ಮೂರು ಬಾರಿ ''ಅಲ್ಲಾಹು ಅಕ್ಬರ್' ಅಂತ ಕೂಗಿದ ಜಿಪ್‌ಲೈನ್ ಆಪರೇಟರ್; ಎಲ್ಲಾ ಆಯಾಮಗಳಲ್ಲಿ NIA ತನಿಖೆ
- Ananthamurthy m Hegde
- Apr 29
- 1 min read
ನವದೆಹಲಿ: ಪಹಲ್ಗಾಮ್ ದಾಳಿಯ ವೇಳೆ ಉಗ್ರರಿಂದ ಗುಂಡಿನ ಸದ್ದು ಕೇಳುತ್ತಿದ್ದಂತೆಯೇ ಜಿಪ್ ಲೈನ್ ಆಪರೇಟರ್ 'ಅಲ್ಲಾಹು ಅಕ್ಬರ್' ಎಂದು ಮೂರು ಬಾರಿ ಹೇಳಿರುವುದು ಇದೀಗ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ದಾಳಿಯಲ್ಲಿ ಆತನ ಪಾತ್ರನ ಕುರಿತು ರಾಷ್ಟ್ರೀಯ ತನಿಖಾ ದಳ (NIA)ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್ ಐ ವರದಿ ಮಾಡಿದೆ.

ಏಪ್ರಿಲ್ 22 ರಂದು ಉಗ್ರರ ದಾಳಿಯ ಕ್ಷಣಗಳು ಪಹಲ್ಗಾಮ್ ಗೆ ತೆರಳಿದ್ದ ಪ್ರವಾಸಿಗರೊಬ್ಬರ ವಿಡಿಯೋದಲ್ಲಿ ದಾಖಲಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಜಿಪ್ ಲೈನ್ ಆಪರೇಟರ್ ಮೂರು ಬಾರಿ ಅಲ್ಲಾಹು ಅಕ್ಬರ್ ಎಂದು ಹೇಳುವುದು ಇದೆ. 53 ಸೆಕೆಂಡ್ ಗಳ ವಿಡಿಯೋವನ್ನು ಗುಜರಾತ್ ನ ಪ್ರವಾಸಿಗ ರಿಷಿ ಭಟ್ ಸೆಲ್ಫಿ ಸ್ಟಿಕ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಗುಂಡಿನ ಸದ್ದು ಕೂಡ ಕೇಳಿಬರುತ್ತದೆ.
ವೈರಲ್ ವಿಡಿಯೋ ಕುರಿತು ಅಹಮಾದಾಬಾದ್ ನಲ್ಲಿ ANI ಜೊತೆಗೆ ಮಾತನಾಡಿದ ರಿಷಿ ಭಟ್, ಮೂರು ಬಾರಿ ಅಲ್ಲಾಹು ಅಕ್ಬರ್ ಅಂತಾ ಘೋಷಣೆ ಕೂಗಿದ ಕಾಶ್ಮೀರಿ ಜಿಪ್ ಲೈನ್ ಆಪರೇಟರ್ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ನನಗಿಂತ ಮೊದಲು ಒಂಬತ್ತು ಜನರು ಜಿಪ್‌ಲೈನ್ ಮಾಡಿದರು, ಆದರೆ ಆಪರೇಟರ್ ಒಂದು ಮಾತನ್ನೂ ಹೇಳಿರಲಿಲ್ಲ. ನಾನು ಸ್ಲೈಡಿಂಗ್ ಮಾಡುವಾಗ ಆತ ಮಾತನಾಡಿದ ನಂತರ ಗುಂಡಿನ ಶಬ್ದ ಆರಂಭವಾಯಿತು. ಹಾಗಾಗಿ ಆತನ ಮೇಲೆ ಅನುಮಾನವಿದೆ. ಆತ ಮೂರು ಬಾರಿ ಅಲ್ಲಾಹು ಅಕ್ಬರ್ ಅಂತಾ ಹೇಳಿದ ಮೇಲೆ ಗುಂಡಿನ ದಾಳಿ ಆರಂಭವಾಯಿತು ಎಂದು ಭಟ್ ಹೇಳಿದರು. ನಾನು ಜಿಪ್‌ಲೈನ್ ಮಾಡುವಾಗ ಗುಂಡಿನ ದಾಳಿ ಪ್ರಾರಂಭವಾಯಿತು. ಸುಮಾರು 20 ಸೆಕೆಂಡುಗಳ ನಂತರ, ಇದು ಉಗ್ರರ ದಾಳಿ ಎಂದು ಅರಿವಾಯಿತು. ನೆಲದ ಮೇಲೆ ಜನರು ಸಾಯುತ್ತಿದ್ದರು ಎಂದು ಅವರು ಘಟನೆಯನ್ನು ನೆನಪಿಸಿಕೊಂಡರು.
5-6 ಜನರಿಗೆ ಗುಂಡು ಹಾರಿಸುವುದನ್ನು ನಾನು ನೋಡಿದೆ.ಆದಾದ ನಂತರ ಆತ ಜಿಪ್‌ಲೈನ್‌ನಿಂದ ಬೇರ್ಪಟ್ಟು ತನ್ನ ಕುಟುಂಬದೊಂದಿಗೆ ಓಡಿಹೋದನು. ನಾನು ನನ್ನ ಬೆಲ್ಟ್ ಅನ್ನು ಬಿಚ್ಚಿ ಕೆಳಗೆ ಹಾರಿ, ನನ್ನ ಹೆಂಡತಿ ಮತ್ತು ಮಗನನ್ನು ಕರೆದುಕೊಂಡು ಓಡಿ ಹೋದೆ. ಗುಂಡಿಯಂತಿದ್ದ ಸ್ಥಳದಲ್ಲಿ ಜನರು ಅಡಗಿಕೊಂಡಿದ್ದನ್ನು ನಾವು ನೋಡಿದ್ದೇವು.ಅಲ್ಲಿ ಯಾರನ್ನಾದರೂ ಸುಲಭವಾಗಿ ಗುರುತಿಸಲು ಸಾಧ್ಯವಿರಲಿಲ್ಲ. ನಾವೂ ಅಲ್ಲೇ ಅಡಗಿಕೊಂಡಿದ್ದೇವು ಎಂದು ಅವರು ಹೇಳಿದರು.
Comments