top of page

ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ಸ್ಟಾರ್ ಗಳಿವರು

  • Writer: Ananthamurthy m Hegde
    Ananthamurthy m Hegde
  • Dec 28, 2024
  • 1 min read
ree

 ಕ್ರಿಕೆಟಿಗ ವಿರಾಟ್ ಕೊಹ್ಲಿಯಿಂದ ನಟಿ ದೀಪಿಕಾ ಪಡುಕೋಣೆವರೆಗೆ, ಈ 7 ಮಂದಿ ಭಾರತೀಯರು ಸಾಮಾಜಿಕ ಮಾಧ್ಯಮ ಸಂಚಲನಗಳಾಗಿದ್ದಾರೆ. 

2024ರಲ್ಲಿ ಅತಿ ಹೆಚ್ಚು ಇನ್‌ಸ್ಟಾಗ್ರಾಮ್ ಫಾಲೋವರ್‌ಗಳನ್ನು ಹೊಂದಿರುವ ಟಾಪ್ 7  ಸ್ಟಾರ್‌ಗಳ ಬಗ್ಗೆ ತಿಳಿದುಕೊಳ್ಳೋಣ. ಇವರು ಭಾರತದ ಫೇಮಸ್ ಸೋಶಿಯಲ್ ಮೀಡಿಯಾ ಇನ್‌ಫ್ಲುಯನ್ಸರ್‌ಗಳಾಗಿದ್ದಾರೆ.

ಕ್ರಿಕೆಟಿಗ ವಿರಾಟ್ ಕೊಹ್ಲಿ, ಇನ್‌ಸ್ಟಾಗ್ರಾಮ್‌ನಲ್ಲಿ 271 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದೆ.  ಜೊತೆಗೆ ದೇಶದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.  

ನಟಿ ಶ್ರದ್ಧಾ ಕಪೂರ್ ತುಂಬಾ ಸಿಂಪಲ್ ಅನ್ನೋ ವಿಷಯ ಎಲ್ಲರಿಗೂ ಗೊತ್ತು. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಬೃಹತ್ ಫಾಲೋಯಿಂಗ್ ಹೊಂದಿದ್ದಾರೆ. ಈ ಬಾಲಿವುಡ್ ನಟಿ ಇನ್‌ಸ್ಟಾಗ್ರಾಮ್‌ನಲ್ಲಿ 94.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. 

ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಮತ್ತು ಹಾಲಿವುಡ್‌ನಲ್ಲಿ ತಮ್ಮ ಅದ್ಭುತ ನಟನೆಯಿಂದ ಹೃದಯಗಳನ್ನು ಗೆದ್ದಿದ್ದಾರೆ.  ಇನ್‌ಸ್ಟಾಗ್ರಾಮ್‌ನಲ್ಲಿ 92.4 ಮಿಲಿಯನ್ ಫಾಲೋವರ್ಸ್ ಗಳಿಸಿದ್ದಾರೆ. 

ಭಾರತದ ಪ್ರಧಾನಿ ನರೇಂದ್ರ ಮೋದಿ ಇನ್‌ಸ್ಟಾಗ್ರಾಮ್‌ನಲ್ಲಿ 92 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಪ್ರಭಾವಶಾಲಿ ನಾಯಕತ್ವ ಹೊಂದಿರುವ ಪ್ರಧಾನಿ ಮೋದಿ ಅದ್ಭುತ ಪೋಸ್ಟ್‌ಗಳ ಮೂಲಕ ಲಕ್ಷಾಂತರ ಜನರೊಂದಿಗೆ ಸಂಪರ್ಕ ಸಾಧಿಸುತ್ತಾರೆ. ಹಾಗಾಗಿಯೇ ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿ ಮೋದಿ ಇದ್ದಾರೆ. 

ಅದ್ಭುತ ನಟನೆ, ಮನಮೋಹಕ ಸೌಂದರ್ಯಕ್ಕೆ ಹೆಸರುವಾಸಿಯಾದ ಪ್ರತಿಭಾವಂತ ಭಾರತೀಯ ನಟಿ ಆಲಿಯಾ ಭಟ್ ದೇಶಾದ್ಯಂತ ಹೃದಯಗಳನ್ನು ಗೆದ್ದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 85.9 ಮಿಲಿಯನ್  ಫಾಲೋವರ್ಸ್ ಜೊತೆಗೆ ಆರನೇ ಸ್ಥಾನದಲ್ಲಿದ್ದಾರೆ. 

 ಬಹುಮುಖ ಪ್ರತಿಭೆಯ ನಟಿಯಾಗಿ ಹೆಸರು ಗಳಿಸಿದ್ದಾರೆ ಕತ್ರಿನಾ ಕೈಫ್.  ಈ ಬಾಲಿವುಡ್ ನಟಿಗೆ ಬೃಹತ್ ಅಭಿಮಾನಿ ಬಳಗವಿದೆ. ಇನ್‌ಸ್ಟಾಗ್ರಾಮ್‌ನಲ್ಲಿ 80.4 ಮಿಲಿಯನ್ ಅನುಯಾಯಿಗಳೊಂದಿಗೆ ಟಾಪ್ 7 ರಲ್ಲಿ ಸ್ಥಾನ ಪಡೆದಿದ್ದಾರೆ. 

ದೀಪಿಕಾ ಪಡುಕೋಣೆ ತನ್ನ ಬಹುಮುಖ ಪ್ರತಿಭೆ ಮತ್ತು ಗಾಂಭೀರ್ಯದ ಉಪಸ್ಥಿತಿಗೆ ಹೆಸರುವಾಸಿಯಾಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ 80.4 ಮಿಲಿಯನ್ ಅನುಯಾಯಿಗಳೊಂದಿಗೆ ಅಪಾರ ಜನಪ್ರಿಯತೆಯನ್ನು ಗಳಿಸಿದ್ದಾರೆ. ಆಕರ್ಷಕ ವ್ಯಕ್ತಿತ್ವ ಮತ್ತು ಪ್ರಭಾವಶಾಲಿ ವೃತ್ತಿಜೀವನವು ಪ್ರಪಂಚದಾದ್ಯಂತ ಅಭಿಮಾನಿಗಳ ಪ್ರೀತಿ ಗಳಿಸಲು ಕಾರಣವಾಗಿದೆ.


Comments


Top Stories

bottom of page