top of page

ಸುಪ್ರೀಂ ಕೋರ್ಟಿನಲ್ಲಿ ಹಿಂದಿ ಕಲಾಪ : ಅರ್ಜಿ ತಳ್ಳಿ ಹಾಕಿದ ಕೋರ್ಟ್

  • Writer: Ananthamurthy m Hegde
    Ananthamurthy m Hegde
  • Nov 4, 2024
  • 1 min read

ree

ಸುಪ್ರೀಂ ಕೋರ್ಟ್ ಕಲಾಪಗಳು ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಇರಬೇಕು ಎನ್ನುವ ಸಂವಿಧಾನದ ೩೪೮ (೧)ನೇ ವಿಧಿಯನ್ನು ಪ್ರಶ್ನಿಸಿ, ಹಿಂದಿ ಭಾಷೆಯಲ್ಲೂ ಕಲಾಪ ನಡೆಸಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಳ್ಳಿ ಹಾಕಿದೆ.

ಮುಖ್ಯ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲ ಹಾಗೂ ಮನೋಜ್ ಮಿಶ್ರಾ ಅರ್ಜಿಯ ವಿಚಾರಣೆ ನಡೆಸಿದರು.

'ಹಿಂದಿ ಭಾಷೆಗೆ ಮಾತ್ರ ಏಕೆ ವಿಶೇಷ ಪ್ರಾಮುಖ್ಯತೆ' ಎಂದು ಅರ್ಜಿದಾರರಿಗೆ ಸಿಜೆಐ ಚಂದ್ರಚೂಡ್ ಪ್ರಶ್ನಿಸಿದರು. ಅಲ್ಲದೆ ಸುಪ್ರೀಂ ಕೋರ್ಟ್ನಲ್ಲಿ ದೇಶದ ಎಲ್ಲಾ ರಾಜ್ಯಗಳ ಅರ್ಜಿಗಳೂ ಸಲ್ಲಿಕೆಯಾಗುತ್ತವೆ. ಹಾಗಾದರೆ ನಾವು ಸಂವಿಧಾನದಲ್ಲಿ ಮಾನ್ಯತೆ ಲಭಿಸಿರುವ ಎಲ್ಲಾ ಭಾಷೆಗಳಲ್ಲೂ ಕಲಾಪ ನಡೆಸಬೇಕಾ? ಅದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ಸಂವಿಧಾನದ ೩೪೮(೧) ವಿಧಿಯ ಸಿಂಧುತ್ವವನ್ನು ನೀವು ಹೇಗೆ ಪ್ರಶ್ನಿಸಿದ್ದೀರಿ. ಅದು ಸಂವಿಧಾನ ಮೂಲ ಭಾಗವಾಗಿದೆ' ಎಂದು ಚಂದ್ರಚೂಡ್ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ನಲ್ಲಿರುವ ಭಾಷೆಯ ಸಮಸ್ಯೆಯು ನ್ಯಾಯದ ನಿರಾಕರಣೆಗೆ ಕಾರಣವಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು. ಹೆಚ್ಚಿನ ವಿಚಾರಣೆಗೆ ನಿರಾಕರಿಸಿದ ನ್ಯಾಯಪೀಠ, ಅರ್ಜಿಯನ್ನು ತಿರಸ್ಕರಿಸಿತು.

Comments


Top Stories

bottom of page