ಬ್ರಿಸ್ಬೇನ್‌ನಲ್ಲಿ ಉದ್ಘಾಟನೆಗೊಂಡ ಭಾರತದ ಹೊಸ ದೂತವಾಸ ಕಚೇರಿ
- Ananthamurthy m Hegde
- Nov 4, 2024
- 1 min read

ಬ್ರಿಸ್ಬೇನ್: ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ಭಾರತದ ಹೊಸ ದೂತವಾಸ ಕಚೇರಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸೋಮವಾರ ಉದ್ಘಾಟಿಸಿದರು.
ಇದು ಭಾರತ ಮತ್ತು ಬ್ರಿಸ್ಬೇನ್ ರಾಜ್ಯಗಳ ನಡುವಿನ ಸಂಬAಧವನ್ನು ಬಲಪಡಿಸಲು, ವ್ಯಾಪಾರವನ್ನು ಉತ್ತೇಜಿಸಲು ಮತ್ತು ಅನಿವಾಸಿ ಭಾರತೀಯರಿಗೆ ನೆರವಾಗಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಈ ಕುರಿತು ಪೋಸ್ಟ್ ಹಂಚಿಕೊAಡಿರುವ ಜೈಶಂಕರ್, ಭಾರತೀಯ ದೂತವಾಸವನ್ನು ಬ್ರಿಸ್ಬೇನ್‌ನಲ್ಲಿ ಉದ್ಘಾಟಿಸಲಾಗಿದೆ. ಇದು ಭಾರತದೊಂದಿಗಿನ ಸಂಬAಧ ಬಲಪಡಿಸುವುದು ಮಾತ್ರವಲ್ಲದೆ ಶಿಕ್ಷಣ ಕ್ರೇತ್ರದಲ್ಲೂ ಮುಂದುವರಿಯಲು ಸಹಾಯಕವಾಗಲಿದೆ ಎಂದು ಬರೆದುಕೊಂಡಿದ್ದಾರೆ. ಪೋಸ್ಟ್ನಲ್ಲಿ ಬ್ರಿಸ್ಬೇನ್ ರಾಜ್ಯದ ಸಚಿವರಿಗೆ ಅವರು ಧನ್ಯವಾದ ತಿಳಿಸಿದ್ದಾರೆ.
ಇದು ಆಸ್ಟ್ರೇಲಿಯಾದಲ್ಲಿರುವ ನಾಲ್ಕನೇ ಭಾರತೀಯ ದೂತವಾಸ ಕಚೇರಿಯಾಗಿದೆ. ಉಳಿದ ಮೂರು ಸಿಡ್ನಿ, ಮೆಲ್ಬೋರ್ನ್ ಮತ್ತು ಪರ್ತ್ ರಾಜ್ಯಗಳಲ್ಲಿದೆ.
ಉದ್ಘಾಟನೆಗೂ ಮುನ್ನ ಜೈಶಂಕರ್, ರಾಜ್ಯದ ರೊಮಾ ಸ್ಟ್ರೀಟ್‌ನಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆಗೆ ಗೌರವ ಸಲ್ಲಿಸಿ, ಗಾಂಧೀಜಿ ಅವರ ಶಾಂತಿ ಮತ್ತು ಸಾಮರಸ್ಯದ ಸಂದೇಶ ಪ್ರಪಂಚದಾದ್ಯAತ ಪ್ರತಿಧ್ವನಿಸುತ್ತಿದೆ ಎಂದರು.
ಎರಡು ದೇಶಗಳ ಪ್ರವಾಸ ಕೈಗೊಂಡಿರುವ ಜೈಶಂಕರ್, ಭಾನುವಾರ ಆಸ್ಟ್ರೇಲಿಯಾಗೆ ಬಂದಿಳಿದರು. ಆಸ್ಟ್ರೇಲಿಯಾ ಭೇಟಿಯ ಬಳಿಕ ಸಿಂಗಾಪುರಕ್ಕೆ ತೆರಳಲಿದ್ದಾರೆ.
Comments