲಿಯಲ್ಲಿ ಗ್ರೆನೇಡ್ ದಾಳಿಗೆ ಸಂಚು: ಇಬ್ಬರು ISI ಕಾರ್ಯಕರ್ತರ ಬಂಧನ
ನವದೆಹಲಿ: ಪಾಕಿಸ್ತಾನ ಮೂಲದ ದರೋಡೆಕೋರ ಮತ್ತು ಐಎಸ್ಐ ವಕ್ತಾರ ಶಹಜಾದ್ ಭಟ್ಟಿ ಸೂಚನೆಯಂತೆ ಕೆಲಸ ಮಾಡುತ್ತಿದ್ದ ಇಬ್ಬರು ಭಾರತೀಯ ಐಎಸ್ಐ ಕಾರ್ಯಕರ್ತರನ್ನು ದೆಹಲಿ ಪೊಲೀಸರ ವಿಶೇಷ ತಂಡ ಮಂಗಳವಾರ ಬಂಧಿಸಿದೆ. ಬಂಧಿತ ಆರೋಪಿಗಳು ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಗುಂಡಿನ ದಾಳಿ, ಗ್ರೆನೇಡ್ ದಾಳಿ ಮತ್ತು ಟಾರ್ಗೆಟೆಡ್ ಹತ್ಯೆಗಳನ್ನು ನಡೆಸಲು ಸಂಚು ರೂಪಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮಧ್ಯಪ್ರದೇಶದ ಗ್ವಾಲಿಯರ್ ಮೂಲದ ರಾಜ್ವೀರ್ (21) ಮತ್ತು ವಿವೇಕ್ ಬಂಜಾರ(19) ಎಂದು ಗುರುತಿಸಲಾಗಿದೆ. "ದೆಹಲಿ ಪೊಲೀಸರು ಇಬ್ಬರು ISI ಕಾರ್ಯಕರ್ತರನ್ನು ಬಂಧಿಸುವ ಮ
Apr 211 min read


ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ: ಸರ್ಕಾರದ ವಿರುದ್ಧ ಮುಗಿಬಿದ್ದ BJP, ಸಚಿವರ ಉತ್ತರ ಅಸಮರ್ಪಕ ಎಂದು ಸಭಾತ್ಯಾಗ
ಬೆಂಗಳೂರು : ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ, ವೈದ್ಯರ ಅಸಮರ್ಪಕ ವರ್ಗಾವಣೆ, ಖಾಲಿ ಹುದ್ದೆಗಳ ಭರ್ತಿ ಮಾಡದಿರುವುದು ಸೇರಿ ಆರೋಗ್ಯ ಇಲಾಖೆಯಲ್ಲಿನ ದುರಾಡಳಿತ, ಅವ್ಯವಸ್ಥೆಗಳ ಕುರಿತು ಪ್ರತಿಪಕ್ಷಗಳು ಸರ್ಕಾರವನ್ನು ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡವು. ಸದಸ್ಯರ ಪ್ರಶ್ನೆ, ಆಕ್ಷೇಪ, ಆರೋಪಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಉತ್ತರ ನೀಡಿದರೂ, ಉತ್ತರ ಸಮರ್ಪಕವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ ಬೆಳವಣಿಗೆ ನಡೆಯಿತು. ಪ್ರತಿಪಕ್ಷ ಸದಸ್ಯರ ಮನವಿ ಮೇರೆಲೆ ನಿಯಮ 69ರ ಅಡಿ ಸಾರ್ವಜನಿಕ ಮಹತ್ವದ ವಿಷಯದಡಿ ಆರೋಗ್ಯ ಇಲಾಖೆಯಲ್ಲಿನ ಲೋ
Mar 182 min read


ಸಚಿವರಲ್ಲಿ ʼಒಳ್ಳೆ ಮಾತಿನʼ ಬಲ ತುಂಬಲು ಹೊಸ ಪದ್ಧತಿಗೆ ಮುಂದಾದ ಪ್ರಧಾನಿ!
ಪ್ರಧಾನಿ ನರೇಂದ್ರ ಮೋದಿಯವರು ಸೌತ್ ಬ್ಲಾಕ್ ನಲ್ಲಿರುವ ತಮ್ಮ ಹಳೆಯ ಪ್ರಧಾನಿ ಕಚೇರಿಯಿಂದ ಸದ್ಯ ನೂತನ ಸೇವಾತೀರ್ಥ ಭವನಕ್ಕೆ ಇತ್ತೀಚೆಗಷ್ಟೇ ಸ್ಥಳಾಂತರವಾಗಿದ್ದು, ಇಂದು ಐತಿಹಾಸಿಕ ಮೊದಲ ಕ್ಯಾಬಿನೆಟ್ ಮೀಟಿಂಗ್ ನಡೆಯಲಿದೆ. ಈ ಸಭೆಯನ್ನು ಕೇವಲ ಔಪಚಾರಿಕವಾಗಿ ಮಾತ್ರ ನಡೆಸದೆ ಇದನ್ನು ಇನ್ನಷ್ಟು ಸ್ಪೇಷಲ್ ಮಾಡಲು ಪ್ರಧಾನಿಗಳು ಒಳ್ಳೆ ಸುದ್ದಿ ಎಂಬ ವಿನೂತನ ಪದ್ದತಿಯನ್ನು ಪ್ರಾರಂಭಿಸಲು ಮುಂದಾಗಿದ್ದು, ಇದರಲ್ಲಿ ಎಲ್ಲಾ ಸಂಪುಟ ಸದಸ್ಯರು ಸಚಿವಾಲಯಕ್ಕೆ ಸಂಬಂಧಿಸಿದ ಔಪಚಾರಿಕ ವಿಚಾರಗಳ ಕುರಿತ ಒಳ್ಳೆ ಸುದ್ದಿ ಅಥವಾ ತಮ್ಮ ವೈಯಕ್ತಿಕ ವಿಚಾರದಲ್ಲಿ ಸ್ಪೂರ್ತಿದಾಯವಾಗುವ ಒಳ್ಳೆ ಸುದ್ದಿಗಳನ್ನು
Feb 242 min read


'ನಾಯಕತ್ವ ಬದಲಾವಣೆ ವಿಚಾರವಾಗಿ ಸಮಯ ಬಂದಾಗ ಸಿದ್ದರಾಮಯ್ಯನವರೇ ಮಾತನಾಡುತ್ತಾರೆ': ಡಿ ಕೆ ಶಿವಕುಮಾರ್
ನಾಯಕತ್ವ ವಿಚಾರವಾಗಿ ಸಿದ್ದರಾಮಯ್ಯ-ನನ್ನ ನಡುವೆ ಕದ್ದುಮುಚ್ಚಿ ಗುಟ್ಟಿನ ವ್ಯವಹಾರ ನಡೆದಿಲ್ಲ. ಸಮಯ ಬಂದಾಗ ಸಿದ್ದರಾಮಯ್ಯ ಅವರೇ ನಮ್ಮ ತೀರ್ಮಾನದ ಬಗ್ಗೆ ಜನರಿಗೆ ಸಂದೇಶ ನೀಡುತ್ತಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಾಯಕತ್ವ ವಿಚಾರದಲ್ಲಿ ನಾನು, ಸಿದ್ದರಾಮಯ್ಯ ಮತ್ತು ಹೈಕಮಾಂಡ್ ಎಲ್ಲರೂ ಸೇರಿ ತೆಗೆದುಕೊಂಡಿರುವ ತೀರ್ಮಾನ ಏನು ಎಂಬುದನ್ನು ಸಮಯ ಬಂದಾಗ ಸಿದ್ದರಾಮಯ್ಯ ಅವರೇ ತಿಳಿಸುತ್ತಾರೆ, ಈ ತೀರ್ಮಾನ ಕದ್ದುಮುಚ್ಚಿ ಮಾಡಿಕೊಂಡಿರುವ ಗುಟ್ಟಿನ ವ್ಯವಹಾರವೇನಲ್ಲ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. ‘ಬಾಲವು ನಾಯಿಯನ್ನು ಅಲ್ಲಾಡಿಸಲ
Feb 182 min read


ಬಾನಂಗಳಕ್ಕೆ ನೀಲಿಹಕ್ಕಿ ಹೊತ್ತೊಯ್ದ ಇಸ್ರೋ ಬಾಹುಬಲಿ ರಾಕೆಟ್; LVM3-M6 ಕಾರ್ಯಾಚರಣೆ ಡಿಟೇಲ್ಸ್
ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಭಾರತದ ಇಸ್ರೋ, ತನ್ನ ಬಾಹ್ಯಾಕಾಶ ಸಾಧನೆಗೆ ಮತ್ತೊಂದು ಗರಿಯನ್ನು ಸೇರಿಸಿಕೊಂಡಿದೆ. ಅಮೆರಿಕದ AST ಸ್ಪೇಸ್ಮೊಬೈಲ್ ಸಂಸ್ಥೆಯ ಬ್ಲೂಬರ್ಡ್ ಬ್ಲಾಕ್-2 ಉಪಗ್ರಹವನ್ನು, ಇಸ್ರೋದ LVM-M6 ಬಾಹುಬಲಿ ರಾಕೆಟ್ ಯಶಸ್ವಿಯಾಗಿ ಕಡಿಮೆ ಭೂಕಕ್ಷೆಗೆ ಸೇರಿಸಿದೆ. ಇಸ್ರೋ ಇದೇ ಮೊದಲ ಬಾರಿಗೆ ಅತಿದೊಡ್ಡ ವಾಣಿಜ್ಯ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಕಾರ್ಯಾಚರಣೆಯ ಮಹತ್ವವೇನು? ದೂರಸಂಪರ್ಕ ಕ್ಷೇತ್ರದಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ? ಇಲ್ಲಿದೆ ಮಾಹಿತಿ. ಶ್ರೀಹರಿಕೋಟ: ಭಾರತದ ಬಾಹ್ಯಾಕಾಶ ಪ್ರಾಬಲ್ಯಕ್ಕೆ ಮುನ್ನುಡಿ
Dec 24, 20252 min read


ಏನ್ರೀ .. ಒಂದು ಘಟನೆಯಾದ ತಕ್ಷಣವೇ ಏನೋ ಆಗೋಗಿಬಿಡ್ತಾ! ಬೆಂಗಳೂರು ದರೋಡೆ ಬಗ್ಗೆ ಸಚಿವರ ಲಘು ಹೇಳಿಕೆ
ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ರಾಬರಿ ಪ್ರಕರಣದ ಕುರಿತು ಹಲವು ಪ್ರತಿಕ್ರಿಯೆಗಳು ಈಗಾಗಲೇ ಕೇಳಿ ಬರುತ್ತಿವೆ. ಕಾಂಗ್ರಸ್ ನ ಸಚಿವರೊಬ್ಬರು ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಮಾಧ್ಯಮದ ನೀಡಿದ ಹೇಳಿಕೆ ಭಾರಿ ಟೀಕೆಗೆ ಗ್ರಾಸವಾಗುವಂತಿದೆ. ಈ ಘಟನೆ ಕುರಿತು ಬೆಂಗಳೂರಿನಲ್ಲಿ ಗುರುವಾರ ಪ್ರತಿಕ್ರಿಯೆ ನೀಡಿದ ಸಚಿವ ಡಾ. ಎಚ್ ಸಿ ಮಹಾದೇವಪ್ಪ ಬೆಂಗಳೂರು ದರೋಡೆ ಪ್ರಕರಣದ ಬಗ್ಗೆ ಸರ್ಕಾರವನ್ನು ಸಮರ್ಥಿಸುವ ಭರದಲ್ಲಿ ಏನ್ರೀ .. ಒಂದು ಘಟನೆಯಾದ ತಕ್ಷಣವೇ ಏನೋ ಆಗೋಗಿ ಬಿಡ್ತಾ! ಎಂದು ಮಾಧ್ಯಮವನ್ನೇ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಹಾಡು ಹಗಲೇ ಎಟಿಎಂಗೆ ಹಣ ಸಾಗಿಸುವ ವಾಹನವ
Nov 20, 20251 min read


ಸೊಸೈಟಿ ಬಲವರ್ಧನೆಗೆ ಕೇಂದ್ರದ ಮಹತ್ವದ ಕ್ರಮ : 3 ಬೆಳೆಗಳ ಕಮಿಷನ್ ಹೆಚ್ಚಳ - ಯಾವ ಬೆಳೆಗಳಿಗೆ?
ಹೊಸದಿಲ್ಲಿ : ಕೇಂದ್ರ ಸರ್ಕಾರ, ಪಡಿತರ ಧಾನ್ಯಗಳಾದ ರಾಗಿ, ಜೋಳ ಮತ್ತು ಮೆಕ್ಕೆಜೋಳದ ಕಮಿಷನ್ ಅನ್ನು ಸಮಾಂತರವಾಗಿ 27 ರೂಪಾಯಿ ಹೆಚ್ಚಿಸಿ ಸೊಸೈಟಿಗಳ ಬಲವರ್ಧನೆಗೆ ಕ್ರಮ ಕೈಗೊಂಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ (DFPD) ರಚಿಸಿದ ಸಮಿತಿಯು ಪಡಿತರ ಧಾನ್ಯಗಳ ಕಮಿಷನ್ ಪರಿಷ್ಕರಣೆಗೆ ಶಿಫಾರಸ್ಸು ಮಾಡಿತ್ತು. ಅದರನ್ವಯ ಪ್ರಧಾನಿ ನರೇಂದ್ರ ಮೋದಿ ಅವರು ಸೊಸೈಟಿಗಳ ಬಲವರ್ಧನೆ ಮತ್ತು ರೈತರಿಗೂ ಹೆಚ್ಚಿನ ಅನುಕೂಲ ವಾಗುವಂತೆ ಈ ಪಡಿತರ ಧಾನ್ಯಗಳ ಕಮಿಷನ್ ಅನ್ನು ಪರಿಷ್ಕರಿಸಿ ದೇಶದ ಪಡಿತರ ವ್ಯವಸ್ಥ
Nov 20, 20252 min read


ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ಪ್ರತಿ ವರ್ಷ ಐವರಿಗೆ ಪ್ರಶಸ್ತಿ, ಸಿದ್ದರಾಮಯ್ಯ ಘೋಷಣೆ
ಬೆಂಗಳೂರು: ಪರಿಸರಪ್ರೇಮಿ ಸಾಲುಮರದ ತಿಮ್ಮಕ್ಕ ನ ಹೆಸರಿನಲ್ಲಿ ಪ್ರತಿ ವರ್ಷ ಕನಿಷ್ಠ ಐವರು ಪರಿಸರವಾದಿಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು. ನಗರದ ಅರಮನೆ ಮೈದಾನದಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. '' ತಿಮ್ಮಕ್ಕನ ಹೆಸರಿನಲ್ಲಿ ಪ್ರಶಸ್ತಿ ನೀಡುವ ಉದ್ದೇಶದಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಒಂದು ಕೋಟಿ ರೂ. ದತ್ತಿ ನಿಧಿ ಸ್ಥಾಪಿಸಿ ಠೇವಣಿಯಿಂದ ಬಡ್ಡಿ ಮೊತ್ತದಲ್ಲಿ ಪ್ರತಿ ವರ್ಷವೂ ಐವರಿಗೆ ಪ್ರಶಸ್ತಿ ನೀಡಲಾಗುವುದು,'' ಎಂದರು. ''ನ
Nov 20, 20251 min read


ಭಾರತದ ಬತ್ತಳಿಕೆಗೆ ಅಮೆರಿಕ ಅಸ್ತ್ರ; ಜಾವೆಲಿನ್ ಕ್ಷಿಪಣಿ, ಎಕ್ಸ್ಕ್ಯಾಲಿಬರ್ ಪ್ರೊಜೆಕ್ಟೈಲ್ ಪೂರೈಕೆಗೆ ಒಪ್ಪಂದ
ಭಾರತದ ರ ಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲ ಪಡಿಸುವ ನಿಟ್ಟಿನಲ್ಲಿ, ಅಮೆರಿಕವು ಸುಮಾರು 93 ದಶಲಕ್ಷ ಡಾಲರ್ (ಅಂದಾಜು 825 ಕೋಟಿ ರೂ.) ಮೌಲ್ಯದ ಜಾವೆಲಿನ್ ಕ್ಷಿಪಣಿ ವ್ಯವಸ್ಥೆ ಮತ್ತು ಎಕ್ಸ್ಕ್ಯಾಲಿಬರ್ ಪ್ರೊಜೆಕ್ಟೈಲ್ಗಳ ಮಾರಾಟಕ್ಕೆ ಅನುಮೋದನೆ ನೀಡಿದೆ. ಅಮೆರಿಕದ ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ (ಡಿಎಸ್ಸಿಎ) ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಅಮೆರಿಕದ ಸಂಸತ್ತಿಗೆ (ಕಾಂಗ್ರೆಸ್) ಅಗತ್ಯವಿರುವ ಪ್ರಮಾಣೀಕರಣವನ್ನು ಸಲ್ಲಿಸಿದೆ ಎಂದು ತಿಳಿಸಿದೆ. ಈ ಪ್ರಸ್ತಾವಿತ ಮಾರಾಟವು ಅಮೆರಿಕ ಮತ್ತು ಭಾರತದ ನಡುವಿನ ಆಯಕಟ್ಟಿನ ಪಾಲುದಾರಿಕೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಡಿಸೆಸ್ಸ
Nov 20, 20251 min read


ಡ್ರೆಸ್ಸಿಂಗ್ ರೂಮ್ ನಲ್ಲಿ 'ಜೆಮಿಮಾ' ಗೆ ಭರ್ಜರಿ ಸ್ವಾಗತ;
ನವದೆಹಲಿ: ನವಿ ಮುಂಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಸೆಮಿಫೈನಲ್ನಲ್ಲಿ ಜೆಮಿಮಾ ರೊಡ್ರಿಗಸ್ ಅವರ ಭರ್ಜರಿ ಶತಕದ ನೆರವಿನಿಂದ ಭಾರತದ ಮಹಿಳೆಯರ ತಂಡ ವಿಶ್ವಕಪ್ ಫೈನಲ್ಗೆ ಲಗ್ಗೆ ಇಟ್ಟಿತು. ಜೆಮಿಮಾ 134 ಎಸೆತಗಳಲ್ಲಿ ಅಜೇಯ 127 ರನ್ ಗಳಿಸುವುದರೊಂದಿಗೆ ಇನ್ನೂ ಒಂಬತ್ತು ಎಸೆತಗಳು ಬಾಕಿ ಇರುವಂತೆಯೇ ಭಾರತ ಗೆಲುವು ಸಾಧಿಸಿತು. ಮಹಿಳಾ ಏಕದಿನ ಇತಿಹಾಸದಲ್ಲಿ ಇದು ಭಾರತದ ಅತಿದೊಡ್ಡ ಚೇಸಿಂಗ್ ಆಗಿದೆ. ಭಾನುವಾರ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾದೊಂದಿಗೆ ಪ್ರಶಸ್ತಿಗಾಗಿ ಭಾರತ ಸೆಣಸಾಟ ನಡೆಸಲಿದೆ. ಗೆಲುವಿನ ನಂತರ ಡ್ರೆಸ್ಸಿಂಗ್ ರೂಮ್ ನಲ್ಲಿ ರೋಡ್ರಿಗಸ್ ಗೆ ಭರ್ಜರಿ ಸ್ವಾಗತ ನೀಡಲಾ
Nov 2, 20251 min read


ಹಣೆಗೆ ಗನ್ ಇಟ್ಟು ಪಕ್ಷದಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲ: BJP ನಾಯಕ ಅಣ್ಣಾಮಲೈ ಸ್ಫೋಟಕ ಹೇಳಿಕೆ!
ಚೆನ್ನೈ: ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯ ಅಧ್ಯಕ್ಷ ಕೆ. ಅಣ್ಣಾಮಲೈ ಈಗ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ. ಪಕ್ಷದ ನಾಯಕತ್ವದ ನಿರಂತರ ನಿರ್ಲಕ್ಷ್ಯ ಮತ್ತು ಎಐಎಡಿಎಂಕೆ ಜೊತೆಗಿನ ವಿವಾದಾತ್ಮಕ ಮೈತ್ರಿಯ ನಡುವೆ, ಅವರು ತಮ್ಮ ತಾಳ್ಮೆಯ ಮಿತಿಯನ್ನು ತಲುಪಿದ್ದಾರೆಂದು ತೋರುತ್ತದೆ. "ನಾನು ಪಕ್ಷದಲ್ಲಿ ಉಳಿಯಲು ಬಯಸಿದರೆ, ನಾನು ಇರುತ್ತೇನೆ; ಇಲ್ಲದಿದ್ದರೆ ನಾನು ಕೃಷಿಗೆ ಮರಳುತ್ತೇನೆ. ಸಮಯ ಬಂದಾಗ, ನಾನು ಮಾತನಾಡುತ್ತೇನೆ. ಹಣೆಗೆ ಗನ್ ಇಟ್ಟು ಪಕ್ಷದಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೊಯಮತ್ತೂರಿನಲ್ಲಿ ಅಣ್ಣಾಮಲೈ ಹೇಳಿದ್ದಾರೆ. ರಾಜಕೀಯವು ಸ್ವಯಂ
Nov 2, 20251 min read
bottom of page
