top of page

ನಕಲಿ ನೋಟು ಹಾವಳಿ ತಡೆಗೆ ಆರ್‌ಬಿಐ ಹೊಸ ನಿಯಮ

  • Writer: Ananthamurthy m Hegde
    Ananthamurthy m Hegde
  • Nov 3, 2024
  • 1 min read

ree

ನಕಲಿ ನೋಟು ಹಾವಳಿ ತಡೆಗೆ ಆರ್‌ಬಿಐ ಹೊಸ ನಿಯಮ

೫೦೦ ರೂಪಾಯಿ ನೋಟುಗಳಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆ ಖೋಟನೋಟು ತಡೆಯಲು ಆರ್.ಬಿ.ಐ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಸಾರ್ವಜನಿಕರು ಇವುಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

೫೦೦ ರೂ. ನೋಟಿನಲ್ಲಿ ಹಲವು ಸುರಕ್ಷತಾ ವೈಶಿಷ್ಟ್ಯಗಳಿವೆ. ಮುಖ್ಯವಾಗಿ ಒಂದು ವಿಶೇಷ ಭದ್ರತಾ ದಾರ ಇದೆ. ನೋಟನ್ನು ಓರೆಯಾಗಿ ಹಿಡಿದಾಗ, ಈ ದಾರದ ಬಣ್ಣ ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ತಿರುಗುತ್ತದೆ. ನಕಲಿ ನೋಟುಗಳಲ್ಲಿ ಇದನ್ನು ಅನುಕರಿಸುವುದು ಕಷ್ಟ.


ಮಹಾತ್ಮ ಗಾಂಧೀಜಿಯವರ ವಾಟರ್‌ಮಾರ್ಕ್ ಕೂಡ ಒಂದು ಮುಖ್ಯ ಭದ್ರತಾ ವೈಶಿಷ್ಟ್ಯವಾಗಿದೆ. ನೋಟನ್ನು ಬೆಳಕಿಗೆ ಹಿಡಿದಾಗ ಇದು ಸ್ಪಷ್ಟವಾಗಿ ಕಾಣುತ್ತದೆ. ಇದನ್ನು ನಕಲು ಮಾಡುವುದು ಕೂಡ ಕಷ್ಟ.

೫೦೦ ಸಂಖ್ಯೆಯನ್ನು ವಿಶೇಷ ಶಾಯಿಯಿಂದ ಮುದ್ರಿಸಲಾಗಿದೆ. ನೋಟನ್ನು ಓರೆಯಾಗಿ ಹಿಡಿದಾಗ, ಸಂಖ್ಯೆಯ ಬಣ್ಣ ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ತಿರುಗುತ್ತದೆ. ಇದನ್ನು ನಕಲಿ ನೋಟುಗಳಲ್ಲಿ ಅನುಕರಿಸುವುದು ಕಷ್ಟ.

ಸೂಕ್ಷ್ಮ ಮುದ್ರಣ ಕೂಡ ಒಂದು ಮುಖ್ಯ ಭದ್ರತಾ ವೈಶಿಷ್ಟ್ಯ. 'ಭಾರತ್' ಮತ್ತು 'ಇಂಡಿಯಾ' ಪದಗಳನ್ನು ಸೂಕ್ಷ್ಮವಾಗಿ ಮುದ್ರಿಸಲಾಗಿದ್ದು, ಇದನ್ನು ಭೂತಗನ್ನಡಿಯಿಂದ ಮಾತ್ರ ನೋಡಬಹುದು. ನಕಲಿ ನೋಟುಗಳಲ್ಲಿ ಇದು ಇರುವುದಿಲ್ಲ ಅಥವಾ ಕಳಪೆ ಗುಣಮಟ್ಟದ್ದಾಗಿರುತ್ತದೆ.

ಹಣಕಾಸು ವ್ಯವಹಾರದಲ್ಲಿ ಮೂಲಭೂತ ಎಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮುಖ್ಯ. ಪಡೆಯುವ ನೋಟಿನ ಎಲ್ಲಾ ಭದ್ರತಾ ವೈಶಿಷ್ಟ್ಯಗಳನ್ನು ಪರಿಶೀಲಿಸಬೇಕು. ಅಪರಿಚಿತರಿಂದ ದೊಡ್ಡ ಮೊತ್ತದ ಹಣ ಪಡೆಯುವುದನ್ನು ತಪ್ಪಿಸಬೇಕು. ವ್ಯವಹಾರವು ಅನುಮಾನಾಸ್ಪದವಾಗಿದ್ದರೆ, ಅದನ್ನು ತಪ್ಪಿಸಬೇಕು.

ಎಟಿಎಂನಿAದ ಹಣ ಪಡೆಯುವಾಗಲೂ ಜಾಗರೂಕರಾಗಿರಬೇಕು. ಪಡೆದ ನೋಟುಗಳನ್ನು ಪರಿಶೀಲಿಸಿ ಮತ್ತು ರಶೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು.

ನಕಲಿ ನೋಟು ಸಿಕ್ಕರೆ ತಕ್ಷಣ ಹತ್ತಿರದ ಬ್ಯಾಂಕ್‌ಗೆ ಹೋಗಿ ತಿಳಿಸಬೇಕು. ನೋಟು ಎಲ್ಲಿಂದ ಸಿಕ್ಕಿತು, ಯಾವ ಸಂದರ್ಭದಲ್ಲಿ ಸಿಕ್ಕಿತು ಎಂಬ ಸಂಪೂರ್ಣ ಮಾಹಿತಿ ನೀಡಿ. ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.


Comments


Top Stories

bottom of page