top of page

46 ವರ್ಷಗಳ ಬಳಿಕ ತೆರೆದ ಮಂದಿರದಲ್ಲಿ 5 ಪುಷ್ಕರಣಿ, 19 ಬಾವಿಗಳು ಪತ್ತೆ!

  • Writer: Ananthamurthy m Hegde
    Ananthamurthy m Hegde
  • Dec 22, 2024
  • 1 min read
ree

ಲಖನೌ: ಕಳೆದ ತಿಂಗಳು ಶಾಹಿ ಜಾಮಾ ಮಸೀದಿ ಸಮೀಕ್ಷೆಗೆ ತಡೆಯೊಡ್ಡಿ ಮುಸ್ಲಿಮರು ನಡೆಸಿದ ಭಾರಿ ಹಿಂಸಾಚಾರದ ಬೆನ್ನಿಗೇ ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಸಂಭಾಲ್‌ನಲ್ಲಿ ತೆರೆಯಲಾಗಿರುವ ಶಿವ ಕಾರ್ತಿಕೇಯ ದೇವಸ್ಥಾನದಲ್ಲಿ(ಭಸ್ಮ ಶಂಕರ) ಪುರಾತತ್ವ ಇಲಾಖೆ ತಜ್ಞರಿಗೆ ದಿನಕ್ಕೊಂದು ಅಚ್ಚರಿ ಎದುರಾಗುತ್ತಿದೆ.

1978 ರಲ್ಲಿ ಕೋಮುಗಲಭೆ ಹಿನ್ನೆಲೆಯಲ್ಲಿ ಈ ಮಂದಿರ ಮುಚ್ಚಲಾಗಿತ್ತು. ಸದ್ಯ ಎಎಸ್‌ಐ ತಂಡವು ದೇವಸ್ಥಾನದ ಆವರಣದಲ್ಲಿ ನಡೆಸುತ್ತಿರುವ ಸಮೀಕ್ಷೆ ಸಂದರ್ಭದಲ್ಲಿ ಪಾರ್ವತಿ, ಲಕ್ಷ್ಮೀ, ಗಣೇಶ, ಹನುಮಂತ ದೇವರ ವಿಗ್ರಹಗಳು ಪತ್ತೆಯಾಗಿವೆ. ಇದರ ಜತೆಗೆ, ಎಎಸ್‌ಐ ತಂಡವು ಸಮೀಕ್ಷೆ ವೇಳೆ 19 ಪುರಾತನ ಬಾವಿಗಳನ್ನು ಪತ್ತೆಹಚ್ಚಿದೆ.

ಭದ್ರಕ್‌ ಆಶ್ರಮ್‌, ಸ್ವರ್ಗದೀಪ್‌, ಚಕ್ರಪಾಣಿ ಹಾಗೂ ಪುರಾತನ ಸ್ಮಶಾನ ಮಂದಿರದಲ್ಲಿ ಪುಷ್ಕರಣಿಗಳು ದೊರೆತಿವೆ. ನಾಲ್ವರು ಸದಸ್ಯರ ಪುರಾತತ್ವ ಇಲಾಖೆ ತಜ್ಞರ ತಂಡವು ಕಳೆದ ಎರಡು ದಿನಗಳಿಂದ ಸುಮಾರು 8-10 ಗಂಟೆಗಳ ಶಿವ-ಕಾರ್ತಿಕೇಯ ಮಂದಿರದ ಸುತ್ತಲಿನ 24 ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಪೆನ್ಸಿಯಾ ತಿಳಿಸಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ ಅವರ ಸಂಕಲ್ಪದಿಂದಾಗಿ ದಶಕಗಳಿಂದ ಮುಚ್ಚಲಾಗಿದ್ದ ದೇವಸ್ಥಾನದಲ್ಲಿ ಮುಸ್ಲಿಮರು ಅತಿಕ್ರಮಣ ಮಾಡಿಕೊಂಡಿದ್ದರು ಎನ್ನುವುದನ್ನು ಎಎಸ್‌ಐ ತಂಡದ ಸಮೀಕ್ಷೆ ಇದನ್ನು ಸಾಬೀತುಪಡಿಸಿದೆ ಎಂದು ಉ.ಪ್ರ ಎಸ್‌ಸಿ/ಎಸ್‌ಟಿ ಆಯೋಗದ ಮಾಜಿ ಸದಸ್ಯೆ ಗೀತಾ ಪ್ರಧಾನ್‌ ತಿಳಿಸಿದ್ದಾರೆ.

ಸಂಭಲ್‌ನಲ್ಲಿನ ಕಲ್ಕಿ ವಿಷ್ಣು ಮಂದಿರಕ್ಕೆ ಎಎಸ್‌ಐ ತಂಡವು ಶನಿವಾರ ಭೇಟಿ ನೀಡಿತು. ''ಸ್ಕಂದ ಪುರಾಣದಲ್ಲಿ ಉಲ್ಲೇಖಿಸಲಾಗಿರುವ 'ಕ್ರಿಶ್‌ ಕೂಪ' ಪತ್ತೆಯಾಗಿದೆ. ಈ ಬಾವಿಯಲ್ಲಿ ಸದ್ಯಕ್ಕೆ ನೀರಿಲ್ಲ. ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸಂತೋಷ. ಮಹತ್ವ ಇತಿಹಾಸ ತೆರೆದುಕೊಳ್ಳುತ್ತಿದೆ,'' ಎಂದು ಮಂದಿರದ ಪ್ರಧಾನ ಅರ್ಚಕ ಮಹೇಂದ್ರ ಪ್ರಸಾದ್‌ ಶರ್ಮಾ ಹೇಳಿದ್ದಾರೆ.

Comments


Top Stories

bottom of page