top of page

ನಿಮ್ಮ ವ್ಯಕ್ತಿತ್ವ ಹೀಗಿದೆ ಎಂದು ತಿಳಿಯುವ ಆಸೆನಾ ? ಇಲ್ಲಿದೆ ನೋಡಿ

  • Writer: Ananthamurthy m Hegde
    Ananthamurthy m Hegde
  • Dec 21, 2024
  • 2 min read

ree

ನಿಮ್ಮ ವ್ಯಕ್ತಿತ್ವ ಹೇಗಿದೆ ಎಂದು ತಿಳಿದುಕೊಳ್ಳುವ ಆಸೆ ನಿಮಗಿದ್ಯಾ? ಇತರರು ನಿಮ್ಮ ಬಗ್ಗೆ ಏನು ಹೇಳುತ್ತಾರೋ ಎಂಬ ಭಯ ಅಥವಾ ಚಿಂತೇನಾ? ಇವುಗಳ ಬಗ್ಗೆ ಇನ್ಮುಂದೆ ನೀವು ಚಿಂತಿಸುವ ಅಗತ್ಯವಿಲ್ಲ. ನಿಮ್ಮ ದೇಹದ ಆಕಾರ, ಅದರಲ್ಲೂ ವಿಶೇಷವಾಗಿ ನಿಮ್ಮ ಮುಖ, ನಿಮ್ಮ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ರಹಸ್ಯಗಳನ್ನು ಬಹಿರಂಗ ಪಡಿಸುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರದಂತೆ, ವ್ಯಕ್ತಿಯ ಮುಖದ ಆಕಾರವು ಅವರ ಬಗ್ಗೆ ಸಾಕಷ್ಟು ಆಸಕ್ತಿದಾಯಕ ವಿಚಾರಗಳನ್ನು ಬಹಿರಂಗಪಡಿಸುತ್ತದೆ. ಹಾಗಾದ್ರೆ ತಡ ಮಾಡದೇ ನಿಮ್ಮ ಮುಖದ ಆಕಾರದ ಮೇಲೆ ನಿಮ್ಮ ವ್ಯಕ್ತಿತ್ವವನ್ನು ಅರಿತುಕೊಳ್ಳಿ.


ಓವಲ್ ಫೇಸ್

ಓವಲ್ ಫೇಸ್ ಹೊಂದಿರುವವರು ಎಲ್ಲದರಲ್ಲೂ ಪರಿಪೂರ್ಣರಾಗಿರಲು ಬಯಸುತ್ತಾರೆ. ಇವರು ತುಂಬಾ ಬುದ್ಧಿವಂತರು ಮತ್ತು ಕಠಿಣ ಪರಿಶ್ರಮದ ವ್ಯಕ್ತಿಯನ್ನು ಹೊಂದಿರುತ್ತಾರೆ. ಇವರು ಏನನ್ನಾದರೂ ಸಾಧಿಸಲು ಯಾವ ಹಂತಕ್ಕೆ ಬೇಕಾದರೂ ಹೋಗುವ ಮನಸ್ಥಿತಿ ಹೊಂದಿರುತ್ತಾರೆ. ಕಷ್ಟದ ಸಮಯದಲ್ಲಿಯೂ ಇವರು ತಮ್ಮ ಗುರಿಗಳನ್ನು ಬಿಟ್ಟುಕೊಡುವುದಿಲ್ಲ. ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ಎರಡು ಬಾರಿ ಯೋಚಿಸುತ್ತಾರೆ. ಯಾವಾಗಲೂ ಹೊಸ ಆಲೋಚನೆಗಳನ್ನು ಮಾಡುತ್ತಿರುತ್ತಾರೆ. ಯಾವುದೇ ಸಮಸ್ಯೆ ಎದುರಾದರೂ ಶಾಂತವಾಗಿ ಎದುರಿಸುತ್ತಾರೆ. ಇದಲ್ಲದೇ, ಇವರಲ್ಲಿರುವ ವಿಶೇಷ ಮೋಡಿಯಿಂದ ಎಲ್ಲರ ಮೆಚ್ಚುಗೆಯನ್ನು ಪಡೆಯುತ್ತಾರೆ.


ರೌಂಡ್ ಫೇಸ್ (ರೌಂಡ್ ಫೇಸ್)

ಇವರು ತುಂಬಾ ಸೂಕ್ಷ್ಮ ಮನಸ್ಸಿನವರು. ಇವರು ದಯೆ, ಪ್ರೀತಿ ಮತ್ತು ಸಹಾನುಭೂತಿಯ ದ್ಯೋತಕರಾಗಿರುತ್ತಾರೆ. ಇವರು ಇತರರನ್ನು ಬೇಗ ಅರ್ಥಮಾಡಿಕೊಳ್ಳುತ್ತಾರೆ. ಆದ್ದರಿಂದಲೇ ಇವರ ಮೇಲೆ ಎಲ್ಲರಿಗೂ ವಿಶೇಷ ಪ್ರೀತಿ ಇರುತ್ತದೆ. ರೌಂಡ್​ ಫೇಸ್​ ಹೊಂದಿರುವವರು ಸ್ನೇಹವನ್ನು ತುಂಬಾ ಗೌರವಿಸುತ್ತಾರೆ. ಯಾವಾಗಲೂ ಇತರರ ಬಗ್ಗೆ ಯೋಚಿಸಿ, ಸಹಾಯ ಮಾಡುತ್ತಾರೆ. ಆದರೆ ಕೆಲವೊಮ್ಮೆ ಇವರು ತಮ್ಮ ಬಗ್ಗೆ ಕಾಳಜಿವಹಿಸುವುದನ್ನೇ ಮರೆತುಬಿಡುತ್ತಾರೆ. ಆದ್ದರಿಂದ, ಸ್ವಲ್ಪ ಸ್ವಾರ್ಥದಿಂದ ಯೋಚಿಸುವುದು ಅವಶ್ಯಕ ಎಂದು ಇವರು ಸದಾ ನೆನಪಿಟ್ಟುಕೊಳ್ಳಬೇಕು. ತಮ್ಮ ಭಾವನೆಗಳ  ಬಗ್ಗೆಯೂ ಕಾಳಜಿ ವಹಿಸಬೇಕು.


ಹಾರ್ಟ್​ ಶೇಪ್​ ಫೇಸ್​

ಹೃದಯಾಕಾರ ಮುಖ ಹೊಂದಿರುವವರು ತುಂಬಾ ಸೃಜನಶೀಲತೆ ಮತ್ತು ಭಾವನಾತ್ಮಕ ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ. ಇವರು ಹೆಚ್ಚು ಕಲ್ಪನೆಗಳನ್ನು ಹೊಂದಿರುತ್ತಾರೆ. ಇವರು ಸಹನೆ ಮತ್ತು ಕರುಣೆ ಮನಸ್ಥಿತಿಯನ್ನು ಹೊಂದಿದ್ದಾರೆ. ಇತರರೊಂದಿಗೆ ಚೆನ್ನಾಗಿ ಮಾತನಾಡಬಲ್ಲರು. ಇವರ ಆಲೋಚನೆಗಳಿಂದ ಯಾರನ್ನಾದರೂ ಮೆಚ್ಚಿಸಬಹುದು. ಆದರೆ ಕೆಲವೊಮ್ಮೆ ಇವರು ತುಂಬಾ ಭಾವನಾತ್ಮಕರಾಗುತ್ತಾರೆ ಮತ್ತು ಪ್ರಾಯೋಗಿಕವಾಗಿ ಯೋಚಿಸುವುದಿಲ್ಲ. ಆದ್ದರಿಂದ, ಭಾವನೆಗಳು ಮತ್ತು ವಾಸ್ತವದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ.


ಚೌಕಾಕಾರದ ಮುಖ

ಚೌಕಾಕಾರದ ಮುಖ ಹೊಂದಿರುವವರು ಪರಿಶ್ರಮ ಮತ್ತು ಧೈರ್ಯವಂತರಾಗಿರುತ್ತಾರೆ. ಇವರು ಏನನ್ನಾದರೂ ಸಾಧಿಸಬೇಕೆಂದು ಬಯಸಿದರೆ, ಅದನ್ನು ಸಾಧಿಸುವವರೆಗೂ ಹಠ ಬಿಡುವುದಿಲ್ಲ. ಜೊತೆಗೆ ತುಂಬಾ ಕ್ರಿಯಾಶೀಲ ವ್ಯಕ್ತಿಗಳಾಗಿರುತ್ತಾರೆ. ಅಲ್ಲದೇ ಯಾವುದೇ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಲ್ಲರು. ಭವಿಷ್ಯವನ್ನು ಮುನ್ಸೂಚಿಸುವ ಸಾಮರ್ಥ್ಯ ಹೊಂದಿರುವುದು ಇವರ ವಿಶೇಷತೆ. ಕಷ್ಟದ ಸಮಯದಲ್ಲಿಯೂ ಶಾಂತವಾಗಿ ಮತ್ತು ಸ್ಥಿರವಾಗಿ ನಿಲ್ಲುತ್ತಾರೆ. ನಾಯಕತ್ವದ ಗುಣದಿಂದ ಹೊಂದಿರುವ ಇವರು ಕೆಲಸದ ಸ್ಥಳಗಳಲ್ಲಿ ಎಲ್ಲರ ಗಮನ ಸೆಳೆಯುತ್ತಾರೆ.


ವಜ್ರದ ಆಕಾರದ ಮುಖ

ವಜ್ರದ ಆಕಾರದ ಮುಖವನ್ನು ಹೊಂದಿರುವವರು ಎಲ್ಲವನ್ನೂ ಬಹಳ ಎಚ್ಚರಿಕೆಯಿಂದ ಮತ್ತು ಆಳವಾಗಿ ಪರೀಕ್ಷಿಸುತ್ತಾರೆ. ಯಾವುದೇ ಕೆಲಸವನ್ನು ಪ್ರಾರಂಭಿಸುವಾಗ, ಎಲ್ಲಾ ವಿವರಗಳಿಗೆ ಗಮನ ನೀಡುತ್ತಾರೆ. ಒತ್ತಡದ ಸಂದರ್ಭಗಳಲ್ಲಿಯೂ ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಇವರ ಆತ್ಮವಿಶ್ವಾಸ ಮತ್ತು ನಿಖರತೆಯಿಂದಾಗಿ, ನಾಯಕತ್ವದ ಗುಣಗಳು ಸ್ವಾಭಾವಿಕವಾಗಿಯೇ ಇವರಲ್ಲಿರುತ್ತದೆ .

 
 
 

Comments


Top Stories

bottom of page