LPG ಸಿಲಿಂಡರ್ ಬೆಲೆ ಇಳಿಕೆ ಮಾಡಿದ ಸರ್ಕಾರ !
- Ananthamurthy m Hegde
- Jan 1
- 1 min read

ಹೊಸ ವರ್ಷಡಾ ಮೊದಲ ದಿನವೇ ಜೆನ್ ಸಾಮಾನಿರಿಗೆ ಸರ್ಕಾರ ಜುಗ್ ನ್ಯೂಸ್ ನೀಡಿದೆ. ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಸಿಲಿಂಡರ್ ದರವನ್ನು ಕಡಿಮೆ ಮಾಡಿವೆ. ಇಂದಿನಿಂದ ಅಂದರೆ ಜನವರಿ 1, 2025 ರಿಂದ ವಾಣಿಜ್ಯ ಸಿಲಿಂಡರ್ ಬೆಲೆ 14.50 ರೂಪಾಯಿ ಕಡಿಮೆಯಾಗಲಿದೆ. ಕಳೆದ ಬಾರಿ ಮಾರ್ಚ್ 1 ರಂದು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಲಾಗಿತ್ತು. ಸತತ 6 ತಿಂಗಳ ನಂತರ ವಾಣಿಜ್ಯ ಸಿಲಿಂಡರ್ ಬೆಳೆಯನ್ನು ಕಡಿಮೆ ಮಾಡಿದ್ದಾರೆ. ಜನವರಿ 1, 2025 ರಿಂದ ದೆಹಲಿಯಲ್ಲಿ 1804 ರೂ., ಮುಂಬೈನಲ್ಲಿ 1756 ರೂ., ಚೆನ್ನೈನಲ್ಲಿ 1966 ರೂ. ಮತ್ತು ಕೋಲ್ಕತ್ತಾದಲ್ಲಿ 1911 ರೂ.ಗೆ 19 ಕೆಜಿ ವಾಣಿಜ್ಯ ಸಿಲಿಂಡರ್ ಲಭ್ಯವಿರುತ್ತದೆ. ಈ ಹಿಂದೆ ದೆಹಲಿಯಲ್ಲಿ ಪ್ರತಿ ಸಿಲಿಂಡರ್ ದರ 1818.50 ರೂಪಾಯಿ ಆಗಿತ್ತು. ದೇಶೀಯ ಗ್ಯಾಸ್ ಸಿಲಿಂಡರ್ ದೆಹಲಿಯಲ್ಲಿ ₹ 803, ಕೋಲ್ಕತ್ತಾದಲ್ಲಿ ₹ 829, ಮುಂಬೈನಲ್ಲಿ ₹ 802.50 ಮತ್ತು ಚೆನ್ನೈನಲ್ಲಿ ₹ 818.50 ಕ್ಕೆ ಲಭ್ಯವಿರುತ್ತದೆ. ಸರ್ಕಾರವು ಕೊನೆಯದಾಗಿ 2023ರ ಆಗಸ್ಟ್‌ನಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು ಸುಮಾರು 100 ರೂಪಾಯಿಯಷ್ಟು ಕಡಿಮೆ ಮಾಡಿತ್ತು. ಅಂದಿನಿಂದ ಅದರ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಈ ಹಿಂದೆ ಗೃಹಬಳಕೆ ಸಿಲಿಂಡರ್ ಬೆಲೆ ಇಳಿಕೆ
ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಮಾರ್ಚ್ 2024ರಲ್ಲಿ ಕೊನೆಯದಾಗಿ 100 ರೂ.ಗಳಷ್ಟು ಕಡಿಮೆ ಮಾಡಲಾಗಿತ್ತು. ಮೊದಲು, ಕಂಪನಿಗಳು 30 ಆಗಸ್ಟ್ 2023 ರಂದು 200 ರೂಪಾಯಿಯಷ್ಟು ಕಡಿತ ಘೋಷಿಸಿದವು. ನಂತರ ಬೆಲೆ 903ಕ್ಕೆ ಇಳಿಕೆಯಾಗಿತ್ತು. ಇದಾದ ನಂತರ ಮತ್ತೆ ಮಾರ್ಚ್ 9, 2024 ರಂದು ಕಂಪನಿಗಳು ಅದರ ಬೆಲೆಯನ್ನು 100 ರೂಪಾಯಿ ಕಡಿಮೆಯಾಗಿತ್ತು.















Comments