top of page

ಯೋಗೇಶ್ವರ ಕಾಂಗ್ರೆಸ್ ಸೇರ್ಪಡೆಯಿಂದ ಹೊಸ ಹುರುಪು : ಶಾಸಕ ಬೇಳೂರು ಗೋಪಾಲಕೃಷ್ಣ

  • Writer: Ananthamurthy m Hegde
    Ananthamurthy m Hegde
  • Oct 29, 2024
  • 1 min read

ಯೋಗೇಶ್ವರ ಕಾಂಗ್ರೆಸ್ ಸೇರ್ಪಡೆಯಿಂದ ಹೊಸ ಹುರುಪು : ಶಾಸಕ ಬೇಳೂರು ಗೋಪಾಲಕೃಷ್ಣ

ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿ ಆದ ನಂತರ ಆರ್. ಅಶೋಕ್, ವಿಜಯೇಂದ್ರ ಹಾಗೂ ನಾರಾಯಣಸ್ವಾಮಿ ಯಾರ ಮಾತು ನಡೆಯಲ್ಲ ಈಗ ನಡೆಯುತ್ತಾ ಇರೋದು ಎಚ್.ಡಿ ಕುಮಾರಸ್ವಾಮಿ ಅವರ ಮಾತು ಮಾತ್ರ. ಯೋಗೇಶ್ವರವರನ್ನು ನಾವಾಗಿ ಏನು ಕರೆದುಕೊಂಡು ಬಂದಿಲ್ಲ. ಬಿಜೆಪಿ ಪಕ್ಷದಲ್ಲಿ ಇದ್ದವರು ನಾಯಕರಾಗಿದ್ದರು ಎಂ.ಎಲ್.ಸಿ ಆಗಿದ್ದವರು ಸ್ವತಃ ರಾಜೀನಾಮೆ ಕೊಟ್ಟು ನಮ್ಮ ಪಕ್ಷಕ್ಕೆ ಬಂದಿದ್ದಾರೆ ಎಂದರೆ ನಮಗೊಂದು ಹೆಮ್ಮೆ. ಇದರಿಂದ ಕಾಂಗ್ರೆಸ್‌ಗೆ ಒಂದು ಶಕ್ತಿ ಬಂದ ಹಾಗೆ. ಖಂಡಿತ ಯೋಗೇಶ್ವರ್ ಅವರು ಬಂದ ನಂತರ ನಮ್ಮ ಚನ್ನಪಟ್ಟಣಕ್ಕೆ ಒಂದು ಶಕ್ತಿ ಬಂದಿದೆ. ಖಂಡಿತ ಅವರನ್ನು ನಾವು ಗೆಲ್ಲಿಸುತ್ತೇವೆ ಎಂದು ಕರ್ನಾಟಕ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಹಾಗೂ ಸಾಗರ ವಿಧಾನಸಭಾ ಕ್ಷೇತ್ರ ಶಾಸಕ ಬೇಳೂರು ಗೋಪಾಲ ಕೃಷ್ಣ ಹೇಳಿದರು.

ಅವರು ಸಿದ್ದಾಪುರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ರವಿವಾರ ಮಾತನಾಡಿದರು. ರಸ್ತೆಗಳು ಅಭಿವೃದ್ಧಿ ಆಗುತ್ತಿಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ ಪಿ.ಎಂ.ಜಿ.ಎಸ್.ವೈ ರಸ್ತೆ ಕೇಂದ್ರ ಸರ್ಕಾರದವರು ಕೊಟ್ಟರೆ ಸಿಎಂಜೆಸ್ ರಸ್ತೆಯನ್ನು ರಾಜ್ಯ ಸರ್ಕಾರ ಕೊಡುತ್ತಿದೆ. ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಮಾಡಬೇಕೆಂಬುದು ಈ ರಾಜ್ಯ ಸರ್ಕಾರದಲ್ಲಿದೆ ಹಾಗಾಗಿ ಯಾವುದೇ ಕೊರತೆ ಇಲ್ಲದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು ನಾವು ಅದನ್ನೆಲ್ಲ ಮಾಡುತ್ತೇವೆ ಎಂದರು. ಈ ಸಂದರ್ಭದಲ್ಲಿ ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಪ್ಪ,ಪ್ರಮುಖರಾದ ತಾರಾನಾಥ, ಗಣಪತಿ ಮಂಡಗಳಲೆ, ಮಾರುತಿ ಕಿಂದ್ರಿ, ನಾಸಿರ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.

Comments


Top Stories

bottom of page