ವಿಮಾನ ಅಪಘಾತದ ನಂತರ ಏರ್ ಇಂಡಿಯಾ ವಿರುದ್ಧ ಕ್ರಮ; ಮೂರು ಅಧಿಕಾರಿಗಳಿಗೆ ಕೊಕ್
- Ananthamurthy m Hegde
- Jun 21
- 1 min read

ಅಹಮದಾಬಾದ್ ವಿಮಾನ ಅಪಘಾತದ ನಂತರ, ನಾಗರಿಕ ವಿಮಾನಯಾನ ನಿರ್ದೇಶನಾಲಯ ಏರ್ ಇಂಡಿಯಾ ವಿರುದ್ಧ ಮೊದಲ ಪ್ರಮುಖ ಕ್ರಮ ಕೈಗೊಂಡಿದೆ. ಅಹಮದಾಬಾದ್ನಲ್ಲಿ ಸಂಭವಿಸಿದ ಅಪಘಾತ ಸಂಬಂಧ ಏರ್ ಇಂಡಿಯಾಕ್ಕೆ ನೀಡಿದ ಆದೇಶದಲ್ಲಿ, DGCA ನೇರವಾಗಿ ವಿಮಾನಯಾನ ಸಂಸ್ಥೆಯ ಮೂವರು ಹಿರಿಯ ಅಧಿಕಾರಿಗಳನ್ನು ಅವರ ಕೆಲಸದಿಂದ ತೆಗೆದುಹಾಕುವಂತೆ ಆದೇಶಿಸಿದೆ.
ವಿಮಾನ ಸಿಬ್ಬಂದಿಯ ವೇಳಾಪಟ್ಟಿಯಲ್ಲಿ ಗಂಭೀರ ಮತ್ತು ಪುನರಾವರ್ತಿತ ತಪ್ಪುಗಳಿಂದಾಗಿ DGCA ಈ ಕ್ರಮ ಕೈಗೊಂಡಿದೆ. ಅದಾಗ್ಯೂ, ಈ ತಪ್ಪುಗಳ ಬಗ್ಗೆ DGCAಗೆ ತಿಳಿಸಲಾಯಿತು. ಏರ್ ಇಂಡಿಯಾ ಅವರು ಇದನ್ನು ಹೇಳಿದ್ದರೂ ಸಹ, ಡಿಜಿಸಿಎ ಇದನ್ನು ವ್ಯವಸ್ಥೆಯ ಗಂಭೀರ ವೈಫಲ್ಯವೆಂದು ಪರಿಗಣಿಸಿದೆ.
ಅಹಮದಾಬಾದ್ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವಿಮಾನದಲ್ಲಿದ್ದ ಪೈಲಟ್, ಸಿಬ್ಬಂದಿ, ಪ್ರಯಾಣಿಕರು ಸೇರಿ 242 ಮಂದಿ ಪೈಕಿ 241 ಮಂದಿ ಸಾವನಪ್ಪಿದ್ದಾರೆ. ಜೊತೆಗೆ ಹಾಸ್ಟೆಲ್ನ ವಿದ್ಯಾರ್ಥಿಗಳು ಮತ್ತು ಸ್ಥಳೀಯ ನಿವಾಸಿಗಳು ಕೂಡ ಅಪಘಾತದಲ್ಲಿ ಸಾವು ನೋವು ಅನುಭವಿಸಿದ್ದಾರೆ. ಈ ಪ್ರಕರಣ ಸಂಬಂಧ ಇದೀಗ DGCA ಏರ್ ಇಂಡಿಯಾ ವಿರುದ್ಧ ಮೊದಲ ಕ್ರಮ ಕೈಗೊಂಡಿದೆ. ಮೂವರು ಅಧಿಕಾರಿಗಳನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದೆ.















Comments