ಮಧ್ಯಮ ವರ್ಗಕ್ಕೆ ಶೀಘ್ರದಲ್ಲೇ ಜಿಎಸ್‌ಟಿ ಪರಿಹಾರ
- Ananthamurthy m Hegde
- Jul 2
- 1 min read

ನವದೆಹಲಿ: ಕೇಂದ್ರ ಸರ್ಕಾರ ಮಧ್ಯಮ ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಪರಿಹಾರ ನೀಡಲು ಸರಕು ಮತ್ತು ಸೇವಾ ತೆರಿಗೆ ದರಗಳಲ್ಲಿ ಕಡಿತದ ಯೋಜನೆಯನ್ನು ಪರಿಗಣಿಸುತ್ತಿದೆ. ವರ್ಷದ ಆರಂಭದಲ್ಲಿ ಹಲವಾರು ಆದಾಯ ತೆರಿಗೆ ರಿಯಾಯಿತಿಗಳನ್ನು ನೀಡಿದ ನಂತರ, ಕೇಂದ್ರ ಸರ್ಕಾರ ಈಗ ಮಧ್ಯಮ ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಅನುಕೂಲವಾಗಲೆಂದು ಈ ಯೋಜನೆ ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿದೆ.
ಶೇಕಡ 12ರ ಜಿಎಸ್‌ಟಿ ಸ್ಲ್ಯಾಬ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲು ಅಥವಾ ಈ ದರದಡಿಯಲ್ಲಿ ತೆರಿಗೆ ವಿಧಿಸಲಾಗುವ ವಸ್ತುಗಳನ್ನು ಶೇಕಡ 5ಕ್ಕೆ ಮರುವರ್ಗೀಕರಣ ಮಾಡಲು ಸರಕಾರ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮಧ್ಯಮ ವರ್ಗಕ್ಕೆ ಶೀಘ್ರದಲ್ಲೇ ಜಿಎಸ್‌ಟಿ ಪರಿಹಾರ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ. ಈ ಕ್ರಮವಾದರೆ ದೈನಂದಿನ ಅಗತ್ಯ ವಸ್ತುಗಳ ಬೆಲೆಯನ್ನು ಕಡಿಮೆ ಮಾಡಿ, ಮಧ್ಯಮ ವರ್ಗದ ಆರ್ಥಿಕ ಹೊರೆಯನ್ನು ತಗ್ಗಿಸುವ ಗುರಿಯನ್ನು ಹೊಂದಿದೆ. ಇದರಿಂದ ನಾವು ದಿನನಿತ್ಯ ಬಳಸುವ ಪ್ರತಿಯೊಂದು ಸಾಮಾಗ್ರಿ ಬೆಲೆಯೂ ಅಗ್ಗವಾಗಲಿದೆ.















Comments