top of page

ಹಿಂದೂಗಳ ಮೇಲೆ ಹಲ್ಲೆ : ಖಲಿಸ್ತಾನಿ ಪ್ರತ್ಯೇಕತಾವಾದಿಗಳ ವಿರುದ್ಧ ಬೃಹತ್ ಪ್ರತಿಭಟನೆ

  • Writer: Ananthamurthy m Hegde
    Ananthamurthy m Hegde
  • Nov 5, 2024
  • 1 min read

ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ದೇಗುಲದ ಹೊರಗೆ ನೆರೆದಿದ್ದ ಹಿಂದೂಗಳ ಮೇಲೆ ಹಲ್ಲೆ ನಡೆಸಿದ ಘಟನೆ ಖಂಡಿಸಿ ಸಾವಿರಾರು ಮಂದಿ ಹಿಂದೂಗಳು ಬ್ರಾಂಪ್ಟನ್ ಹಿಂದೂ ಸಭಾ ಮಂದಿರದ ಹೊರಭಾಗದಲ್ಲಿ ಸೋಮವಾರ (ನ.೦೪) ಸಂಜೆ ಬೃಹತ್ ಪ್ರತಿಭಟನೆ ನಡೆಸಿರುವುದಾಗಿ ವರದಿ ತಿಳಿಸಿದೆ.

ಯಾವುದೇ ಕಾರಣಕ್ಕೂ ಕೆನಡಾದಲ್ಲಿರುವ ಖಲಿಸ್ತಾನಿ ಪ್ರತ್ಯೇಕತಾವಾದಿಗಳಿಗೆ ಕೆನಡಾ ರಾಜಕಾರಣಿಗಳು, ಕಾನೂನು ಇಲಾಖೆ ಬೆಂಬಲ ನೀಡಬಾರದೆಂದು ಹಿಂದೂ ಸಂಘಟನೆ ಆಗ್ರಹಿಸಿದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೆನಡಾದಲ್ಲಿರುವ ಹಿಂದೂಗಳ ದೇವಾಲಯವನ್ನು ಗುರಿಯಾಗಿರಿಸಿಕೊಂಡು ಹಲವು ದಾಳಿ ನಡೆಸಲಾಗಿದೆ. ಈ ಹಿಂದೂ ಫೋಬಿಯಾ ದೇಶದಲ್ಲಿ ನಿಲ್ಲಬೇಕು ಎಂದು ಅoಚಿಟiಣioಟಿ ಔಜಿ ಊiಟಿಜus oಜಿ ಟಿoಡಿಣh ಂmeಡಿiಛಿಚಿ (ಅoಊಓಂ) ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿ ಒತ್ತಾಯಿಸಿದೆ.

ಹಿಂದೂಗಳ ದೇವಸ್ಥಾನದ ಮೇಲೆ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ದಾಳಿ ಖಂಡಿಸಿ ಸಾವಿರಾರು ಮಂದಿ ಹಿಂದೂಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆನಡಾದ ಬ್ರಾಂಪ್ಟನ್ ನಲ್ಲಿರುವ ಹಿಂದೂ ದೇವಾಲಯದ ಹೊರಗೆ ಹಿಂದೂಗಳ ಮೇಲೆ ನಡೆದ ಹಲ್ಲೆಯನ್ನು ಭಾರತದ ರಾಜತಾಂತ್ರಿಕರ ಮೇಲೆ ಕೆನಡಾ ಕೈಗೊಂಡ ದ್ವೇಷದ ಕ್ರಮಗಳನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಕಠೋರ ಶಬ್ದಗಳಲ್ಲಿ ಖಂಡಿಸಿ, ಇದು ಹೇಡಿತನದ ಕೃತ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.

Comments


Top Stories

bottom of page