top of page

ನ.೨೦ಕ್ಕೆ ಉಪಚುನಾವಣೆ ಮುಂದೂಡಿಕೆ

  • Writer: Ananthamurthy m Hegde
    Ananthamurthy m Hegde
  • Nov 4, 2024
  • 1 min read

ree

ನವದೆಹಲಿ: ಕೇರಳ, ಪಂಜಾಬ್ ಮತ್ತು ಉತ್ತರ ಪ್ರದೇಶದ ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 13ರಂದು ನಡೆಯಬೇಕಿದ್ದ ಉಪಚುನಾವಣೆ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗ ಮುಂದೂಡಿದ್ದು ನವೆಂಬರ್ 20 ರಂದು ಉಪಚುನಾವಣೆ ನಡೆಸಲು ನಿರ್ಧರಿಸಿದೆ.

ವಿವಿಧ ಹಬ್ಬಗಳು ಬರುತ್ತಿರುವ ಕಾರಣ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಹಲವು ಪಕ್ಷಗಳು ಚುನಾವಣೆಯನ್ನು ಒಂದು ವಾರದ ಮಟ್ಟಿಗೆ ಮುಂದೂಡುವAತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದವು.ಅಲ್ಲದೆ ನವೆಂಬರ್ 13ರಂದು ಹಬ್ಬಗಳು ಇರುವ ಕಾರಣ ಮತದಾನ ಪ್ರಮಾಣ ಕಡಿಮೆಯಾಗುವ ನಿಟ್ಟಿನಲ್ಲಿ ಪಕ್ಷಗಳು ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು.

ಚುನಾವಣಾ ಆಯೋಗವು ನ.೧೩ ರಂದು ೪೮ ವಿಧಾನಸಭಾ ಕ್ಷೇತ್ರಗಳು ಮತ್ತು ಎರಡು ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆಗೆ ದಿನಾಂಕವನ್ನು ನಿಗದಿಪಡಿಸಿತ್ತು. ಇದೀಗ ಪಕ್ಷಗಳ ಬೇಡಿಕೆ ಮೇರೆಗೆ ಚುನಾವಣಾ ದಿನಾಂಕವನ್ನು ನವೆಂಬರ್ ೨೦ಕ್ಕೆ ಮುಂದೂಡಿದ್ದು ನ.೨೩ ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

Comments


Top Stories

bottom of page