ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತಲುಪಿದ ಶುಭಾಂಶು ಶುಕ್ಲಾ
- Ananthamurthy m Hegde
- Jun 26
- 1 min read

ಅಮೆರಿಕಾದಲ್ಲಿನ ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಇಪ್ಪತ್ತೆಂಟು ಗಂಟೆಗಳ ನಂತರ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಇತಿಹಾಸ ಸೃಷ್ಟಿಸಿದರು, ಗುರುವಾರ ಆಕ್ಸಿಯಮ್ -4 (ಆಕ್ಸ್ -4 / Axiom-4) ಮಿಷನ್ ಕಕ್ಷೆಯಲ್ಲಿರುವ ಪ್ರಯೋಗಾಲಯದೊಂದಿಗೆ ಯಶಸ್ವಿಯಾಗಿ ಡಾಕಂಗ್ ಆಗುತ್ತಿದ್ದಂತೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ ಭಾರತೀಯ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.
ಇಂದು ಪ್ರತಿಯೊಬ್ಬ ಭಾರತೀಯರೂ ತುಂಬಾ ಸಂತೋಷವಾಗಿದ್ದಾರೆ.
ಯಾಕೆಂದರೆ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳು ಜೂನ್ 26 ರ ಸಂಜೆ 4 ಗಂಟೆಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ್ದಾರೆ. 28 ಗಂಟೆಗಳ ಪ್ರಯಾಣದ ನಂತರ, ಎಲ್ಲಾ ಗಗನಯಾತ್ರಿಗಳು ISS ತಲುಪಿದ್ದಾರೆ. ಇದಕ್ಕೂ ಮೊದಲು ಅವರ ಆಗಮನದ ಸಮಯ ಸಂಜೆ 4:30 ಆಗಿತ್ತು. ಹಾಗಾಗಿ, ಇದು ಭಾರತೀಯರಿಗೆ ಹೆಮ್ಮೆಯ ಕ್ಷಣ. ಇದಕ್ಕೂ ಮೊದಲು, ಮಿಷನ್ ಸಿಬ್ಬಂದಿ ಬಾಹ್ಯಾಕಾಶ ನೌಕೆಯೊಂದಿಗೆ ನೇರ ಸಂಭಾಷಣೆ ನಡೆಸಿದರು. ಈ ಸಮಯದಲ್ಲಿ, ಶುಭಾಂಶು, “ಬಾಹ್ಯಾಕಾಶದಿಂದ ನಮಸ್ಕಾರ! ನನ್ನ ಸಹ ಗಗನಯಾತ್ರಿಗಳೊಂದಿಗೆ ಇಲ್ಲಿರಲು ನಾನು ತುಂಬಾ ಉತ್ಸುಕನಾಗಿದ್ದೇನೆ” ಎಂದರು.















Comments