ಹೆಬ್ಬಾರ್ ನಮ್ಮ ಜತೆ ಇದ್ದಾರೆ : ಸಚಿವ ಮಂಕಾಳ ವೈದ್ಯ
- Ananthamurthy m Hegde
- Nov 4, 2024
- 1 min read

ಯಲ್ಲಾಪುರ: ಯಲ್ಲಾಪುರ-ಮುಂಡಗೋಡ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ನಮ್ಮ ಜತೆ ಇದ್ದಾರೆ. ಬಿಜೆಪಿಯಿಂದ 2 ಕಾಲು ತೆಗೆದು ಹೊರಗಿಟ್ಟಿದ್ದೇನೆ ಎಂದು ಹೇಳಿಕೆ ನೀಡಿರುವುದು ಪತ್ರಿಕೆಯಲ್ಲಿ ವರದಿಯಾಗಿರುವುದನ್ನು ನೋಡಿ ತಿಳಿದಿದ್ದೇನೆ. ಒಳ್ಳೆಯ ದಿನ ನೋಡಿ, ನಮ್ಮ ಜತೆ ಬರಲಿದ್ದಾರೆ. ನಾವು ಮುಹೂರ್ತ ನೋಡಿ, ಆಹ್ವಾನ ನೀಡಿದ್ದೇವೆ. ಪುರೋಹಿತರ ಬಳಿ ಒಳ್ಳೆಯ ದಿನ ನೋಡಿ ಕಾಂಗ್ರೆಸ್‌ಗೆ ಬರಲಿದ್ದಾರೆ ಎಂದು ಸಚಿವ ಮಂಕಾಳ ವೈದ್ಯ ಹಾಸ್ಯ ಚಟಾಕಿ ಹಾರಿಸಿದರು.
ಅವರು ಭಾನುವಾರ ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿರುವುದು ರೈತರು ಹಾಗೂ ಬಡವರ ಹಣ. ಆ ಹಣ ಅವ್ಯವಹಾರ ನಡೆಸಿ, ಹಣ ಗುಳುಂ ಮಾಡಿದವರ ಮೇಲೆ ಮುಲಾಜಿಲ್ಲದೇ ಕಾನೂನಿನ ಪ್ರಕಾರ ಕ್ರಮ ವಹಿಸಲು ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ. ಉತ್ತರಕನ್ನಡ ಜಿಲ್ಲೆಯು ಅಭಿವೃದ್ಧಿಯಾಗಲು ಸಹಕಾರಿ ಕ್ಷೇತ್ರದ ಮುಖ್ಯ ಕಾರಣ. ಸಹಕಾರಿ ಕ್ಷೇತ್ರದಲ್ಲಿ ಅವ್ಯವಹಾರಕ್ಕೆ ಆಸ್ಪದವಿಲ್ಲ. ಅವ್ಯವಾಹಾರ ನಡೆಸಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.















Comments