top of page

ರಾಷ್ಟ್ರ ರಾಜಧಾನಿಯಲ್ಲಿ ಮತ್ತಷ್ಟು ಬಿಗಡಾಯಿಸಿದ ಹವಾಮಾನ

  • Writer: Ananthamurthy m Hegde
    Ananthamurthy m Hegde
  • Nov 5, 2024
  • 1 min read

ree

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾತಾವರಣವು ಮತ್ತಷ್ಟು ಹದಗೆಟ್ಟಿದ್ದು, ಅತ್ಯಂತ ಕಳಪೆ ವಾಯು ಗುಣಮಟ್ಟ ಹೊಂದಿದೆ ಎಂದು ವರದಿಯಾಗಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಅಂಕಿ ಅಂಶಗಳ ಪ್ರಕಾರ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ಬೆಳಿಗ್ಗೆ ೯ ಗಂಟೆಗೆ ೩೮೪ರಷ್ಟಿತ್ತು.

ಆನಂದ್ ವಿಹಾರ್, ಅಶೋಕ್ ವಿಹಾರ್, ದ್ವಾರಕಾ, ಎನ್‌ಎಸ್‌ಐಟಿ ದ್ವಾರಕಾ, ನೆಹರು ನಗರ, ಮೋತಿ ಮಾರ್ಗ, ಸೋನಿಯಾ ವಿಹಾರ್, ವಿವೇಕ್ ವಿಹಾರ್, ವಜೀರ್‌ಪುರ್, ರೋಹಿಣಿ, ಪಂಜಾಬಿ ಬಾಗ್, ಮುಂಡ್ಕಾ ಮತ್ತು ಜಹಾಂಗೀರ್‌ಪುರಿ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಕಳಪೆ ಎಂದು ಉಲ್ಲೇಖಿಸಲಾಗಿದೆ.

ವಾಯು ಗುಣಮಟ್ಟ ಮಾಪನ ಸೂಚ್ಯಂಕದ ಅನುಸಾರ, ೦ ಮತ್ತು ೫೦ ರ ನಡುವಿನ ಎಕ್ಯೂಐ ಅನ್ನು 'ಉತ್ತಮ', ೫೧ ಮತ್ತು ೧೦೦ 'ತೃಪ್ತಿದಾಯಕ', ೧೦೧ ಮತ್ತು ೨೦೦ 'ಮಧ್ಯಮ', ೨೦೧ ಮತ್ತು ೩೦೦ 'ಕಳಪೆ', ೩೦೧ ಮತ್ತು ೪೦೦ 'ಅತಿ ಕಳಪೆ', ಮತ್ತು ೪೦೧ ಮತ್ತು ೫೦೦ 'ತೀವ್ರ' ಎಂದು ಪರಿಗಣಿಸಲಾಗುತ್ತದೆ.

Comments


Top Stories

bottom of page