top of page

ಬಲೂನ್ ಊದಲು ಹೋಗಿ ಬಾಲಕ ಸಾ*ವು

  • Writer: Ananthamurthy m Hegde
    Ananthamurthy m Hegde
  • Dec 3, 2024
  • 1 min read

ಮನೆಯಲ್ಲಿ ಆಟವಾಡುತ್ತಾ ಬಲೂನ್ ಊದಲು ಹೋಗಿ ಗಂಟಲಲ್ಲಿ ಸಿಲುಕಿ 13 ವರ್ಷದ ಬಾಲಕ ಉಸಿರುಗಟ್ಟಿ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜೋಗನಕೊಪ್ಪ ಗ್ರಾಮದಲ್ಲಿ ನಡೆದಿದೆ.

ಜೋಗನಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 7 ನೇ ತರಗತಿ ವಿದ್ಯಾರ್ಥಿ ನವೀನ ನಾರಾಯಣ ಬೆಳಗಾಂವಕರ(13) ಸಾವಿಗಿಡಾದ ಬಾಲಕ.

ಮನೆಯಲ್ಲಿ ಆಟವಾಡುತಿದ್ದ ವೇಳೆ ಬಲೂನ್ ಊದುವಾಗ ಬಾಯಿಯ ಒಳಗೆ ಕೈ ತಪ್ಪಿ ಜಾರಿ ಹೋಗಿ ಗಂಟಲಲ್ಲಿ ಸಿಲುಕಿದೆ. ಉಸಿರುಗಟ್ಟಿ ಒದ್ದಾಡುತಿದ್ದ ಈತನಿಗೆ ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಉಸಿರಾಟವಾಡಲು ಸಾಧ್ಯವಾಗದೇ ಸಾವು ಕಂಡಿದ್ದಾನೆ.

 
 
 

Comments


Top Stories

bottom of page