top of page

ಅಯೋಧ್ಯೆಯಲ್ಲಿ ಡಿ.೨೨ ರಿಂದ ಶ್ರೀರಾಮ್ ಪ್ರೀಮಿಯರ್ ಕ್ರಿಕೆಟ್ ಲೀಗ್‌

  • Writer: Ananthamurthy m Hegde
    Ananthamurthy m Hegde
  • Dec 3, 2024
  • 1 min read

ree

ಅಯೋಧ್ಯೆ: ದೇವನಗರಿ ಎಂದು ಬಿಂಬಿತವಾಗಿರುವ ಅಯೋಧ್ಯಯಲ್ಲಿ ಡಿ.22 ರಂದು ನಡೆಯಲಿರುವ 'ಶ್ರೀ ರಾಮ್ ಪ್ರೀಮಿಯರ್ ಕ್ರಿಕೆಟ್ ಲೀಗ್‌'ನಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಂಡ ಸ್ಪರ್ಧಿಸುತ್ತಿದೆ. ತಂಡದಲ್ಲಿ ಅಯೋಧ್ಯೆಯ ರಾಮಮಂದಿರದ ಅರ್ಚಕರೂ ಇರಲಿದ್ದಾರೆ ಎಂದು ವರದಿಯಾಗಿದೆ.

''ಆಯೋಧ್ಯಯೆ ಖಾಸಗಿ ಕಾಲೇಜಿನ ಕ್ರಿಕೆಟ್ ಮೈದಾನದಲ್ಲಿ ಟೂರ್ನಮೆಂಟ್ ನಡೆಯಲಿದೆ. ನಾಲ್ಕು ತಂಡಗಳು ಭಾಗವಹಿಸುತ್ತಿದ್ದು, ಬೆಳಗ್ಗೆ 9 ಗಂಟೆಗೆ ಪಂದ್ಯಾವಳಿ ಆರಂಭವಾಗಲಿದೆ'' ಎಂದು ದೇವಸ್ಥಾನದ ಟ್ರಸ್ಟ್‌ನ ವಕ್ತಾರ ಓಂಕಾರ್ ಸಿಂಗ್ ತಿಳಿಸಿರುವುದು ವರದಿಯಾಗಿದೆ.

ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ಇದಾಗಿದ್ದು, ನಾಲ್ಕು ತಂಡಗಳು ಭಾಗವಹಿಸುತ್ತಿವೆ. ಲೀಗ್ ಹಂತದಲ್ಲಿ ಎರಡು ಪಂದ್ಯಗಳಿದ್ದು, 12 ಓವರ್‌ ಇರುತ್ತವೆ. ಫೈನಲ್ ಪಂದ್ಯದಲ್ಲಿ 15 ಓವರ್‌ ಇರಲಿದೆ ಎಂದು ಕೆನರಾ ಬ್ಯಾಂಕ್‌ನ ಅಯೋಧ್ಯೆ ಕಚೇರಿಯ ಡೆಪ್ಯುಟಿ ಜನರಲ್ ಮ್ಯಾನೇಜರ್ ವಿಕಾಶ್ ತಿಳಿಸಿದ್ದಾರೆ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಲಾರ್ಸೆನ್ & ಟೂಬ್ರೊ ಲಿಮಿಟೆಡ್(L&T),ಟಾಟಾ ಕನ್ಸಲ್ಟೆನ್ಸಿ, ಕೆನರಾ ಬ್ಯಾಂಕ್‌ ತಂಡಗಳು ಭಾಗಿಯಾಗಲಿದೆ .

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಿ ಮಂದಿನ ಜನವರಿ 22ಕ್ಕೆ 1 ವರ್ಷ ಪೂರೈಸಲಿದೆ. ಒಂದು ವರ್ಷದ ಸಮಾರಂಭವನ್ನು ಜ.11ರಂದು ಆಚರಿಸಲಾಗುತ್ತದೆ ಎಂದು ರಾಮಜನ್ಮಭೂಮಿ ಟ್ರಸ್ಟ್ ತಿಳಿಸಿದೆ. ಹಿಂದೂ ಧರ್ಮದ ಪ್ರಕಾರ ಹಬ್ಬಗಳನ್ನು ಹಿಂದೂ ಪಂಚಾಂಗಗಳ ದಿನಾಂಕದಂದೇ ಆಚರಿಸಲಾಗುತ್ತದೆ. ಪ್ರಾಣಪ್ರತಿಷ್ಠೆಯನ್ನು ಶುಕ್ಲ ಪಕ್ಷದ ದ್ವಾದಶಿ ದಿನ ನಡೆಸಲಾಗಿತ್ತು. ಹೀಗಾಗಿ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಜನವರಿ 22ರ ಬದಲಾಗಿ, ಜ.11ರಂದು ಆಚರಿಸಲಾಗುತ್ತದೆ ಎಂದು ಟ್ರಸ್ಟ್ ತಿಳಿಸಿದೆ.

ರಾಮ ಮಂದಿರದ ಪೂಜಾ ಕೈಂಕರ್ಯಗಳಿಗೆ ಸಂಬಂಧಿಸಿ ಕಳೆದ ಆರು ತಿಂಗಳಿಂದ ತರಬೇತಿ ಪಡೆದ ಅರ್ಚಕರನ್ನು ಶೀಘ್ರವೇ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ. ನೂತನವಾಗಿ ನಿಯೋಜನೆಗೊಳ್ಳುವ ಅರ್ಚಕರು ಧಾರ್ಮಿಕ ಸಮಿತಿಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅನಿಲ್ ಮಿಶ್ರಾ ತಿಳಿಸಿದ್ದಾರೆ.

ಪರಿಣತರಿಂದ ಒಟ್ಟು 20 ಅರ್ಚಕರಿಗೆ ಆರು ತಿಂಗಳ ತರಬೇತಿ ನೀಡಲಾಗಿದೆ. ರಾಮಮಂದಿರದೊಂದಿಗೆ ಆವರಣದಲ್ಲಿರುವ ಎಲ್ಲಾ 18 ದೇವಾಲಯಗಳಲ್ಲಿ ನಿಯೋಜನೆಗೊಳ್ಳುವ ಅರ್ಚಕರು ಸರತಿ ಪ್ರಕಾರ ಪೂಜೆ ನೇರವೇರಿಸಬೇಕಿದೆ. ಹೀಗೆ ಪೂಜೆ ಸಲ್ಲಿಸುವವರ ಮನೆಯಲ್ಲಿ ಜನನ ಹಾಗೂ ಮರಣ ಸಂಭವಿಸಿ ಅಶುದ್ಧರಾದಲ್ಲಿ, ಅವರು ದೇವಾಲಯದ ಆವರಣ ಪ್ರವೇಶಿಸುವಂತಿಲ್ಲ ಎಂದು ಮಿಶ್ರಾ ತಿಳಿಸಿದ್ದಾರೆ.

ಅರ್ಚಕರು ದೇವಾಲಯಕ್ಕೆ ಮೊಬೈಲ್ ಫೋನ್ ತರುವಂತಿಲ್ಲ. ಮುಖ್ಯವಾಗಿ ಆ್ಯಂಡ್ರಾಯ್ಡ್ ಫೋನ್ ಬಳಸುವಂತಿಲ್ಲ. ಅಗತ್ಯವಿದ್ದರೆ ಕೀಪ್ಯಾಡ್ ಹೊಂದಿರುವ ಸಾಮಾನ್ಯ ಫೋನ್ ಬಳಸಬೇಕು ಎಂಬ ನಿಯಮ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Comments


Top Stories

bottom of page