top of page

ಈ ವರ್ಷ ಧರೆಗಿಳಿಯಲಿದ್ದಾರೆ ಸುನೀತಾ ವಿಲಿಯಮ್ಸ್ !

  • Writer: Ananthamurthy m Hegde
    Ananthamurthy m Hegde
  • Jan 1
  • 1 min read

ವಾಷಿಂಗ್ಟನ್‌: ಎಲ್ಲಅಂದುಕೊಂಡಂತೆ ನಡೆದರೆ ಸುನೀತಾ ವಿಲಿಯಮ್ಸ್‌ ಈ ವರ್ಷ ಧರೆಗಿಳಿಯಲಿದ್ದಾರೆ! ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) ಸಿಲುಕಿಕೊಂಡಿರುವ ಸುನೀತಾ ವಿಲಿಯಮ್ಸ್‌ ಮಾರ್ಚ್ ಅಥವಾ ಎಪ್ರಿಲ್‌ ತಿಂಗಳಿನಲ್ಲಿ ಭೂಮಿಗೆ ಮರಳುವ ನಿರೀಕ್ಷೆಯಿದೆ.

 ಭಾರತೀಯ ಮೂಲದ ನಾಸಾ ಗಗನಯಾನಿ ಸುನೀತಾ ಕಳೆದ ಜುಲೈನಲ್ಲೇ ಮರಳಬೇಕಿತ್ತು. ಆದರೆ, ಅವರ ಸ್ಟಾರ್‌ಲೈನರ್‌ ಅಂತರಿಕ್ಷ ನೌಕೆಯಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ಅವರು ಮತ್ತು ಸಹ ಗಗನಯಾನಿ ಬುಚ್‌ ವಿಲ್ಮೋರ್‌ ಐಎಸ್‌ಎಸ್‌ನಲ್ಲೇ ಉಳಿದುಕೊಳ್ಳುವಂತಾಗಿತ್ತು. ಅದರಿಂದಾಗಿ ಇಬ್ಬರನ್ನೂ ಕರೆತರಲು ಬದಲಿ ವ್ಯವಸ್ಥೆ ರೂಪಿಸಲಾಗಿದೆ. ನೂತನ ಯೋಜನೆಯಡಿ ನಾಸಾ ತನ್ನ ಗಗನಯಾನಿಗಳನ್ನು ಭೂಮಿಗೆ ಕರೆತರಲು ಮತ್ತೊಂದು ಖಾಸಗಿ ಬಾಹ್ಯಾಕಾಶ ಸಂಸ್ಥೆ, ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ ಒಡೆತನದ 'ಸ್ಪೇಸ್‌ಎಕ್ಸ್‌' ಜತೆ ಒಪ್ಪಂದ ಮಾಡಿಕೊಂಡಿದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ(ಐಎಸ್‌ಎಸ್‌) ಸಿಲುಕಿಕೊಂಡಿರುವ ಸುನೀತಾ ವಿಲಿಯಮ್ಸ್‌ ಮತ್ತು ಬುಚ್‌ ವಿಲ್ಮೋರ್‌ರನ್ನು 'ಕ್ರ್ಯೂ ಡ್ರಾಗನ್‌' ಅಂತರಿಕ್ಷ ನೌಕೆ ಭೂಮಿಗೆ ಹೊತ್ತು ತರಲಿದೆ. ಈ ನೌಕೆ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ ಒಡೆತನದ ಸ್ಪೇಸ್‌ಎಕ್ಸ್‌ ಸಂಸ್ಥೆಗೆ ಸೇರಿದೆ. ಗರಿಷ್ಠ 7 ಮಂದಿ ಗಗನಯಾನಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಇದಕ್ಕಿದೆ. ಆದರೆ, ಸಾಮಾನ್ಯವಾಗಿ ನಾಲ್ಕು ಗಗನಯಾನಿಗಳಿಗೆ ಸ್ಪೇಸ್‌ಎಕ್ಸ್‌ ಪ್ರಯಾಣದ ಅನುಮತಿ ನೀಡುತ್ತದೆ. ಸದ್ಯ ಇಬ್ಬರೂ ಗಗನಯಾನಿಗಳು ಕ್ರ್ಯೂ ಡ್ರ್ಯಾಗನ್‌ ಗಗನನೌಕೆಯ ಚಾಲನಾ ತರಬೇತಿಯಲ್ಲಿ ನಿರತರಾಗಿದ್ದಾರೆ. ಸುನೀತಾ ವಿಲಿಯಮ್ಸ್‌ ಸುರಕ್ಷಿತ ವಾಪಸಾತಿಯನ್ನು ಕಣ್ತುಂಬಿಕೊಳ್ಳಲು ಜಗತ್ತೇ ಕಾದಿದೆ.

210- ಅಂತರಿಕ್ಷದಲ್ಲಿ ಸುನೀತಾ ಇಲ್ಲಿಯವರೆಗೆ ಕಳೆದ ದಿನಗಳು

374- ರಷ್ಯನ್‌ ಗಗನಯಾನಿ ಒಲೆಗ್‌ ಮತ್ತು ನಿಕೊಲೈ ಐಎಸ್‌ಎಸ್‌ನಲ್ಲಿ ಕಳೆದಿರುವ ದಾಖಲೆಯ ದಿನಗಳು.

410 ಕಿ.ಮೀ- ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೂ ಭೂಮಿಗೂ ನಡುವಿನ ಅಂದಾಜು ಅಂತರ

4 ಗಂಟೆ- ಐಎಸ್‌ಎಸ್‌ನಿಂದ ಭೂಮಿಗೆ ಪಯಣಿಸಲು ತಗುಲುವ ಕನಿಷ್ಠ ಸಮಯ

16 ಸುತ್ತು- ದಿನವೊಂದಕ್ಕೆ ಐಎಸ್‌ಎಸ್‌ ಭೂಮಿ ಸುತ್ತ ಕೈಗೊಳ್ಳುವ ಪರಿಭ್ರಮಣ

ಅಲ್ಲಿಯ ತನಕ ಆಹಾರವೇನು?

ಭೂಮಿಯಿಂದ ನೂರಾರು ಕಿ.ಮೀ. ಮೇಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಆಕಸ್ಮಿಕವಾಗಿ ಸಿಲುಕಿಕೊಂಡಿರುವ ಸುನೀತಾರ ಆಹಾರ ಮತ್ತು ಇತರೆ ಅಗತ್ಯ ವಸ್ತುಗಳ ಕುರಿತು ಕುತೂಹಲ ಬರುವುದು ಸಹಜ. ಈಗಾಗಲೇ ಎರಡು ಬಾರಿ ಕಾರ್ಗೊ ಆಕಾಶನೌಕೆಗಳ ಸಹಾಯದಿಂದ ಅವರಿಬ್ಬರಿಗೂ ಬಾಹ್ಯಾಕಾಶ ಬಳಕೆ ವಿನ್ಯಾಸದಲ್ಲಿಆಹಾರ ಪದಾರ್ಥಗಳು, ಅಗತ್ಯ ವಸ್ತುಗಳನ್ನು ನಾಸಾ ಪೂರೈಕೆ ಮಾಡಿದೆ.

ಇನ್ನೊಂದೆಡೆ ಗಗನಯಾತ್ರಿಗಳು ಹೊಸವರ್ಷವನ್ನು ವಿಭಿನ್ನವಾಗಿ ಅನುಭವಿಸುತ್ತಿದ್ದು, ಇಂದು ಒಂದೇ ದಿನದಲ್ಲಿ 16 ಭಾರಿ ಸೂರ್ಯೋದಯ ಹಾಗೂ ಸೂರ್ಯಾಸ್ತವನ್ನು ನೋಡಲಿದ್ದಾರೆ.

Comments


Top Stories

bottom of page