top of page

ಶಬರಿಮಲೆ ಪೂಜೆಗಳ ವೇಳಾಪಟ್ಟಿ ಇಲ್ಲಿದೆ

  • Writer: Ananthamurthy m Hegde
    Ananthamurthy m Hegde
  • Jan 1
  • 1 min read

ಪೆರ್ಲ: ಮಕರಜ್ಯೋತಿ ತೀರ್ಥಾಟನೆ ಸಂಬಂಧಿಸಿದಂತೆ ಜ‌.15ರವರೆಗಿನ ಆನ್ ಲೈನ್ ಬುಕ್ಕಿಂಗ್ ಈಗಾಗಲೆ ಪೂರ್ಣಗೊಂಡಿದೆ. ಜನವರಿ 11 ರವರೆಗೆ ಆನ್ ಲೈನ್ ಬುಕ್ಕಿಂಗ್ ಸಂಖ್ಯೆ 70 ಸಾವಿರಕ್ಕೆ ನಿಗದಿಪಡಿಸಲಾಗಿದೆ. ಇದುವರೆಗೆ ಬುಕ್ ಮಾಡದವರಿಗೆ ಸ್ಪಾಟ್ ಬುಕ್ಕಿಂಗ್ ಮಾತ್ರ ಆಯ್ಕೆಯಾಗಿದೆ. ಆದರೆ ಜ.12ರಿಂದ 14ರವರೆಗೆ ಸ್ಪಾಟ್ ಬುಕ್ಕಿಂಗ್ ಕೂಡಾ ತೆರವುಗೊಳಿಸಲಾಗಿದೆ.

ree

ಮಕರಜ್ಯೋತಿ ತೀರ್ಥಾಟನೆಯ ಪ್ರಧಾನ ದಿನಗಳಾದ ಜ.12 ರಿಂದ 14 ರವರೆಗೆ ದಟ್ಟಣೆ ನಿಯಂತ್ರಣದ ಭಾಗವಾಗಿ ಆನ್ ಲೈನ್ ಬುಕ್ಕಿಂಗ್ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಜ.12ರಂದು 60 ಸಾವಿರ, ಜ.13ರಂದು 50 ಸಾವಿರ ಮತ್ತು ಜ.14ರಂದು 40 ಸಾವಿರಕ್ಕೆ ಸೀಮಿತಗೊಳಿಸಲಾಗಿದೆ. ಈ ದಿನಗಳಲ್ಲಿ ಈಗಾಗಲೆ ಬುಕ್ಕಿಂಗ್ ಪೂರ್ಣಗೊಂಡಿದ್ದು, ಸ್ಪಾಟ್ ಬುಕ್ಕಿಂಗ್ ಸೌಲಭ್ಯವನ್ನೂ ತೆರೆವುಗೊಳಿಸಲಾಗಿದೆ.

ಜ.15ರಂದು 70 ಸಾವಿರ ಬುಕ್ಕಿಂಗ್ ಈಗಾಗಲೆ ಪೂರ್ಣಗೊಂಡಿದೆ. ಜ.15ರಿಂದ ಸನ್ನಿಧಾನಂನಲ್ಲಿ ಮೆಟ್ಟಿಲಪೂಜೆ ಆರಂಭವಾಗಲಿದೆ. ಜ.18ರವರೆಗೆ ಯಾತ್ರಾರ್ಥಿಗಳಿಗೆ ತುಪ್ಪಾಭಿಷೇಕ ಮಾಡಿಸಬಹುದು. ಜ.19ರವರೆಗೆ ಯಾತ್ರಾರ್ಥಿಗಳಿಗೆ ಅಯ್ಯಪ್ಪ ದರ್ಶನ ಪಡೆಯಬಹುದು. ಅಂದು ಮಕರಜ್ಯೋತಿ ತೀರ್ಥಾಟನೆ ಸಮಾರೋಪದ ಅಂಗವಾಗಿ ಶರಂಗುತ್ತಿಯಲ್ಲಿ ಗುರುತಿ ಪೂಜೆ ನಡೆಯಲಿದೆ.

ಜ.20ರಂದು ಬೆಳಗ್ಗೆ ಪಂದಳಂ ಅರಮನೆಯ ರಾಜಪ್ರತಿನಿಧಿ ತೃಕ್ಕೇಟ್ಟನಾಳ್ ರಾಜರಾಜವರ್ಮ ಅಯ್ಯಪ್ಪ ದರ್ಶನ ಪಡೆಯಲಿದ್ದು ಇತರರಿಗೆ ದರ್ಶನಕ್ಕೆ ಅವಕಾಶವಿಲ್ಲ. ರಾಜಪ್ರತಿನಿಧಿ 18 ಮೆಟ್ಟಿಲಿಳಿದು ತಿರುವಾಭರಣದೊಂದಿಗೆ ಮರಳುವರು.ದೇಗುಲ ಮುಚ್ಚಿ ಕೀಲಿ ಕೈ ಹಸ್ತಾಂತರಿಸುವುದೊಂದಿಗೆ ಈ ಬಾರಿಯ ಮಕರಜ್ಯೋತಿ ತೀರ್ಥಾಟನೆ ಸಂಪನ್ನಗೊಳ್ಳಲಿದೆ.

ಪಂಪಾದ ಸ್ಪಾಟ್ ಬುಕ್ಕಿಂಗ್ ಕೇಂದ್ರದಲ್ಲಿ ಸೋಮವಾರ ಭಕ್ತರಿಗೆ 5 ಗಂಟೆಗೂ ಹೆಚ್ಚು ಕಾದು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಶಬರಿಮಲೆ ವೇಳಾಪಟ್ಟಿ:

3 ನಡೆ ತೆರೆಯುವುದು

೩.೦೫ ರಿಂದ ಅಭಿಷೇಕ

3.30 ಗಣಪತಿ ಹೋಮ

3.45ರಿಂದ 7, 8ರಿಂದ 11ರವರೆಗೆ ತುಪ್ಪಾಭಿಷೇಕ

7.30ಕ್ಕೆ ಉಷಃ ಪೂಜೆ

11 ಕಲಶಾಭಿಷೇಕ

12 ಕಳಭಾಭಿಷೇಕ,

* 12.30ಕ್ಕೆ ಮಧ್ಯಾಹ್ನದ ಪೂಜೆ

* 1 ನಡೆ ಮುಚ್ಚುವುದು

* ಸಂಜೆ 3ಕ್ಕೆ ನಡೆ ತೆರೆಯುವುದು

* 6.30ಕ್ಕೆ ದೀಪಾರಾಧನೆ

* ರಾತ್ರಿ 7ರಿಂದ ಪುಷ್ಪಾಭಿಷೇಕ,

* 9.30ಕ್ಕೆ ರಾತ್ರಿ ಪೂಜೆ

* 10.50 ಹರಿವರಾಸನಂ

•11ಕ್ಕೆ ನಡೆ ಮುಚ್ಚುವುದು‌.

ಮುಂಜಾನೆ 3 ರಿಂದ ಮಧ್ಯಾಹ್ನ 1, ಸಂಜೆ 3ರಿಂದ ರಾತ್ರಿ 11ರವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ

Comments


Top Stories

bottom of page