ಪ್ರಧಾನಿ ಮೋದಿಯಿಂದ ಆರೋಗ್ಯ ರಕ್ಷಣೆ ಯೋಜನೆ ಘೋಷಣೆ
- Ananthamurthy m Hegde
- Oct 29, 2024
- 1 min read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY) ಅಡಿಯಲ್ಲಿ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೆ ಆರೋಗ್ಯ ರಕ್ಷಣೆ ಯೋಜನೆ ಬಿಡುಗಡೆ ಮಾಡಿದ್ದಾರೆ.
ಈ ಯೋಜನೆಯ ಅಡಿಯಲ್ಲಿ ಆಯುಷ್ಮಾನ್ ಕಾರ್ಡ್ ಪಡೆದುಕೊಳ್ಳುವವರು ಅಕ್ಟೋಬರ್ 29 ರಿಂದ ಯಾವುದೇ ಎಬಿ ಪಿಎಂಜೆಎವೈ ಎಂಪನೆಲ್ ಆಸ್ಪತ್ರೆಗಳಲ್ಲಿ 5 ಲಕ್ಷ ರೂ. ವರೆಗಿನ ಉಚಿತ ಚಿಕಿತ್ಸೆಯನ್ನು ಪಡೆಯಬಹುದು.
ವ್ಯಕ್ತಿಯ ಆಧಾರ್ ಕಾರ್ಡ್‌ನ ಪ್ರಕಾರ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ನಾಗರಿಕರು ಆದಾಯದ ಸ್ಥಿತಿ ಏನೇ ಇದ್ದರೂ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY) ಅಡಿಯಲ್ಲಿ ಆರೋಗ್ಯ ರಕ್ಷಣೆಗೆ ಅರ್ಹರಾಗಿರುತ್ತಾರೆ. ಈ ಯೋಜನೆಯು ಸುಮಾರು 4.5 ಕೋಟಿ ಕುಟುಂಬಗಳಲ್ಲಿನ ಅಂದಾಜು ಆರು ಕೋಟಿ ನಾಗರಿಕರಿಗೆ ಪ್ರಯೋಜನವನ್ನು ನೀಡಲಿದೆ.
ದೆಹಲಿ, ಒಡಿಶಾ ಮತ್ತು ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ ಪ್ರಸ್ತುತ 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.
ಆರೋಗ್ಯ ರಕ್ಷಣೆಯನ್ನು ಯೋಜನೆಯ ಉಪಯೋಗ ಪಡೆಯಲು ಜನರು ಪಿಎಂಜೆಎವೈ ಪೋರ್ಟಲ್‌ನಲ್ಲಿ ಅಥವಾ ಆಯುಷ್ಮಾನ್ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಈಗಾಗಲೇ ಆಯುಷ್ಮಾನ್ ಕಾರ್ಡ್ ಹೊಂದಿರುವವರು ಪೋರ್ಟಲ್ ಅಥವಾ ಆಯಪ್‌ನಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು ಮತ್ತು ಹೊಸ ಕಾರ್ಡ್‌ಗಾಗಿ ತಮ್ಮ ಇಕೆವೈಸಿ ಅನ್ನು ಪೂರ್ಣಗೊಳಿಸಬೇಕು.















Comments