ಮಣಿಪುರದಲ್ಲಿ ಭಾರೀ ಶಸ್ತ್ರಾಸ್ತ್ರ, ಮದ್ದುಗುಂಡು ವಶ
- Ananthamurthy m Hegde
- Jan 1
- 1 min read

ಇಂಫಾಲ್: ಮಣಿಪುರದ ಬಿಷ್ಣುಪುರ್ ಮತ್ತು ತೌಬಲ್ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಬಿಷ್ಣುಪುರ್ ಜಿಲ್ಲೆಯ ಥೋಂಗ್‌ಖೋಂಗ್ಲೋಕ್ ಗ್ರಾಮದಲ್ಲಿ ಭದ್ರತಾ ಪಡೆಗಳು ಮಂಗಳವಾರ ಒಂದು ಎಸ್‌ಎಲ್‌ಆರ್‌ನೊಂದಿಗೆ ಒಂದು ಮ್ಯಾಗಜೀನ್, ಒಂದು 303 ರೈಫಲ್, ಒಂದು 12 ಬೋರ್ ಸಿಂಗಲ್ ಬ್ಯಾರೆಲ್ ಗನ್, ಎರಡು 9 ಎಂಎಂ ಪಿಸ್ತೂಲ್ ಜೊತೆಗೆ ಮ್ಯಾಗಜೀನ್, ಒಂದು ಆಂಟಿ-ರಿಯೆಟ್ ಗನ್, ಎರಡು INSAS LMG ಮ್ಯಾಗಜೀನ್, ಎರಡು INSAS ರೈಫಲ್‌ಗಳನ್ನು ವಶಪಡಿಸಿಕೊಂಡಿವೆ. ನಾಲ್ಕು ಕೈ ಗ್ರೆನೇಡ್‌ಗಳು, ಒಂದು ಡಿಟೋನೇಟರ್, ಐದು ಗಲಭೆ ನಿಗ್ರಹ ಶೆಲ್ ಮತ್ತು ಮದ್ದುಗುಂಡುಗಳನ್ನು ಭದ್ರತಾ ಪಡೆಗಳು ಜಪ್ತಿ ಮಾಡಿವೆ.















Comments