top of page

ಕಲ್ಪನಾ ಚಾವ್ಲಾ - ಬದುಕಿದ್ದರೆ ಇವತ್ತಿಗೆ ಆಕೆಗೆ 60 ವರ್ಷ!

  • Writer: Ananthamurthy m Hegde
    Ananthamurthy m Hegde
  • Mar 17
  • 1 min read

ಬೆಂಗಳೂರು: ಕೇವಲ 8 ದಿನಗಳಿಗಾಗಿ ಬಾಹ್ಯಾಕಾಶದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದ ಭಾರತ ಮೂಲದ ಸುನಿತಾ ವಿಲಿಯಮ್ಸ್, ತಮ್ಮ ಜೊತೆಗಿನ ಬುಚ್ ವಿಲ್ಮೋರ್ ಅವರ ಜೊತೆಗೆ ಅವರು ಸಾಗಿದ್ದ ಬೋಯಿಂಗ್ ಆಕಾಶಕಾಯದ ತಾಂತ್ರಿಕ ದೋಷಗಳಿಂದಾಗಿ 9 ತಿಂಗಳು ಅಲ್ಲೇ ಉಳಿಯುವಂತಾಯಿತು.

ಸುನಿತಾ ಅವರನ್ನು ಭೂಮಿಗೆ ಕರೆತರುವ ಪ್ರಯತ್ನಕ್ಕೆ ಚಾಲನೆ ನೀಡಲಾಗಿದೆ. ಅದೆಲ್ಲದರ ನಡುವೆ ನೆನಪಾಗಿದ್ದು ಕಲ್ಪನಾ ಚಾವ್ಲಾ. ಅದಕ್ಕೊಂದು ಕಾರಣವೂ ಇದೆ. ಇಂದು (ಮಾ. 17) ಬದುಕಿದ್ದರೆ ಅವರು 60ನೇ ವಸಂತಕ್ಕೆ ಕಾಲಿಡುತ್ತಿದ್ದರು. ಆದರೆ, ವಿಧಿ ಅದಕ್ಕೆ ಅವಕಾಶ ಕೊಡಲಿಲ್ಲ. 2003ರಲ್ಲಿ ಅವರು ಬಾಹ್ಯಾಕಾಶಕ್ಕೆ ಹೋಗಿ ಪುನಃ ಭೂಮಿಗೆ ಹಿಂದಿರುಗುವಾರ ಫೆ. 1ರಂದು ಅವರು ವಾಪಸ್ ಬರುತ್ತಿದ್ದ ಸ್ಪೇಸ್ ಶಟಲ್ ಕೊಲಂಬಿಯಾ ಆಕಸ್ಮಿಕವಾಗಿ ಸ್ಫೋಟಗೊಂಡು ಅವರು ಬಾಹ್ಯಾಕಾಶದಲ್ಲೇ ಸುಟ್ಟು ಬೂದಿಯಾದರು. ಅವರೊಂದಿಗೆ, ಇನ್ನೂ ಆರು ಮಂದಿ ವಿಜ್ಞಾನಿಗಳು ಅಂತರಿಕ್ಷ ಸಮಾಧಿಯಾದರು.

ಅಂದು ಆಗಿದ್ದೇನು?

ಆ ಆಕಾಶಕಾಯದ ಹೆಸರು ಎಸ್ ಟಿಎಸ್ - 107. ಆ ಆಕಾಶಕಾಯದಲ್ಲಿದ್ದವರು ಚಾವ್ಲಾ, ಇಲಾನ್ ರಮೊನ್, ಲಾರೆಲ್ ಕ್ಲಾರ್ಕ್, ಹಿಕ್ ಹಸ್ಬೆಂಡ್. ಅವರಿದ್ದ ಆಕಾಶಕಾಯಕ್ಕೆ ಫ್ಲೈಟ್ ಇಂಜಿನಿಯರ್ ಆಕೆಯೇ ಆಗಿದ್ದರು. 2003ರ ಜ. 16ರಂದು ಈ ತಂಡ ಬಾಹ್ಯಾಕಾಶಕ್ಕೆ ತೆರಳಿತ್ತು. ಅಲ್ಲಿ ಹಲವಾರು ಪ್ರಯೋಗಗಳನ್ನು ಮಾಡಿದ ಬಳಿಕ, ಫೆ. 1ರಂದು ಅವರಿದ್ದ ಆಕಾಶಕಾಯದಲ್ಲಿ ಅವರೆಲ್ಲರೂ ಭೂಮಿಯ ಕಡೆಗೆ ಪ್ರಯಾಣ ಬೆಳೆಸಿದ್ದರು.

ಆದರೆ, ಫೆ. 1ರ ಬೆಳಗ್ಗೆ 8.44ರ ಸುಮಾರಿಗೆ (ಅಮೆರಿಕದ ಸ್ಥಳೀಯ ಕಾಲಮಾನ) ಅವರಿದ್ದ ಆಕಾಶಕಾಯದ ನಾಲ್ಕೂ ಸೆಸ್ಸರ್ ಗಳು ನಿಷ್ಕ್ರಿಯವಾದವು. ಅದರಿಂದ ಅವರ ಆಕಾಶಕಾಯದ ವಿಂಗ್ ಗಳು ಕೆಲಸ ಮಾಡದಂತಾದವು. ಇದರಿಂದ ಟೆಕ್ಸಾಸ್ ಮೇಲಿನ ಆಕಾಶದಲ್ಲಿ ಅವರಿದ್ದ ಎಸ್ ಟಿಎಸ್ - 107 ಆಕಾಶಕಾಯ ನಾಸಾದ ರೇಂಜ್ ನಿಂದ ಆಚೆ ಸರಿಯಿತು. ಮತ್ತೆ ಅದನ್ನು ಭೂಮಿಯ ಕಕ್ಷೆಗೆ ರಿ-ಎಂಟ್ರಿ ಮಾಡಿಸಲು ಪ್ರಯತ್ನಿಸಲಾಯಿತು. ಆದರೆ, ಅಷ್ಟರಲ್ಲಿ ಭೂಮಿಯಲ್ಲಿನ ಗಾಳಿಯ ಕಣಗಳ ಘರ್ಷಣೆಯಿಂದ ಆಕಾಶಕಾಯಕ್ಕೆ ಬೆಂಕಿ ಹೊತ್ತಿಕೊಂಡಿತು. ಕಡೆಗೆ ಅದು ಸ್ಫೋಟಗೊಂಡಿತು.

ಆಕಾಶಕಾಯ ಸ್ಫೋಟಕ್ಕೆ ಕಾರಣವೇನು?

ಇಷ್ಟಕ್ಕೆಲ್ಲಾ ಕಾರಣ, ಮತ್ತೆ ಭೂಮಿಯತ್ತ ಬರುವಾಗ ಆಕಾಶಕಾಯ ಲಾಂಚ್ ಆಗುತ್ತಿದ್ದಂತೆ ಆಕಾಶಕಾಯದೊಳಗಿದ್ದ ಇನ್ಸುಲೇಟಿಂಗ್ ಫೋಮ್ ನ ಚೂರೊಂದು ಎಗರಿ ಹೋಗಿ ಆಕಾಶಕಾಯದ ವಿಂಗ್ ತಾಕಿಕೊಂಡು ಹೋಗಿ ಅದರ ಮೇಲೆ ಸ್ಕ್ರಾಚ್ ಬಿದ್ದಿದ್ದು! ಆ ಒಂದು ಸಣ್ಣ ಸ್ಕ್ರಾಚ್, ಆ ಆಕಾಶಕಾಯ ಅತ್ಯಂತ ವೇಗವಾಗಿ ಭೂಮಿಯತ್ತ ಬರುವಾಗ ಅಗಲವಾಗಿ ಸಣ್ಣ ಬಿರುಕು ಉಂಟಾಗಿತ್ತು. ಅದೇ ಭೂಮಿಯ ವಾತಾವರಣಕ್ಕೆ ಆಗಮಿಸಿದ ಕೂಡಲೇ ವಾಯುವಿನ ಕಣಗಳ ಘರ್ಷಣೆಗೆ ತಾಗಿ ಬಿರುಕು ದೊಡ್ಡದಾಗಿ, ಅದು ಸೆನ್ಸರ್ ಗಳ ಫೇಲ್ಯೂರ್ ಗೆ ಕಾರಣವಾಗಿ, ವಿಂದ್ ಒಂದಕ್ಕೆ ಬೆಂಕಿ ಹೊತ್ತಿಕೊಂಡು ಕಡೆಗೆ ಸ್ಫೋಟಕ್ಕೆ ಕಾರಣವಾಗಿದೆ.

Comments


Top Stories

bottom of page