ಸತೀಶ್ ಸೈಲ್ ಶಾಸಕ ಸ್ಥಾನದಲ್ಲಿ ಮುಂದುವರೆಯಲಿ : ಮಾಜಿ ಸಚಿವ ಅಸ್ನೋಟಿಕರ್
- Ananthamurthy m Hegde
- Oct 29, 2024
- 1 min read
ಕಾರವಾರ: ಶಾಸಕ ಸತೀಶ್ ಸೈಲ್‌ಗೆ ಅದಿರು ನಾಪತ್ತೆ ಪ್ರಕರಣದಲ್ಲಿ ಕೋರ್ಟ್ ಏಳು ವರ್ಷ ಶಿಕ್ಷೆ ತೀರ್ಪು ನೀಡಿದ ಬೆನ್ನಲ್ಲೇ ಶಾಸಕತ್ವ ಅನರ್ಹವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಾರವಾರದಲ್ಲಿ ರಾಜಕೀಯ ಗದಿಗೆದರಿದೆ. ಚುನಾವಣೆ ಘೋಷಣೆ ಆದರೇ ಯಾರು ನಿಲ್ಲಬೇಕು ಎಂಬ ಚರ್ಚೆ ಜೋರಾಗಿದೆ. ಈ ಹಿಂದೆ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಗೆಲುವಿಗೆ ಬೆಂಬಲಿಸಿ ಕಾರಣರಾಗಿದ್ದ ಜೆಡಿಎಸ್‌ನ ಮಾಜಿ ಸಚಿವ ಆಸ್ನೋಟಿಕರ್‌ಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ ನಾಯಕರು ಸಂಪರ್ಕಿಸಿ ಚುನಾವಣೆ ನಡೆದರೆ ಸ್ಪರ್ಧಿಸುವಂತೆ ಕೋರಿಕೊಂಡಿದ್ದಾರೆ. ಹೀಗಾಗಿ ಕುದ್ದು ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಮಂಗಳೂರಿನಿAದ ವಿಡಿಯೋ ಮಾಡಿ ಅಭಿಮಾನಿಗಳಿಗೆ ಶೇರ್ ಮಾಡಿದ್ದಾರೆ.
ಶಾಸಕ ಸೈಲ್ ನನ್ನ ಅಣ್ಣ ಅವರನ್ನು ಈ ಹಿಂದೆ ನಾನು ಬೆಂಬಲಿಸಿ ಗೆಲ್ಲಿಸಿದ್ದೇನೆ. ಮೈನಿಂಗ್ ಪ್ರಕರಣದಲ್ಲಿ ಶಿಕ್ಷೆ ಆಗಿದೆ. ಅವರು ಯಾವತ್ತೂ ನಮ್ಮ ಕುಟುಂಬದ ಪರವಾಗಿ ಇದ್ದರು. ಶಿಕ್ಷೆ ಪ್ರಕಟವಾದ ಮೇಲೆ ಚುನಾವಣೆಗೆ ಸ್ಪರ್ಧಿಸುವಂತೆ ನನಗೆ ಹಲವು ನಾಯಕರು ಕರೆ ಮಾಡುತ್ತಿದ್ದಾರೆ. ಇನ್ನೂ ಕಾನೂನು ಹೋರಾಟವಿದೆ , ಮುಂದೆ ಅವರಿಗೆ ಕಾನೂನಿನ ಜಯ ಸಿಗಲಿ ಎಂದು ಕೇಳಿಕೊಳ್ಳುತ್ತೇನೆ. ಚುನಾವಣೆ , ನಾನೇ ಶಾಸಕ ಎಂದು ಕೆಲವು ನಾಯಕರು ಹೇಳುತ್ತಿದ್ದಾರೆ. ದಯವಿಟ್ಟು ಚುನಾವಣೆ ವಿಷಯ ಮಾತನಾಡೋದು ಬೇಡ. ಸ್ಪಲ್ಪ ತಾಳ್ಮೆ ಬೇಕು. ಎಲ್ಲರಿಗೂ ಎಮ್.ಎಲ್.ಎ ಆಗಬೇಕು ಎಂದು ಆಸೆಯಿದೆ, ದೇವರ, ಜನರ ಆಶಿರ್ವಾದ ಬೇಕು. ನಾವು ಸತೀಶ್ ಸೈಲ್‌ರನ್ನು ಬೆಂಬಲಿಸಿ ಗೆಲ್ಲಿಸಿ ತಂದಿದ್ದೇವೆ. ದೇವರು ಆಶಿರ್ವದಿಸಿ ಅವರೇ ಶಾಸಕ ಸ್ಥಾನದಲ್ಲಿ ಮುಂದುವರೆಯಲಿ ಎಂದು ಹೇಳುವ ಮೂಲಕ ಸತೀಶ್ ಸೈಲ್‌ಗೆ ಬೆಂಬಲ ನೀಡಿದ್ದಾರೆ.
Comments