top of page

'ಸಮಾಜವಾದಿ', 'ಜಾತ್ಯತೀತ' ಪದಗಳ ಪುನರ್ ಪರಿಶೀಲನೆಗೆ ಕರೆ ನೀಡಿದ ಆರ್‌ಎಸ್‌ಎಸ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

  • Writer: Ananthamurthy m Hegde
    Ananthamurthy m Hegde
  • Jun 27
  • 1 min read
ree

ನವದೆಹಲಿ: ಸಂವಿಧಾನದ ಪೀಠಿಕೆಯಲ್ಲಿರುವ ‘ಸಮಾಜವಾದ’ ಮತ್ತು ‘ಜಾತ್ಯತೀತ’ ಪದಗಳನ್ನು ಪರಿಶೀಲಿಸುವಂತೆ ಕರೆ ನೀಡಿದ ಆರ್‌ಎಸ್‌ಎಸ್ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದ್ದಾರೆ.

ಸಂವಿಧಾನದ ಪೀಠಿಕೆಯಲ್ಲಿರುವ 'ಸಮಾಜವಾದಿ' ಮತ್ತು 'ಜಾತ್ಯತೀತ' ಪದಗಳನ್ನು ಪರಿಶೀಲಿಸುವಂತೆ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಗುರುವಾರ ಕರೆ ನೀಡಿದ್ದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಆ ಪದಗಳನ್ನು ಸೇರಿಸಲಾಗಿದೆ, ಆದರೆ ಬಿ.ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಮೂಲ ಪಠ್ಯದಲ್ಲಿ ಅದು ಇರಲಿಲ್ಲ ಎಂದು ಹೇಳಿದ್ದರು.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಆರ್‌ಎಸ್‌ಎಸ್ ಭಾರತದ ಸಂವಿಧಾನವನ್ನು ‘ಎಂದಿಗೂ ಒಪ್ಪಿಕೊಂಡಿಲ್ಲ’. ನವೆಂಬರ್ 30, 1949 ರಿಂದ ಡಾ. ಅಂಬೇಡ್ಕರ್, ನೆಹರು ಮತ್ತು ಅದರ ರಚನೆಯಲ್ಲಿ ಭಾಗಿಯಾಗಿರುವ ಇತರರ ಮೇಲೆ ಅದು ದಾಳಿ ಮಾಡಿತು. ಆರ್‌ಎಸ್‌ಎಸ್‌ನ ಸ್ವಂತ ಮಾತುಗಳಲ್ಲಿ ಹೇಳುವುದಾದರೆ, ಸಂವಿಧಾನವು ಮನುಸ್ಮೃತಿಯಿಂದ ಪ್ರೇರಿತವಾಗಿಲ್ಲ’ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

Comments


Top Stories

bottom of page