top of page

HMPV ಕುರಿತು ಜಾಗೃತಿ ಹೆಚ್ಚಿಸಿ: ರಾಜ್ಯಗಳಿಗೆ ಕೇಂದ್ರ ಸಲಹೆ

  • Writer: Ananthamurthy m Hegde
    Ananthamurthy m Hegde
  • Jan 7
  • 1 min read
ree

ನವದೆಹಲಿ: ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ವಿರುದ್ಧ ತಡೆಗಟ್ಟುವ ಕ್ರಮಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿಯನ್ನು ಬಲಪಡಿಸಲು ರಾಜ್ಯಸರ್ಕಾರಗಳಿಗೆ ಸಲಹೆ ನೀಡಲಾಗಿದೆ. ಇನ್ಫ್ಲುಯೆನ್ಸ ತರಹದ ಅನಾರೋಗ್ಯ (ILI) ಮತ್ತು ತೀವ್ರ ಉಸಿರಾಟದ ಸೋಂಕಿನ ಬಗ್ಗೆ (SARI) ಕಣ್ಗಾವಲು ಬಲಪಡಿಸಲು ಸಲಹೆ ನೀಡಲಾಗಿದೆ.

ಜನರಲ್ಲಿ ಉಸಿರಾಟ ಸಂಬಂಧಿ ಕಾಯಿಲೆಗಳ ಪ್ರಸ್ತುತ ಪರಿಸ್ಥಿತಿ ಮತ್ತು ಚೀನಾ ದೇಶದಲ್ಲಿ ಎಚ್‌ಎಂಪಿವಿ ಪ್ರಕರಣಗಳ ಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಪುಣ್ಯ ಸಲಿಲಾ ಶ್ರೀವಾಸ್ತವ ಅವರು ಇತ್ತೀಚೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಡೆಸಿದ ವರ್ಚುವಲ್ ಸಭೆ ನಂತರ ಈ ನಿರ್ದೇಶನವನ್ನು ನೀಡಲಾಗಿದೆ.

ಸಭೆಯಲ್ಲಿ, ಇಲ್ಲಿಯವರೆಗೆ ಸಂಗ್ರಹಿಸಲಾದ ಮಾಹಿತಿಯು ದೇಶದಲ್ಲಿ ಎಲ್ಲಿಯೂ ILI/SARI ಪ್ರಕರಣಗಳಲ್ಲಿ ಯಾವುದೇ ಅಸಾಮಾನ್ಯ ಏರಿಕೆಯನ್ನು ಕಂಡಿಲ್ಲ ಎಂದು ಹೇಳಲಾಗಿದೆ. 2001 ರಿಂದ ಜಾಗತಿಕವಾಗಿ ಪ್ರಸ್ತುತವಾಗಿರುವ ಹೆಚ್ ಎಂಪಿವಿಯಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಿಲ್ಲ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಒತ್ತಿ ಹೇಳಿದರು. ILI/SARI ಕಣ್ಗಾವಲು ಬಲಪಡಿಸಲು ಮತ್ತು ಪರಿಶೀಲಿಸಲು ರಾಜ್ಯಗಳಿಗೆ ಸಲಹೆ ನೀಡಿದರು. ಉಸಿರಾಟದ ಕಾಯಿಲೆಗಳ ಹೆಚ್ಚಳವು ಸಾಮಾನ್ಯವಾಗಿ ಚಳಿಗಾಲದ ತಿಂಗಳುಗಳಲ್ಲಿ ಕಂಡುಬರುತ್ತದೆ ಎಂದು ಪುನರುಚ್ಚರಿಸಿದ ಸಚಿವಾಲಯವು ಉಸಿರಾಟದ ಸಂಬಂಧಿ ಕಾಯಿಲೆ ಪ್ರಕರಣಗಳಲ್ಲಿ ಯಾವುದೇ ಸಂಭಾವ್ಯ ಉಲ್ಬಣಕ್ಕೆ ದೇಶವು ಉತ್ತಮವಾಗಿ ಸಿದ್ಧವಾಗಿದೆ ಎಂದು ಹೇಳಿದೆ.

Comments


Top Stories

bottom of page