top of page

ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬಂದ ಟಾಟಾ ನ್ಯಾನೋ

  • Writer: Ananthamurthy m Hegde
    Ananthamurthy m Hegde
  • Nov 5, 2024
  • 1 min read

ರತನ್ ಟಾಟಾ ಅವರ ಕನಸಿನ ಕಾರು ನ್ಯಾನೋದ ಹೊಸ ಅಪ್‌ಡೇಟ್ ಮಾಡೆಲ್ ಈಗ ಮಾರುಕಟ್ಟೆಯಲ್ಲಿದೆ. ಸಾಮಾನ್ಯ ಜನರಿಗೂ ಕೈಗೆಟುಕುವ ಬೆಲೆಯಲ್ಲಿ ಕಾರನ್ನು ಒದಗಿಸಬೇಕೆಂಬ ಉದ್ದೇಶದಿಂದ ಪರಿಚಯಿಸಲಾದ ಕಾರು ನ್ಯಾನೋ ಈಗ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬಂದಿದೆ.

ಹೊಸ ಟಾಟಾ ನ್ಯಾನೋ ಸಂಪೂರ್ಣವಾಗಿ ಹೊಸ ಲುಕ್ ಹೊಂದಿದೆ. ಹಳೆಯ ಕಾರಿನ ಚಿಕ್ಕ ಗಾತ್ರ ಉಳಿಸಿಕೊಂಡು, ಆಧುನಿಕ ವಿನ್ಯಾಸವನ್ನು ಪಡೆದಿದೆ. ನಗರದ ರಸ್ತೆಗಳಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಹೊಸ ಹೆಡ್‌ಲೈಟ್ ಮತ್ತು ಬಾಡಿ ಡಿಸೈನ್ ಕಾರಿಗೆ ಹೊಸ ಲುಕ್ ನೀಡಿದೆ.

ಹೊಸ ನ್ಯಾನೋ ಕಾರು 624 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದೆ. ಉತ್ತಮ ಪರ್ಫಾಮೆನ್ಸ್ ಮತ್ತು ಮೈಲೇಜ್ ನೀಡುತ್ತದೆ. ಒಂದು ಲೀಟರ್‌ಗೆ 25-30 ಕಿ.ಮೀ ಮೈಲೇಜ್ ನೀಡುತ್ತದೆ. ಗಂಟೆಗೆ 105 ಕಿ.ಮೀ ವೇಗದಲ್ಲಿ ಚಲಿಸಬಲ್ಲದು. ನಗರ ಮತ್ತು ಹೆದ್ದಾರಿಗಳಿಗೆ ಸೂಕ್ತ.

ಹೊಸ ನ್ಯಾನೋದ ಒಳಭಾಗವನ್ನು ಅಪ್‌ಗ್ರೇಡ್ ಮಾಡಲಾಗಿದೆ. ಪವರ್ ವಿಂಡೋಗಳು, ಏರ್ ಕಂಡಿಷನಿAಗ್ ಮತ್ತು ಅಡ್ವಾನ್ಸ್ಡ್ ಮ್ಯೂಸಿಕ್ ಸಿಸ್ಟಮ್‌ಗಳನ್ನು ಹೊಂದಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಚಾಲಕರಿಗೆ ಅಗತ್ಯ ಮಾಹಿತಿ ನೀಡುತ್ತದೆ. ನಾಲ್ಕು ಜನರಿಗೆ ಆರಾಮವಾಗಿ ಕೂರಲು ಸಾಕಷ್ಟು ಜಾಗವಿದೆ.

ಹೊಸ ನ್ಯಾನೋ ನಗರದ ಸಂಚಾರಕ್ಕೆ ಸೂಕ್ತವಾಗಿದೆ. ಚಿಕ್ಕ ಗಾತ್ರ ಮತ್ತು ತಿರುವು ಸುಲಭವಾಗಿಸುತ್ತದೆ. ಹೆಚ್ಚಿನ ಮೈಲೇಜ್ ದೈನಂದಿನ ಪ್ರಯಾಣಿಕರಿಗೆ ಉತ್ತಮ.

₹2.5 ಲಕ್ಷದ ಆರಂಭಿಕ ಬೆಲೆಯೊಂದಿಗೆ, ಹೊಸ ನ್ಯಾನೋ ಭಾರತದ ಅತ್ಯಂತ ಕೈಗೆಟುಕುವ ನಾಲ್ಕು ಚಕ್ರ ವಾಹನಗಳಲ್ಲಿ ಒಂದಾಗಿದೆ.

Comments


Top Stories

bottom of page