ಕಾಂಗ್ರೆಸ್ ಸಂಸದನಿಗೆ ಮೀಸಲಿಟ್ಟ ಆಸನದಲ್ಲಿ ಹಣದ ಕಂತೆ ಪತ್ತೆ
- Ananthamurthy m Hegde
- Dec 6, 2024
- 1 min read

ಹೊಸದಿಲ್ಲಿ : ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದರಿಗೆ ನಿಗದಿಪಡಿಸಿದ ಆಸನದಲ್ಲಿ 500 ರೂ. ನೋಟುಗಳ ಕಂತೆ ಪತ್ತೆಯಾಗಿರುವ ಅಚ್ಚರಿ ಘಟನೆ ನಡೆದಿದೆ. ತೆಲಂಗಾಣದಿಂದ ಚುನಾಯಿತರಾಗಿರುವ ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಅವರಿಗೆ ಮೀಸಲಾಗಿದ್ದ ಸೀಟ್ ಸಂಖ್ಯೆ 222ರಲ್ಲಿ ನೋಟುಗಳ ಬಂಡಲ್ ಪತ್ತೆಯಾಗಿದೆ. ಇದು ಶುಕ್ರವಾರ ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಈ ಬಗ್ಗೆ ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರು ಸದನಕ್ಕೆ ಮಾಹಿತಿ ನೀಡಿ, ತನಿಖೆಗೆ ಆದೇಶಿಸಿದರು. ಆದರೆ, ಪ್ರತಿಪಕ್ಷಗಳು ಇದು ಬಿಜೆಪಿಯ ಪಿತೂರಿ ಎಂದು ಆರೋಪಿಸಿವೆ.ಸದನದಲ್ಲಿ ಪ್ರತಿ ದಿನ ಪರಿಶೀಲಿಸುವಂತೆ ಪರಿಶೀಲಿಸಿದಾಗ ದುಡ್ಡಿನ ಕಂತೆ ಸಿಕ್ಕಿದೆ ಎಂದು ಜಗದೀಪ್ ಧನಕರ್ ಹೇಳಿದರು. ಈ ವೇಳೆ ಮಾತನಾಡಿದ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಈಗ ತನಿಖೆ ನಡೆಯುತ್ತಿದೆ, ಯಾವುದೇ ಖಚಿತತೆ ಇಲ್ಲದಿರುವುದರಿಂದ ಸದಸ್ಯರ ಹೆಸರನ್ನು ಹೇಳಬೇಡಿ ಎಂದು ಹೇಳಿದರು. ಇದಕ್ಕೆ ಎನ್‌ಡಿಎ ಸಂಸದರಿಂದ ಭಾರೀ ವಿರೋಧ ವ್ಯಕ್ತವಾಯಿತು. ಅಭಿಷೇಕ್ ಮನು ಸಿಂಘ್ವಿ ಅವರು ಇದೆಲ್ಲಾ ಸುಳ್ಳು ಎಂದು ತಿಳಿಸಿದರು.
Comments