top of page

ವಿಮಾನ ಪತನದಲ್ಲಿ 38 ಮಂದಿ ಮೃತ

  • Writer: Ananthamurthy m Hegde
    Ananthamurthy m Hegde
  • Dec 26, 2024
  • 1 min read

ಕಝಾಕಿಸ್ತಾನ್‌ನಲ್ಲಿ ವಿಮಾನ ಪತನಕ್ಕೀಡಾದ ಘಟನೆ ಬುಧವಾರ ನಡೆದಿದೆ . ವಿಮಾನ ಪತನಡಾ ಅಂತಿಮ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕ್ಯಾಸ್ಪಿಯನ್ ಸಮುದ್ರದ ಪೂರ್ವ ತೀರದಲ್ಲಿರುವ ತೈಲ ಮತ್ತು ಅನಿಲ ಕೇಂದ್ರವಾದ ಅಕ್ಟೌ ಬಳಿ ಅಪಘಾತ ನಡೆದಿದ್ದು, 38 ಮಂದಿ ಮೃತ ಪಟ್ಟಿದ್ದಾರೆ.

ವಿಡಿಯೋದಲ್ಲಿ ವಿಮಾನವು ಕಡಿದಾದ ಇಳಿಜಾರಿಗೆ ಹೋಗುತ್ತಿರುವಾಗ ಪ್ರಯಾಣಿಕರು “ಅಲ್ಲಾಹು ಅಕ್ಬರ್” ಎಂದು ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ. ಹಳದಿ ಆಕ್ಸಿಜನ್​ ಮಾಸ್ಕ್​ಗಳು ಸೀಟ್​ಗಳ ಮೇಲೆ ತೂಗಾಡುತ್ತಿರುವುದು ಕಂಡುಬಂದಿದ್ದು, ಕಿರುಚುವುದು ಮತ್ತು ಅಳುವುದು ವಿಡಿಯೋದಲ್ಲಿ ಕೇಳಿಬಂದಿದೆ .

ಅಪಘಾತ ಹೇಗಾಯ್ತು?

ವಿಮಾನವು ಅಜರ್ಬೈಜಾನಿ ರಾಜಧಾನಿ ಬಾಕುದಿಂದ ಕ್ಯಾಸ್ಪಿಯನ್‌ನ ಪಶ್ಚಿಮ ತೀರದಲ್ಲಿರುವ ದಕ್ಷಿಣ ರಷ್ಯಾದ ಚೆಚೆನ್ಯಾದ ಗ್ರೋಜ್ನಿ ನಗರಕ್ಕೆ ಹಾರುತ್ತಿತ್ತು. ಅಜೆರ್ಬೈಜಾನ್ ಏರ್ಲೈನ್ಸ್ ವಿಮಾನವು ಅಕ್ಟೌದಿಂದ 3 ಕಿಮೀ ದೂರದಲ್ಲಿ “ತುರ್ತು ಲ್ಯಾಂಡಿಂಗ್ ಮಾಡಿದೆ” ಎಂದು ಹೇಳಿದೆ. ಪ್ರಯಾಣಿಕ ವಿಮಾನದ ಅಪಘಾತದಲ್ಲಿ 32 ಜನರು ಬದುಕುಳಿದರು ಎಂದು ಅಜೆರ್ಬೈಜಾನಿ ಅಧಿಕಾರಿಗಳು ತಿಳಿಸಿದ್ದಾರೆ.

ಅಜೆರ್ಬೈಜಾನಿ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರು ಗುರುವಾರ ರಾಷ್ಟ್ರೀಯ ಶೋಕಾಚರಣೆಯ ದಿನವನ್ನು ಘೋಷಿಸಿದರು. ಮಾಜಿ ಸೋವಿಯತ್ ರಾಷ್ಟ್ರಗಳ ಗುಂಪಿನ ಕಾಮನ್ವೆಲ್ತ್ ಆಫ್ ಇಂಡಿಪೆಂಡೆಂಟ್ ಸ್ಟೇಟ್ಸ್ (ಸಿಐಎಸ್) ನಾಯಕರ ಅನೌಪಚಾರಿಕ ಶೃಂಗಸಭೆಗಾಗಿ ರಷ್ಯಾಕ್ಕೆ ಯೋಜಿತ ಭೇಟಿಯನ್ನು ರದ್ದುಗೊಳಿಸಿದರು. ವಿಮಾನ ಪತನಗೊಂಡಾಗ ಉಂಟಾದ ಬೆಂಕಿಯನ್ನು ಅದರ ಸಿಬ್ಬಂದಿ ನಂದಿಸಿದ್ದಾರೆ ಎಂದು ಕಝಕ್ ತುರ್ತು ಪರಿಸ್ಥಿತಿಗಳ ಸಚಿವಾಲಯ ತಿಳಿಸಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲು ತಜ್ಞ ವೈದ್ಯರೊಂದಿಗೆ ಕಝಕ್ ರಾಜಧಾನಿ ಅಸ್ತಾನಾದಿಂದ ವಿಶೇಷ ವಿಮಾನವನ್ನು ಕಳುಹಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.


Comments


Top Stories

bottom of page