top of page

ಸೋನ್ ಪ್ರಯಾಗ್ ಬಳಿ ಭೂಕುಸಿತ; ಕೇದಾರನಾಥ್ ಯಾತ್ರೆಗೆ ತಾತ್ಕಾಲಿಕವಾಗಿ ಸ್ಥಗಿತ

  • Writer: Ananthamurthy m Hegde
    Ananthamurthy m Hegde
  • Jul 3
  • 1 min read
ree

ಉತ್ತರಾಖಂಡ: ಕೇದಾರನಾಥ್ ದೇಗುಲದ ಚಾರಣ ಮಾರ್ಗದಲ್ಲಿರುವ ಸೋನ್ ಪ್ರಯಾಗ್ ಬಳಿಯ ಮುಂಕಟಿಯಾದಲ್ಲಿ ಭಾರಿ ಮಳೆಯಿಂದಾಗಿ ಭೂ ಕುಸಿತ ಸಂಭವಿಸಿದ್ದು, ಕೇದಾರನಾಥ್ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಕಟಿಯಾ ಪ್ರದೇಶದಲ್ಲಿ ರಸ್ತೆ ಸಂಪೂರ್ಣ ಕಲ್ಲು ಮಣ್ಣಿನಿಂದ ಮುಚ್ಚಿಹೋಗಿದ್ದು, ಸ್ಥಲಾಯ ಆಡಳಿತವು ಕೇದಾರನಾಥ್ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೌರಿಕುಂಡ-ಕೇದಾರನಾಥ ಚಾರಣ ಮಾರ್ಗದಲ್ಲಿ ಯಾತ್ರಿಗಳು ಸಿಲುಕಿಕೊಂಡಿದ್ದು, ಈ ಮಾರ್ಗದ ಸುಮಾರು 20-25 ಮೀಟ‌ರ್ ಉದ್ದದ ರಸ್ತೆ ಮಾರ್ಗವು ಭೂಕುಸಿತದಿಂದ ಹಾನಿಗೊಳಗಾಗಿದೆ. ಸಂಚಾರ ರದ್ದುಗೊಂಡಿದೆ. ಯಾತ್ರಿಕರನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆ ರಕ್ಷಣೆ ಮಾಡಿದ್ದು, ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ.

ಚಾರ್ ಧಾಮ್ ಯಾತ್ರೆಯ ನಾಲ್ಕು ದೇಗುಲಗಳಲ್ಲಿ ಮೂರನೇ ದೇವಾಲಯವಾಗಿರುವ ಕೇದಾರನಾಥವು ಪ್ರಮುಖವಾದದ್ದು. ಅಪಾರ ಸಂಖ್ಯೆಯ ಭಕ್ತರನ್ನು ತನ್ನತ್ತ ಆಕರ್ಷಿಸುತ್ತಿದೆ.

Comments


Top Stories

bottom of page