ಭಾರತದಲ್ಲಿ ಪ್ರಜಾಪ್ರಭುತ್ವ ಒಂದು ವ್ಯವಸ್ಥೆಯಲ್ಲ, ಅದೊಂದು ಸಂಸ್ಕೃತಿ
- Ananthamurthy m Hegde
- Jul 3
- 1 min read

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತುತ 5 ದೇಶಗಳ ಪ್ರವಾಸದಲ್ಲಿದ್ದಾರೆ. ಇನ್ನು ಪ್ರವಾಸದಲ್ಲಿ ಮೊದಲಿಗೆ ಘಾನಾ ದೇಶಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರು, ಇಂದು ಘಾನಾದ ಸಂಸತ್ತಿನಲ್ಲಿ ಮಾತನಾಡಿ, ಭಾರತವನ್ನು "ಪ್ರಜಾಪ್ರಭುತ್ವದ ತಾಯಿ" ಎಂದು ಬಣ್ಣಿಸಿದರು. ಭಾರತದಲ್ಲಿ 2500 ಕ್ಕೂ ಹೆಚ್ಚು ರಾಜಕೀಯ ಪಕ್ಷಗಳಿವೆ. ವಿವಿಧ ರಾಜ್ಯಗಳಲ್ಲಿ 20 ವಿವಿಧ ರಾಜಕೀಯ ಪಕ್ಷಗಳ ಸರ್ಕಾರಗಳಿದ್ದು, ದೇಶದಲ್ಲಿ 22 ಕ್ಕೂ ಹೆಚ್ಚು ಅಧಿಕೃತ ಭಾಷೆಗಳಿವೆ. ಹಾಗಾಗಿ, ಭಾರತವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿಲ್ಲ, ಬದಲಾಗಿ ಪ್ರಜಾಪ್ರಭುತ್ವ ಸಂಸ್ಕೃತಿಯನ್ನು ಹೊಂದಿದೆ ಎಂದು ಹೇಳಿದರು.
ಇನ್ನು ಭಾರತವು 2,500 ಕ್ಕೂ ಹೆಚ್ಚು ರಾಜಕೀಯ ಪಕ್ಷಗಳನ್ನು ಹೊಂದಿದೆ ಎಂದಾಗ, ಘಾನಾದ ಸಂಸತ್ತನಲ್ಲಿದ ಎಲ್ಲರಲ್ಲೂ ಅಚ್ಚರಿ ಮತ್ತು ನಗು ಮೂಡಿತು. ಮುಂದುವರೆದು ಮಾತನಾಡಿದ ಅವರು, ಇಂದು ಈ ಪ್ರತಿಷ್ಠಿತ ಸದನವನ್ನು ಉದ್ದೇಶಿಸಿ ಮಾತನಾಡಲು ನನಗೆ ತುಂಬಾ ಹೆಮ್ಮೆಯಾಗುತ್ತಿದ್ದು, ಘಾನಾದಲ್ಲಿ ಇರುವುದು ನನಗೆ ಒಂದು ಸೌಭಾಗ್ಯವಾಗಿದೆ. ಇದು ಪ್ರಜಾಪ್ರಭುತ್ವ, ಘನತೆ ಮತ್ತು ಸ್ಥಿತಿಸ್ಥಾಪಕತ್ವದ ಚೈತನ್ಯವನ್ನು ಹೊರಸೂಸುವ ಭೂಮಿಯಾಗಿದೆ. ಇನ್ನು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರತಿನಿಧಿಯಾಗಿ, ಘಾನಾವನ್ನು ನೋಡಿದಾಗ, ಧೈರ್ಯದಿಂದ ನಿಲ್ಲುವ ರಾಷ್ಟ್ರವನ್ನು ನಾವು ನೋಡುತ್ತೇವೆ ಎಂದರು.
ಜಾಗತಿಕ ದಕ್ಷಿಣಕ್ಕೆ ಧ್ವನಿ ನೀಡದೆ ಪ್ರಗತಿ ಸಾಧ್ಯವಿಲ್ಲ
ಇದರೊಂದಿಗೆ, ಜಾಗತಿಕ ದಕ್ಷಿಣವನ್ನು ಜಗತ್ತು ನಿರ್ಲಕ್ಷಿಸುವುದನ್ನು ಮುಂದುವರಿಸಲು ಸಾಧ್ಯವಿಲ್ಲ. ಯಾಕೆಂದರೆ ಜಾಗತಿಕ ದಕ್ಷಿಣಕ್ಕೆ ಧ್ವನಿ ನೀಡದೆ ಪ್ರಗತಿ ಬರಲು ಸಾಧ್ಯವಿಲ್ಲ. ಹಾಗಾಗಿ, ಪ್ರತಿಯೊಂದು ಸವಾಲನ್ನು ಘನತೆ ಮತ್ತು ಸಭ್ಯತೆಯಿಂದ ಎದುರಿಸುವ ರಾಷ್ಟ್ರವಾಗಿರುವ ಘಾನಾದ ಸಮಗ್ರ ಪ್ರಗತಿಯು ಇಡೀ ಆಫ್ರಿಕನ್ ಖಂಡಕ್ಕೆ ಸ್ಫೂರ್ತಿಯ ಕೇಂದ್ರವನ್ನಾಗಿ ಮಾಡಿದೆ ಎಂದರು.
Comments