ಮಕ್ಕಳಲ್ಲಿ ಡೈಯಾಬಿಟೀಸ್ ನಿಯಂತ್ರಿಸುವುದು ಹೇಗೆ ?
- Ananthamurthy m Hegde
- Dec 8, 2024
- 1 min read

ಬದಲಾದ ಜೀವನಶೈಲಿಯಿಂದ ಇಂದು ಮಕ್ಕಳಲ್ಲಿಯೂ ಮಧುಮೇಹವನ್ನು ಸರ್ವೇಸಾಮಾನ್ಯವಾಗಿ ನೋಡುತ್ತಿದ್ದೇವೆ. ಮಕ್ಕಳಲ್ಲಿಯೂ ಟೈಪ್–1 ಮತ್ತು ಟೈಪ್–2 ಡಯಾಬಿಟಿಸ್ ಕಾಣಿಸಿಕೊಳ್ಳುತ್ತಿದ್ದು, ಇದು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ.
ಮಕ್ಕಳಲ್ಲಿ ಪೌಷ್ಟಿಕಾಂಶದ ಸಲಹೆ ನೀಡುವುದಷ್ಟೇ ಅಲ್ಲ, ಸಕ್ಕರೆ ಅಂಶವುಳ್ಳ ಆಹಾರ ಪದಾರ್ಥಗಳು ಮತ್ತು ಸಂಸ್ಕರಿಸಿದ ಆಹಾರಗಳಿಂದ ಎದುರಾಗುವ ಅಪಾಯಗಳ ಕುರಿತು ತಿಳಿಸಬೇಕಾಗಿದೆ. ಮೈದಾ, ಬ್ರೆಡ್ ಬದಲಿಗೆ ಧಾನ್ಯ ಅಥವಾ ಕಡಿಮೆ ಸಕ್ಕರೆ ಅಂಶವುಳ್ಳ ಹಣ್ಣುಗಳನ್ನು ಬಳಕೆ ಮಾಡಬೇಕು. ಇದರಿಂದಾಗಿ ಅಪಾಯಕಾರಿ ಜೀವನಶೈಲಿಯನ್ನು ಬದಲಾಯಿಸಲು ಸಾಧ್ಯವಿದೆ.
ಮಧುಮೇಹ ದೈಹಿಕ ಆರೋಗ್ಯದ ಮೇಲಷ್ಟೇ ಅಲ್ಲ, ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಮಕ್ಕಳಿಗೆ ಅವರ ಸ್ಥಿತಿಯ ಬಗ್ಗೆ ಅರ್ಥ ಮಾಡಿಸುವುದು ಮುಖ್ಯವಾಗುತ್ತದೆ. ಇದರಿಂದ ಮಧುಮೇಹವನ್ನು ಸುಲಭವಾಗಿ ನಿರ್ವಹಣೆ ಮಾಡಬಹುದು. ಸ್ನೇಹಿತರೊಂದಿಗೆ ಕೂಡಿದಾಗ ಮಕ್ಕಳು ಒತ್ತಡವನ್ನು ಅನುಭವಿಸುತ್ತಾರೆ. ಇದು ಅವರ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಮಕ್ಕಳಿಕೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು.
ಮಕ್ಕಳನ್ನು ನಿಯಂತ್ರಿಸುವ ಬದಲು ಅವರಿಗೆ ಆಹಾರ ಸಿದ್ಧಪಡಿಸಿಕೊಳ್ಳಲು ಬಿಡಬೇಕು. ಇದು ಅವರ ಆತ್ಮಸ್ಥೈರ್ಯವನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕರ ಆಹಾರ ಸೇವನೆ ರೂಢಿಸಿಕೊಳ್ಳಲು ಸಹಾಯ ಮಾಡುತ್ತದೆ. ಇಲ್ಲದೆ, ದೈಹಿಕ ಚಟುವಟಿಕೆ ಕೂಡ ನಿರ್ಣಾಯವಾಗಿದ್ದು, ಈ ಬಗ್ಗೆಯೂ ಅರಿವು ಮೂಡಿಸಬೇಕು. ವ್ಯಾಯಾಮವು ಮಧುಮೇಹವನ್ನು ನಿರ್ವಹಿಸಲು ಸಹಾಯ ಮಾಡುವ ಸರಳ ಮಾರ್ಗಗಳಲ್ಲಿ ಒಂದಾಗಿದೆ. ಇದು ಅವರ ಮಾನಸಿಕ ಯೋಗಕ್ಷೇಮಕ್ಕೂ ಒಳ್ಳೆಯದು.
ಮಕ್ಕಳಲ್ಲಿ ಮಧುಮೇಹ ನಿಯಂತ್ರಿಸಲು ಸಮತೋಲಿತ ಮತ್ತು ಪೌಷ್ಟಿಕ ಆಹಾರ ಅತ್ಯಗತ್ಯ. ಹೆಚ್ಚು ತರಕಾರಿ, ಹಣ್ಣು, ಧಾನ್ಯ ಮತ್ತು ಪ್ರೋಟೀನ್ ಸೇವನೆ ಹೆಚ್ಚಾಗಿರಲಿ. ಸಕ್ಕರೆ, ಕಾರ್ಬೋಹೈಡ್ರೇಟ್ ಆಹಾರದ ಮೇಲೆ ಸಂಪೂರ್ಣ ನಿಯಂತ್ರಣ ಇರಿಸಬೇಕು.
ಮಕ್ಕಳನ್ನು ನಿಯಮಿತ ಏರೋಬಿಕ್ ವ್ಯಾಯಾಮ, ಕ್ರೀಡೆಯಲ್ಲಿ ತೊಡಗಿಸುವುದು ಸೇರಿದಂತೆ ದೈಹಿಕ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರುವಂತೆ ನೋಡಿಕೊಳ್ಳಬೇಕು.
ಈ ಕೆಳಗಿನ ಆರೋಗ್ಯಕರ ಸಿಹಿ ಪದಾರ್ಥಗಳನ್ನು ಮಧುಮೇಹ ಇರುವ ಮಕ್ಕಳಿಗೆ ನೀಡಬಹುದು :
ಡಾರ್ಕ್ ಚಾಕೊಲೇಟ್
ಸಿರಿಧಾನ್ಯದ ಹಿಟ್ಟು
ಡ್ರೈಫ್ರೂಟ್ಸ್ ಲಡ್ಡು
ಹಣ್ಣುಗಳಿಂದ ತಯಾರಿಸಿದ ತಿನಿಸುಗಳು
ಸ್ಮೂಥಿಸ್, ಮೊಸರು, ಕಸ್ಟರ್ಡ್ ಇತ್ಯಾದಿ
ಚಿಕ್ಕಿ, ಮಖಾನ, ಧಾನ್ಯಗಳಿಂದ ಮಾಡಿದ ಬಿಸ್ಕೆಟ್.
ಮಕ್ಕಳಲ್ಲಿ ಮಧುಮೇಹ ಬಂದಾಗ ಪೋಷಕರು ತಾಳ್ಮೆಯಿಂದ ವರ್ತಿಸಬೇಕಾಗುತ್ತದೆ . ಮಕ್ಕಳನ್ನು ಸೂಕ್ಷ್ಮವಾಗಿ ಸಂಭಾಳಿಸಬೇಕಾಗುತ್ತದೆ .
ಪೋಷಕರಿಗೊಂದಿಷ್ಟು ಸಲಹೆಗಳು:
ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿ.
ಆರೋಗ್ಯದ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಿ.
ನಿಮ್ಮ ಕೆಲಸಗಳಲ್ಲಿ ಅವರನ್ನು ತೊಡಗಿಸಿಕೊಳ್ಳಿ
ಭಾವನಾತ್ಮಕ ಬೆಂಬಲ
ಮಕ್ಕಳು ವಿಭಿನ್ನವಾಗಿ ಭಾವಿಸಬೇಡಿ
ಆರೋಗ್ಯಕರ ದಿನಚರಿಯನ್ನು ರೂಪಿಸಿ.
ಅವರ ಪ್ರತಿಯೊಂದು ಕಾರ್ಯಕ್ಕೂ ಪ್ರೋತ್ಸಾಹಿಸಿ.
Comments