top of page

ಕುಂಭ ಮೇಳದಲ್ಲಿ ಭಕ್ತರಿಗೆ ಹೆಲಿಕ್ಯಾಪ್ಟರ್ ವ್ಯವಸ್ಥೆ

  • Writer: Ananthamurthy m Hegde
    Ananthamurthy m Hegde
  • Jan 13
  • 2 min read

ಪ್ರಯಾಗರಾಜ್: ಮಹಾಕುಂಭ ಆರಂಭಗೊಂಡಿದೆ. ಮೊದಲ ದಿನದ ಆರಂಭದಲ್ಲೇ 60ಲಕ್ಷಕ್ಕೂ ಹೆಚ್ಚು ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ಈ ಬಾರಿ 35 ರಿಂದ 40 ಕೋಟಿ ಭಕ್ತರು ಮಹಾಕುಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ವಿಶೇಷ ರೈಲು, ಸಾರಿಗೆ ಬಸ್, ಕ್ಯಾಬ್ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಇದರ ಜೊತೆೆಗೆ ಪ್ರಯಾಗರಾಜ್ ಮಹಾಕುಂಭಕ್ಕೆ ತಲುಪಲು ಹೆಲಿಕಾಪ್ಟರ್ ಸೇವೆ ಕೂಡ ಲಭ್ಯವಿದೆ. ಯೋಗಿ ಆದಿತ್ಯನಾಥ್ ಸರ್ಕಾರ ಮಹಾಕುಂಭಕ್ಕೆ ತಕ್ಕ ಸಮಯಕ್ಕೆ ತಲುಪಲು, ಟ್ರಾಫಿಕ್ ಜಾಮ್ ಸಮಸ್ಯೆಯಿಂದ ಮುಕ್ತವಾಗಿ ಪುಣ್ಯಸ್ನಾನ ಮಾಡಲು ಹೆಲಿಕಾಪ್ಟರ್ ಸೇವೆಯನ್ನು ಆರಂಭಿಸಿದೆ. ವಿಶೇಷ ಅಂದರೆ ಕೇವಲ 1,296 ರೂಪಾಯಿಗೆ ಈ ಸೇವೆ ಲಭ್ಯವಿದೆ.

ree

ಮಹಾಕುಂಭಕ್ಕೆ ತೆರಳುವ ಭಕ್ತರ ಅನುಕೂಲ ಪ್ರಯಾಣ ಹಾಗೂ ಆಗಸದಿಂದ ಐತಿಹಾಸಿಕ ಹಾಗೂ ಧಾರ್ಮಿಕ ಮಹಾ ಉತ್ಸವ ವೀಕ್ಷಿಸಲು ಹೆಲಿಕಾಪ್ಟರ್ ಸೇವೆ ಆರಂಭಿಸಲಾಗಿದೆ. ಭಕ್ತರು ಉತ್ತರ ಪ್ರದೇಶ ಸರ್ಕಾರಿ ವೆಬ್‌ಸೈಟ್ ಮೂಲಕ ಹೆಲಿಕಾಪ್ಟರ್ ಪ್ರಯಾಣಕ್ಕೆ ಬುಕ್ ಮಾಡಬಹುದು. ಹೆಲಿಕಾಪ್ಟರ್ ಸಮಯ, ಹೊರಡುವ ಸ್ಥಳ, ತಲುಪುವ ಸ್ಥಳಗಳ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಹೆಲಿಕಾಪ್ಟರ್ ರೈಡ್ ಬುಕಿಂಗ್ ಮಹಾಕುಂಭ ಮೇಳ ತಲುಪಲು ಹೆಲಿಕಾಪ್ಟರ್ ಸೇವೆ ಬಯಸಿದ್ದರೆ ಉತ್ತರ ಪ್ರದೇಶದ ಸರ್ಕಾರಿ ಅಧಿಕೃತ ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್ ಮೂಲಕ(Uttar Pradesh State Tourism Development Corporation) ಬುಕಿಂಗ್ ಮಾಡಬೇಕು. 

ಹೆಲಿಕಾಪ್ಟರ್ ವೇಳಾಪಟ್ಟಿ ಬುಕಿಂಗ್ ವೇಳೆ ನೀವು ಹೆಲಿಕಾಪ್ಟರ್ ಹೊರಡುವ ಸಮಯ ಸೇರಿದಂತೆ ಎಲ್ಲಾ ಮಾಹಿತಿ ಪರಿಶೀಲಿಸಿ ,ನಿಮ್ಮ ಸೂಕ್ತ ಹಾಗೂ ಅನುಕೂಲದ ಸಮಯದಲ್ಲಿ ಬುಕ್ ಮಾಡಬಹುದು. ಮಹಾಕುಂಭಕ್ಕೆ ಕೋಟಿ ಕೋಟಿ ಭಕ್ತರು ಆಗಮಿಸುತ್ತಿರುವ ಕಾರಣ ಹೆಚ್ಚಿನವರು ಈ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಬುಕಿಂಗ್ ಮಾಡುವ ಮೊದಲು ಖಾಲಿ ಸೀಟು, ಸಮಯದ ಬಗ್ಗೆ ಪರಿಶೀಲಿಸಿ.

ಪಾವತಿ ವ್ಯವಸ್ಥೆ ಹೆಲಿಕಾಪ್ಟರ್ ಸಮಯ, ಹೆಲಿಪ್ಯಾಡ್ ಸ್ಥಳ ಸೇರಿದಂತೆ ಇತರ ಕೆಲ ಮಾಹಿತಿಗಳನ್ನು ಆಯ್ಕೆ ಮಾಡಿಕೊಂಡ ಬಳಿಕ  ನೇರವಾಗಿ ಪವಾತಿ ಮಾಡಬೇಕು. ನೆಟ್‌ಬ್ಯಾಕಿಂಗ್, ಯುಪಿಐ ಸೇರಿದಂತೆ ಹಲವು ಆನ್‌ಲೈನ್ ಪಾವತಿ ವ್ಯವಸ್ಥೆ ಮೂಲಕ ಪಾವತಿ ಮಾಡಲು ಸಾಧ್ಯವಿದೆ. ಪಾವತಿ ಮಾಡಿದ ಬೆನ್ನಲ್ಲೇ ಬುಕಿಂಗ್ ಖಚಿತವಾಗಿರುವ ಸಂದೇಶ ಹಾಗೂ ಇಮೇಲ್ ಬರಲಿದೆ. ಜೊತೆಗೆ ಟಿಕೆಟ್ ಕೂಡ ಡೌನ್ಲೌಡ್‌ಗೆ ಲಭ್ಯವಾಗಲಿದೆ.

ಭದ್ರತಾ ವ್ಯವಸ್ಥೆಮಹಾಕುಂಭಮೇಳದಲ್ಲಿ ಲಕ್ಷಾಂತರ ಭಕ್ತರು ಹಾಜರಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಹೆಚ್ಚಿನ ಭದ್ರತಾ ತಪಾಸಣೆಗಳು ನಡೆಯಲಿದೆ. ಹೆಲಿಕಾಪ್ಟರ್ ಹೊರಡುವ ಸಮಯಕ್ಕಿಂತ ಮೊದಲೇ ಹೆಲಿಪ್ಯಾಡ್ ಬಳಿ ಆಗಮಿಸಿ ಭದ್ರತಾ ತಪಾಸಣೆ ಪೂರ್ಣಗೊಳಿಸಿದೆ. ಯಾವುದೇ ಸಮಯದಲ್ಲೂ ಭದ್ರತಾ ಅಧಿಕಾರಿಗಳು ಮತ್ತೆ ತಪಾಸಣೆ ಮಾಡುವ ಪರಿಶೀಲನೆ ಮಾಡುವ ಸಂದರ್ಭ ಹೆಚ್ಚಿದೆ. ಹೀಗಾಗಿ ಭಕ್ತರು ಸಹಕರಿಸಬೇಕಾಗಿ ವಿನಂತಿಸಲಾಗಿದೆ.

ಹೆಲಿಕಾಪ್ಟರ್ ರೈಡ್‌ನಿಂದ ಸಮಯ ಉಳಿತಾಯವಾಗಲಿದೆ. ಪ್ರಯಾಗರಾಜ್ ಸಂಪರ್ಕಿಸುವ ಎಲ್ಲಾ ರಸ್ತೆಗಳಲ್ಲಿ ಟ್ರಾಫಿಕ್ ಹೆಚ್ಚಾಗಿದೆ. ಹೀಗಾಗಿ ಹೆಲಿಕಾಪ್ಟರ್ ಪ್ರಯಾಣ ಸಮಯ ಉಳಿತಾಯ ಮಾಡಲಿದೆ. ಇದರ ಜೊತೆಗೆ ಆಗಸದಿಂದ ಮಹಾಕುಂಭ, ಭಕ್ತರು ಸೇರಿದಂತೆ ವ್ಯವಸ್ಥೆಗಳ ವೀಕ್ಷಿಸುವ ಅವಕಾಶವೂ ಸಿಗಲಿದೆ.

ಬುಕಿಂಗ್ ಮಾಡಿದ ಬಳಿಕ ಸಂದೇಶ ಅಥವಾ ಇಮೇಲ್ ಚೆಕ್ ಮಾಡುವುದನ್ನು ಮರೆಯಬೇಡಿ. ಹೆಲಿಕಾಪ್ಟರ್ ವೇಳಾಪಟ್ಟಿ, ಸಮಯ ಕುರಿತು ಅಪ್‌ಡೇಟ್ ನೀಡಲಿದೆ. ಸಮಯದಲ್ಲಿ ಬದಲಾವಣೆ ಇದ್ದರೂ ಮಾಹಿತಿ ನೀಡಲಿದೆ. ಆದರೆ  ಬುಕಿಂಗ್ ಮಾಡುವ ಮುನ್ನ ಎಚ್ಚರವಿರಲಿ. ನಕಲಿ ವೆಬ್‌ಸೈಟ್, ಆ್ಯಪ್ ಮೂಲಕ ಬುಕಿಂಗ್ ಮಾಡಿ ಮೋಸ ಹೋಗಬೇಡಿ. ಸರ್ಕಾರಿ ಅಧಿಕೃತ ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ಮಾತ್ರ ಬುಕಿಂಗ್ ಮಾಡಿ ವಂಚನೆಯಿಂದ ದೂರವಿರಿ.

Comments


Top Stories

bottom of page