ಹನಿಟ್ರ್ಯಾಪ್ ಬಗ್ಗೆ ದೂರು ನೀಡಲು ಮುಂದಾದ ರಾಜಣ್ಣ
- Ananthamurthy m Hegde
- Mar 25
- 1 min read
ಬೆಂಗಳೂರು : ಹನಿಟ್ರ್ಯಾಪ್ (Honeytrap) ಪ್ರಕರಣ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಸಚಿವ ಕೆಎನ್ ರಾಜಣ್ಣ (KN Rajanna) ಮಾಡಿದ ಹನಿಟ್ರ್ಯಾಪ್ ಆರೋಪ ಕಾಂಗ್ರೆಸ್ನಲ್ಲಿ ಕಂಪನ ಮೂಡಿಸಿದೆ. ಆರೋಪ ಮಾಡಿ ದೂರು ಕೊಡದೆ ಸಚಿವ ರಾಜಣ್ಣ ಸುಮ್ಮನೆ ಇರೋದು ಯಾಕೆ ಎನ್ನುವ ಪ್ರಶ್ನೆ ಮೂಡಿತ್ತು. ಇದೀಗ ಕೊನೆಗೂ ಗೃಹಸಚಿವ ಪರಮೇಶ್ವರ್‌ಗೆ ಕೆಎನ್ ರಾಜಣ್ಣ ಹನಿಟ್ರ್ಯಾಪ್ ಯತ್ನದ ಬಗ್ಗೆ ದೂರು ನೀಡಲು ಮುಂದಾಗಿದ್ದಾರೆ. ಈಗಾಗಲೇ ಕೆಎನ್ ರಾಜಣ್ಣ ಗೃಹಸಚಿವರನ್ನು (Home Minister) ಭೇಟಿಯಾಗಿದ್ದು ಈ ವೇಳೆ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ.
ಸದ್ಯ ಸಚಿವ ಕೆಎನ್ ರಾಜಣ್ಣ ಗೃಹಸಚಿವರನ್ನು ಭೇಟಿಯಾಗಿದ್ದು, ಇಂದು ಸಂಜೆ ವೇಳೆ ದೂರು ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇನ್ನು ಗೃಹಸಚಿವರ ಭೇಟಿ ಬಳಿಕ ಮಾತನಾಡಿದ ರಾಜಣ್ಣ, ನಾನು ಪರಮೇಶ್ವರ್ ಅವರಿಗೆ ದೂರು ನೀಡಿಲ್ಲ, ಇಂದು ಸಂಜೆ ಭೇಟಿಯಾಗುವಂತೆ ಹೇಳಿದ್ದಾರೆ. ದೂರು ನೀಡಿದ ಬಳಿಕ ಪ್ರತಿಯನ್ನು ನೀಡುತ್ತೇನೆ. ದೂರು ನೀಡಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ. ನನ್ನ ಮನೆಯಲ್ಲಿ ಸಿಸಿಟಿವಿ ಇದೆ. ಆದರೆ ಸರ್ಕಾರಿ ನಿವಾಸದಲ್ಲಿ ಸಿಸಿಟಿವಿ ಅಳವಡಿಸಿಲ್ಲ, ಸಾಕ್ಷಿ ಎಲ್ಲಿಂದ ಕೊಡಲಿ ಎಂದು ಹೇಳಿದ್ದಾರೆ.

ಇದೀಗ ಈ ಬಗ್ಗೆ ತುಮಕೂರಿನಲ್ಲಿ ಸಚಿವ ರಾಜಣ್ಣ (Minister Rajanna) ಮಾತಾಡಿದ್ದು, ಹನಿಟ್ರ್ಯಾಪ್ ಸೀಕ್ರೆಟ್ ಅನ್ನು ಬಿಚ್ಚಿಟ್ಟಿದ್ದಾರೆ. ಬಲೆ ಬೀಸಲು ಬಂದಿದ್ಳು ಬ್ಲೂ ಜೀನ್ಸ್ ತೊಟ್ಟ ಬಾಲೆ ಎಂದು ರಾಜಣ್ಣ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ. ಎನ್. ರಾಜಣ್ಣ, ನನಗೆ ಎರಡು ಬಾರಿ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂಬ ಸ್ಫೋಟಕ ವಿಚಾರವನ್ನು ಬಾಯ್ಬಿಟ್ಟಿದ್ದಾರೆ. ಒಬ್ಬನೇ ಹುಡುಗ ಬಂದಿದ್ದ ಆದ್ರೆ 'ಎರಡು ಬಾರಿ ಬಂದಾಗ ಹುಡುಗಿಯರು ಬೇರೆ ಬೇರೆ ಆಗಿದ್ದರು. ಎಂದು ಹನಿಟ್ರ್ಯಾಪ್ ಸೀಕ್ರೆಟ್ ಅನ್ನು ಸಚಿವರು ಬಿಚ್ಚಿದ್ದಾರೆ.
ಲಾಯರ್ ಅಂತ ಹೇಳಿಕೊಂಡು ಬಂದಿದ್ಳು!
ಎರಡನೇ ಬಾರಿ ಬಂದಾಗ ಹೈಕೋರ್ಟ್ ಲಾಯರ್ ಅಂತ ಹೇಳಿದ್ದರು. ಮೊದಲ ಬಾರಿ ಬಂದಾಗ ಲಾಯರ್ ಅಂತ ಹೇಳಿರಲಿಲ್ಲ. ನನ್ನ ಬಳಿ ಬಂದು ಪರ್ಸನಲ್ ಆಗಿ ಮಾತನಾಡಬೇಕು ಅಂತ ಹೇಳಿದ್ದಳು. ಆಕೆಯ ಪೋಟೋ ತೋರಿಸಿದ್ರೆ ಗುರುತು ಹಿಡಿಯುತ್ತೇನೆ ಎಂದು ರಾಜಣ್ಣ ಹೇಳಿದ್ದಾರೆ.
'ನ್ಯಾಯಾಧೀಶರ ಬಗ್ಗೆ ನಾನು ಮಾತಾಡಿಲ್ಲ'
ನಾನು ನ್ಯಾಯಾಧೀಶರ ಬಗ್ಗೆ ಏನೂ ಹೇಳಿಲ್ಲ. ರಾಜಕಾರಣಿಗಳು ಯಾವ ಪಾರ್ಟಿಯವರೇ ಇರಲಿ, ಅವರ ಮೇಲೆ ಕಳಂಕ ತರುವ ಪ್ರಯತ್ನ ವಿರೋಧಿಗಳು ಮಾಡುತ್ತಿದ್ದಾರೆ ಅಂತ ಹೇಳಿದ್ದೇನೆ. ಇದರಲ್ಲಿ ನ್ಯಾಯಾಧೀಶರ ಬಗ್ಗೆ ಏನೂ ಉಲ್ಲೇಖಿಸಿದಿಲ್ಲ. ನಾನು ಕೋಲಾರದಲ್ಲೂ ಈ ವಿಚಾರ ಹೇಳಿದ್ದೇನೆ ಎಂದು ರಾಜಣ್ಣ ಸ್ಪಷ್ಟಪಡಿಸಿದ್ದಾರೆ.
ನನಗೆ ದೊರೆತ ಮಾಹಿತಿಯ ಪ್ರಕಾರ ರಾಜಕೀಯ ದ್ವೇಷ ತೀರಿಸಿಕೊಳ್ಳಲು ಈ ರೀತಿ ಮಾಡ್ತಾರೆ. ರಾಜಕಾರಣಿಗಳ ತೇಜೋವಧೆ ಮಾಡಲಾಗುತ್ತಿದೆ ಅಂತ ಹೇಳಿದ್ದೇನೆ. ಗೃಹಸಚಿವರಿಗೆ ದೂರು ನೀಡುತ್ತೇನೆ. ನಿರಂತರ ಕಾರ್ಯಕ್ರಮಗಳಿದ್ದ ಕಾರಣ ದೂರು ಕೊಡಲು ಆಗಲಿಲ್ಲ. ನಾನು ಇವತ್ತು ಕುಳಿತು ದೂರು ರೆಡಿ ಮಾಡಿದ್ದೇನೆ. ಬ್ಲೂ ಶೀಟ್ ನಲ್ಲಿ ದೂರು ರೆಡಿ ಮಾಡಿದ್ದೇನೆ ಎಂದು ರಾಜಣ್ಣ ಹೇಳಿದ್ರು.
תגובות