ಸಮೀರ್‌ಗೆ 2ನೇ ದಿನದ ವಿಚಾರಣೆಗೆ ಬುಲಾವ್ : ಚಿನ್ನಯ್ಯನ ವಿಚಾರಣೆಯಿಂದ ಬುರುಡೆ ಗ್ಯಾಂಗ್‌ಗೆ ಬಂಧನ ಭೀತಿ?
- Ananthamurthy m Hegde
- Aug 25
- 1 min read
ಮಂಗಳೂರು: ವ್ಯವಸ್ಥಿತವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಿದವರ ಒಂದೊಂದೇ ಅಸಲಿ ಮುಖಗಳು ಹೊರಗೆ ಬರುತ್ತಿವೆ. ಚಿನ್ನಯ್ಯನ ಬಂಧನದ ಬಳಿಕ, ಎಸ್‌ಐಟಿ ತೀವ್ರ ವಿಚಾರಣೆ ನಡೆಸುತ್ತಿದ್ದು, ಆ ಷಡ್ಯಂತ್ರದ ಸುತ್ತ ಇರುವವರಿಗೆ ಬಂಧನ ಭೀತಿ ಆರಂಭ ಆಗಿದೆ. ಇನ್ನೊಂದೆಡೆ ಕೆಲವೇ ಹೊತ್ತಲ್ಲಿ ಯೂಟ್ಯೂಬರ್ ಸಮೀರ್ ವಿಚಾರಣೆಯೂ ಆರಂಭ ಆಗಲಿದೆ.

ಧರ್ಮಸ್ಥಳ ವಿರುದ್ಧ ಸುಳ್ಳು ಸುದ್ದಿ ಹರಡಿದ, ಪ್ರಚೋದನಕಾರಿ ವಿಡಿಯೋ ಮಾಡಿದ ಆರೋಪದಡಿ ಜುಲೈ 12 ರಂದು ಸಮೀರ್ ವಿರುದ್ಧ ಸುಮೋಟೋ ಕೇಸ್ ದಾಖಲಾಗಿತ್ತು. ಧರ್ಮಸ್ಥಳಕ್ಕೆ ಬರಲು ಜೀವ ಭಯ ಇದೆ ಎಂದು ಹೇಳಿದ ಕಾರಣಕ್ಕೆ ಬೆಳ್ತಂಗಡಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಯೂಟ್ಯೂಬ್ ದೂತ ಚಾನೆಲ್, ಎಐ ವಿಡಿಯೋ ಮಾಡಿದ್ದರ ಉದ್ದೇಶ, ಹಣಕಾಸು ಸೌಲಭ್ಯ, ಆರೋಪಿ ಚಿನ್ನಯ್ಯ ಜೊತೆಗಿನ ಸಂಬಂಧ ಕುರಿತು ವಿಚಾರಣೆ ನಡೆಸಗಿದೆ.
ಸುಜಾತಾ ಭಟ್ ಗೂ ಕಾನೂನು ಕಂಟಕ
ಮಗಳು ಅನನ್ಯಾ ಭಟ್ ನಾಪತ್ತೆ ಪ್ರಕರಣದ ಬಗ್ಗೆ ಸುಳ್ಳು ಆರೋಪ ಹೊರಿಸಿದ ಸುಜಾತಾ ಭಟ್ ಗೂ ಕಾನೂನು ಕಂಟಕ ಎದುರಾಗಿದೆ. ಆಗಸ್ಟ್ 29 ಕ್ಕೆ ವಿಚಾರಣೆ ಬರುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ಬಾರದೇ ಇದ್ದರೂ ಬನಶಂಕರಿಯ ನಿವಾಸಕ್ಕೆ ಆಗಮಿಸಿ ಹೇಳಿಕೆ ಪಡೆಯುವ ಬಗ್ಗೆ ಎಸ್ ಐಟಿ ಚಿಂತನೆ ನಡೆಸಿದೆ. 1985 ರಿಂದ 2025 ರವರೆಗೆ ಎಲ್ಲಿದ್ರು ಎಂಬ ವಿವರಗಳನ್ನು ಕಲೆಹಾಕಲಿದ್ದಾರೆ.
ಚಿನ್ನಯ್ಯಗೆ ಎಸ್‌ಐಟಿ ಗ್ರಿಲ್
ಚಿನ್ನಯ್ಯ ಕೋರ್ಟ್ ಗೆ ತಂದಿದ್ದ ಬುರುಡೆ, ಅದನ್ನು ಮಣ್ಣಿಂದ ತೆಗೆಯುತ್ತಿದ್ದ ವಿಡಿಯೋವನ್ನು ತೋರಿಸಿದ್ದ. ಕಡೆಗೆ ಅದೇ ವಿಡಿಯೋದಿಂದಲೇ ಆತ ಸುಳ್ಳು ಹೇಳುತ್ತಿದ್ದಾನೆಂದು ಎಸ್ ಐಟಿಗೆ ಸಿಕ್ಕಿಬಿದ್ದಿದ್ದಾನೆ. ಬುರುಡೆ ಗ್ಯಾಂಗ್ ಎರಡು ಬುರುಡೆ ತಯಾರಿ ಮಾಡಿತ್ತು ಎಂದೂ ಹೇಳಲಾಗ್ತಿದೆ. ಷಡ್ಯಂತ್ರಕ್ಕಾಗಿ ದೆಹಲಿಯಲ್ಲಿ ಪ್ರಭಾವಿ ವ್ಯಕ್ತಿಯನ್ನು ಭೇಟಿಯಾಗಿ ಬುರುಡೆ ಹೂತಿದ್ದನ್ನು ಹೇಳಿತ್ತು. ಚಿನ್ನಯ್ಯ ಬಳಿ ಮೊಬೈಲ್ ಕೂಡಾ ಲಭ್ಯವಿಲ್ಲ.
ಚಿನ್ನಯ್ಯನಿಗೆ ಆಶ್ರಯ ನೀಡಿದ್ದ ತಿಮರೋಡಿ - ನೋಟಿಸ್ ಜಾರಿ ಸಾಧ್ಯತೆ
ಮಹೇಶ್ ತಿಮರೋಡಿ, ಗಿರೀಶ್ ಮಟ್ಟೆಣ್ಣವರ್, ಜಯಂತ್ ಸೇರಿ ಇತ್ತೀಚೆಗೆ ಸುದ್ದಿಗೋಷ್ಟಿ ನಡೆಸಿದ್ದರು. ಅದರಲ್ಲಿ ದೂರುದಾರನ ಜೊತೆಗೆ ಇರುವವರು ನಾವೆ ಎಂದಿದ್ದರು. ಅಲ್ಲದೆ ತಿಮರೋಡಿ ಆಶ್ರಯ ಕೊಟ್ಟಿರುವ ಬಗ್ಗೆಯೂ ಬಹಿರಂಗವಾಗಿದೆ. ಚಿನ್ನಯ್ಯ ವಿಚಾರಣೆ ವೇಳೆ ಈ ಎಲ್ಲಾ ವಿವರ ಬಾಯಿಬಿಡುವ ಸಾಧ್ಯತೆ ಇದೆ. ಹೀಗಾಗಿ ಚಿನ್ನಯ್ಯ ಹಾಗೂ ಇವರ ನಡುವೆ ಇರುವ ಸಂಬಂಧಗಳೇನು ಎಂಬುದು ಬಯಲಾಗಲಿದೆ. ಕೋರ್ಟ್ ಮುಂದೆ ಹಾಜರು ಪಡಿಸಿದ ಬುರುಡೆ ಯಾರು ತಂದು ಕೊಟ್ರು ಎಂದು ಆರಂಭಿಕ ತನಿಖೆ ನಡೆಯಲಿದೆ ಎನ್ನಲಾಗ್ತಿದೆ.
ಎಸ್ ಐಟಿ ಕಚೇರಿಯಲ್ಲೇ ಉಳಿದುಕೊಂಡಿರುವ ಚಿನ್ನಯ್ಯ
ಸಾಕ್ಷಿಯಾಗಿದ್ದ ದೂರುದಾರ ಈಗ ಆರೋಪಿ ಚಿನ್ನಯ್ಯನಾಗಿದ್ದಾನೆ. ಎಸ್ ಐಟಿ ಕಚೇರಿಯ ಕೊಠಡಿಯಲ್ಲೆ ವಾಸವಾಗಿದ್ದಾನೆ. ಮಲಗಲು ಚಾಪೆ ದಿಂಬಿನ ವ್ಯವಸ್ಥೆ ಮಾಡಲಾಗಿದೆ. ಆತ ಮಾಂಸಹಾರ ಪ್ರಿಯ ಎನ್ನಲಾಗಿದ್ದು, ಈಗ ವೆಜ್ ಊಟ ಅಷ್ಟೆ ಬಡಿಸಲಾಗ್ತಿದೆ. ಜೊತೆಗೆ ಪ್ರತಿ ಕ್ಷಣದ ತನಿಖೆ ಎದುರಿಸುತ್ತಿದ್ದಾನೆ. ತನಿಖಾಧಿಕಾರಿ ದಯಾಮ, ಸೈಮನ್ ಅವರು ವಿಚಾರಣೆ ನಡೆಸುತ್ತಿದ್ದಾರೆ.
Comments