top of page

ದೇಶದಲ್ಲಿ ಕನಿಷ್ಠ ಮಟ್ಟಕ್ಕೆ ಇಳಿದ ಬಡತನ !

  • Writer: Ananthamurthy m Hegde
    Ananthamurthy m Hegde
  • Jan 3
  • 1 min read
ree

ನವದೆಹಲಿ: ದೇಶದಲ್ಲಿ ಕಡು ಬಡತನ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI)ಸಂಶೋಧನಾ ಅಧ್ಯಯನದ ಪ್ರಕಾರ 2024ರಲ್ಲಿ ದೇಶದಲ್ಲಿ ಬಡತನದ ಪ್ರಮಾಣ ಶೇ. 5 ಕ್ಕಿಂತ ಕಡಿಮೆಯಾಗಿದೆ. ದೇಶದಲ್ಲಿ ಕಡು ಬಡತನ ಪ್ರಮಾಣ ಕನಿಷ್ಠ ಮಟ್ಟಕ್ಕೆ ಇಳಿದಿರುವುದಾಗಿ ಅಧ್ಯಯನದಲ್ಲಿ ಹೇಳಲಾಗಿದೆ.

ಒಟ್ಟಾರೇ, ಭಾರತದಲ್ಲಿ ಬಡತನ ಪ್ರಮಾಣ ಈಗ ಶೇ. 4 ರಿಂದ ಶೇ. 4.5 ರಷ್ಟಿದೆ.

ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿನ ಬಡತನದ ಪ್ರಮಾಣದಲ್ಲಿ ಗಮನಾರ್ಹ ಸುಧಾರಣೆ ಆಗಿದೆ ಎಂದು ಸರ್ಕಾರದ ಬಳಕೆ ವೆಚ್ಚ ಸಮೀಕ್ಷೆಯಿಂದ ಪಡೆದ ಮಾಹಿತಿಯನ್ನಾಧರಿಸಿದ ಅಧ್ಯಯನ ಹೇಳಿದೆ.

ರಾಜ್ಯದಲ್ಲಿ ಬಡತನ ನಿರ್ಮೂಲನೆಗಾಗಿ 'ಕರ್ನಾಟಕ ಅಂತರ್ಗತ ಜೀವನೋಪಾಯ ಕಾರ್ಯಕ್ರಮ' ಅನುಷ್ಠಾನ

ಸಮೀಕ್ಷೆಯ ಪ್ರಕಾರ, 2024ರ ಆರ್ಥಿಕ ವರ್ಷದಲ್ಲಿ ಗ್ರಾಮೀಣ ಬಡತನ ಶೇ. 4.86 ಎಂದು ಅಂದಾಜಿಸಲಾಗಿದೆ. 2023ರ ಆರ್ಥಿಕ ವರ್ಷದಲ್ಲಿ ಶೇ. 7. 2ರಷ್ಟು ಕಡಿಮೆಯಾಗಿದೆ. ಆರ್ಥಿಕ ವರ್ಷ 2012ರಲ್ಲಿ ಶೇ. 25.7 ರಷ್ಟಿತ್ತು.

ಅದೇ ರೀತಿ ಗ್ರಾಮೀಣ ಪ್ರದೇಶದಲ್ಲಿನ ಬಡತನ ಪ್ರಮಾಣ 2024ರ ಆರ್ಥಿಕ ವರ್ಷದಲ್ಲಿ ಶೇ. 4.09 ರಷ್ಟು ಕಡಿಮೆಯಾಗಿದೆ. ಇದು 2023ರ ಆರ್ಥಿಕ ವರ್ಷದಲ್ಲಿ ಶೇ. 4.6 ಮತ್ತು 2012ರ ಆರ್ಥಿಕ ವರ್ಷದಲ್ಲಿ ಶೇ. 13. 7 ರಷ್ಟಿತ್ತು.

Comments


Top Stories

bottom of page