top of page

ಅಲ್ಪಸಂಖ್ಯಾತರಿಗೆ ಧರ್ಮಾಧಾರಿತ ಮೀಸಲಾತಿ ನೀಡಲು ಬಿಡಲ್ಲ, ಅಹೋರಾತ್ರಿ ಹೋರಾಟ: ಎಂಎಲ್‌ಸಿ ರವಿಕುಮಾರ್

  • Writer: Ananthamurthy m Hegde
    Ananthamurthy m Hegde
  • Mar 25
  • 1 min read

ಕೊಪ್ಪಳ : ' ಡಿಸಿಎಂ ಡಿ ಕೆ ಶಿವಕುಮಾರ್ ಅವರ ಸಂವಿಧಾನ ಬದಲಾವಣೆ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಡಿಕೆಶಿಯವರು ಸಂವಿಧಾನ ಬದಲಾಯಿಸುತ್ತೇವೆ' ಎಂದು ತಮ್ಮ ಮನಸಿನ ಮಾತು ಹೇಳಿದ್ದಾರೆ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷದ ಸಚೇತಕ ಎನ್ ರವಿಕುಮಾರ್ ಹೇಳಿದರು.

ಅವರು ಇಂದು ಕೊಪ್ಪಳದಲ್ಲಿ ಮಾತನಾಡಿ, ಡಿ ಕೆ ಶಿವಕುಮಾರ್ ಅವರು ಸಂವಿಧಾನ ಬದಲಾಯಿಸುತ್ತೇವೆ ಎಂದಿದ್ದಾರೆ. ಅಂಬೇಡ್ಕರ್ ಇರುವಾಗ ಧರ್ಮಾಧಾರಿತ ಮೀಸಲಾತಿಯನ್ನು ವಿರೋಧಿಸಿದ್ದರು. ಈಗ ಡಿ ಕೆ ಶಿವಕುಮಾರ್ ತಮ್ಮ ಮನಸಿನ ಮಾತನ್ನು ಹೇಳಿದ್ದಾರೆ ಎಂದರು.


ಕಾಂಗ್ರೆಸ್ ನವರು ಸಂವಿಧಾನ ವಿರೋಧಿಗಳು:

ಕಾಂಗ್ರೆಸ್ ನವರು ಸಂವಿಧಾನ ವಿರೋಧಿಯಾಗಿದ್ದಾರೆ. ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿ ನೀಡಲು ಬರುವುದಿಲ್ಲ. ಇದನ್ನು ಬದಲಾಯಿಸುತ್ತೇವೆ ಎಂದಿದ್ದಾರೆ. ಅಲ್ಪಸಂಖ್ಯಾತ ರಿಗೆ ಧರ್ಮಾಧರಿತ ಮೀಸಲಾತಿ ನೀಡಲು ಬಿಡುವುದಿಲ್ಲ. ಈ ಕುರಿತು ತೀವ್ರ ಹೋರಾಟ ಮಾಡುತ್ತೇವೆ. ಮುಸ್ಲಿಂ ಮತ ಹಾಗೂ ಓಲೈಸುವುದಕ್ಕಾಗಿ ತುಷ್ಠಿಕರಣದ ಪರಮೋಚ್ಛ ಸ್ಥಿತಿಗೆ ತಲುಪಿದ್ದಾರೆ. ಮುಸ್ಲಿಮರಲ್ಲಿ ಮಾತ್ರ ಬಡವರಿದ್ದಾರಾ? ಹಿಂದುಗಳಲ್ಲಿ ಬಡವರಿಲ್ಲವಾ? ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಮುಸ್ಲಿಮರಿಗೆ ಮಾತ್ರ ಮೀಸಲಾತಿ ನೀಡಲಿದ್ದಾರೆ ಎಂದರು.

ಈ ಕುರಿತು ಏಪ್ರಿಲ್ 1, 2 ಹಾಗೂ 3 ರಂದು ಹುಬ್ಬಳ್ಳಿ, ಕೊಪ್ಪಳ, ತುಮಕೂರು ಮೈಸೂರಿನಲ್ಲಿ ಅಹೋರಾತ್ರಿ ಹೋರಾಟ ಮಾಡುತ್ತಾರೆ. ವಿಜಯೇಂದ್ರ ಸೇರಿ ರಾಜ್ಯ ನಾಯಕರು ಹುಬ್ಬಳ್ಳಿ, ಕೊಪ್ಪಳ, ತುಮಕೂರು ಹಾಗೂ ಮೈಸೂರಿನಲ್ಲಿ ಭಾಗಿಯಾಗಲಿದ್ದಾರೆ. ಏಪ್ರಿಲ್ 2 ರಂದು ಕೊಪ್ಪಳದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ರಾಜ್ಯ ಸರಕಾರ ರೈತ ವಿರೋಧಿ ಸರಕಾರವಾಗಿದೆ. ವಿಧಾನಸೌಧದಲ್ಲಿ ಹೋರಾಟ ಮಾಡಿದ 18 ಜನ ಶಾಸಕರನ್ನು ಅಮಾನತ್ತು ಮಾಡಿದ್ದಾರೆ. ಒಂದು ರೀತಿ ಸರ್ವಾಧಿಕಾರಿ ಸರಕಾರವಾಗಿದೆ. ಯು ಟಿ ಖಾದರ್ ಅಮಾನತು ಮಾಡುತ್ತೇವೆ ಎಂದಿದ್ದಾರೆ. ಈ ರೀತಿ ದಭಾವಣೆಯನ್ನು ನಾವು ಸಹಿಸುವುದಿಲ್ಲ. ಈಗ ಬೀದಿಯಲ್ಲಿ ಹೋರಾಟ ಮಾಡುತ್ತೇವೆ. ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಇನ್ನೂ ಕಾನೂನಾತ್ಮಕ ಹೋರಾಟ ಮಾಡಿಲ್ಲ ಎಂದರು.

ಇಷ್ಟು ದಿನಗಳ ಕಾಲ ಸಿಎಂ ಖುರ್ಚಿಗಾಗಿ ನಡೆಯುತ್ತಿದೆ. ಹನಿಟ್ರಾಪ್, ಮನಿಟ್ರಾಪ್. ಸದನ ಟ್ರಾಪ್ ಮಾಡುತ್ತಾರೆ ಎಂದು ಟೀಕಿಸಿದರು.

ತೊಗರಿ ಬೆಳೆಗಾರರಿಗೆ ಪ್ಯಾಕೇಜ್ ನೀಡಬೇಕು:

800 ಕೋಟಿ ರೂಪಾಯಿಯನ್ನು ತೊಗರಿ ಬೆಳೆ ಹಾನಿಗೆ ನೀಡಬೇಕು.ಎಸ್ಸಿ ಎಸ್ಟಿ. ಒಬಿಸಿ ಸಮಾಜದವರ ಬಗ್ಗೆ ಕಾಳಜಿ ಇಲ್ಲ. ಎಸ್ಸಿಪಿ, ಟಿಎಸ್ಪಿ ಕಾಯ್ದೆ ತಂದಿದ್ದು ನಾವು ಎಂದು ಸಿದ್ದರಾಮಯ್ಯ ಹೇಳುತ್ತಾರೆ.ಆದರೆ ಗ್ಯಾರಂಟಿಗಾಗಿ ಈ ಹಣ ಬಳಕೆ ಮಾಡುತ್ತಿದ್ದಾರೆ. ದಲಿತರಿಗೆ ಇದ್ದ ಹಣ ಬಳಕೆ ಮಾಡಿದ್ದರ ಬಗ್ಗೆ ನಾಚಿಕೆ ಇದ್ದರೆ ಈ ಹಣ ವಾಪಸ್ಸು ನೀಡಬೇಕು ಎಂದರು.

Comments


Top Stories

bottom of page