iPhone 16: Apple ಮಳಿಗೆಗಳತ್ತ ಮುಗಿ ಬಿದ್ದ ಗ್ರಾಹಕರು, ಹೊಸ ಫೋನ್ ಕೊಳ್ಳಲು ಕಾತುರ!
- Oct 22, 2024
- 1 min read
ದೆಹಲಿ ಮತ್ತು ಮುಂಬೈ ಸೇರಿದಂತೆ ದೇಶಾದ್ಯಂತ ಇರುವ ಆ್ಯಪಲ್ ಸ್ಟೋರ್ ಗಳಲ್ಲಿ ಐಫೋನ್ 16 ಮಾರಾಟ ಆರಂಭವಾಗಿದ್ದು, ಹೊಸ ಫೋನ್ ಕೊಳ್ಳಲು ಗ್ರಾಹಕರು ಆ್ಯಪಲ್ ಮಳಿಗೆಗಳತ್ತ ಧಾವಿಸುತ್ತಿದ್ದಾರೆ.

ನವದೆಹಲಿ: ಇತ್ತೀಚೆಗೆ ಬಿಡುಗಡೆಯಾಗಿದ್ದ ಆ್ಯಪಲ್ ಕಂಪನಿಯ ಬಹು ನಿರೀಕ್ಷಿತ ಐಫೋನ್‌ನ 16ನೇ ಸರಣಿಯ ವಿವಿಧ ಸ್ಮಾರ್ಟ್‌ಫೋನ್‌ಗಳ ಮಾರಾಟ ಭಾರತದಲ್ಲಿ ಶುಕ್ರವಾರದಿಂದ ಅಂದರೆ ಇಂದಿನಿಂದ (ಸೆ.20) ಆರಂಭವಾಗಿದೆ.
ದೆಹಲಿ ಮತ್ತು ಮುಂಬೈ ಸೇರಿದಂತೆ ದೇಶಾದ್ಯಂತ ಇರುವ ಆ್ಯಪಲ್ ಸ್ಟೋರ್ ಗಳಲ್ಲಿ ಐಫೋನ್ 16 ಮಾರಾಟ ಆರಂಭವಾಗಿದ್ದು, ಹೊಸ ಫೋನ್ ಕೊಳ್ಳಲು ಗ್ರಾಹಕರು ಆ್ಯಪಲ್ ಮಳಿಗೆಗಳತ್ತ ಸಾವಿರಾರು ಸಂಖ್ಯೆಯಲ್ಲಿ ಧಾವಿಸುತ್ತಿದ್ದಾರೆ.
ದೆಹಲಿಯ ಸಾಕೇತ್ ಮಾಲ್‌ನಲ್ಲಿರುವ ಆ್ಯಪಲ್ ಸ್ಟೋರ್‌ನಲ್ಲಿ ಮಾರಾಟ ನಡೆಯುತ್ತಿದ್ದು, ಸ್ಟೋರ್ ಹೊರಗೆ ಗ್ರಾಹಕರು ಸಾಲಿನಲ್ಲಿ ನಿಂತು ಫೋನ್‌ಗಳನ್ನು ಖರೀದಿ ಮಾಡುತ್ತಿದ್ದಾರೆ.
ಆ್ಯಪಲ್ ಹೆಸರಲ್ಲಿ ನಕಲಿ ಮೊಬೈಲ್ ಮಾರಾಟ: 8 ಲಕ್ಷ ರೂ ಮೌಲ್ಯದ ವಸ್ತು ಜಪ್ತಿ
ದೆಹಲಿ ಮಾತ್ರವಲ್ಲದೇ ಮುಂಬೈನ ಆ್ಯಪಲ್ ಸ್ಟೋರ್‌ಗಳು ಹಾಗೂ ವಿವಿಧ ಮೊಬೈಲ್ ಮಳಿಗೆಗಳ ಮುಂದೆ ಗ್ರಾಹಕರ ಉದ್ದನೆಯ ಸಾಲುಗಳು ಕಂಡುಬಂದಿವೆ. ಇದೇ ಮೊದಲ ಬಾರಿಗೆ ಐಫೋನ್‌ಗಳು ಭಾರತದಲ್ಲಿ ತಯಾರಾಗುತ್ತಿವೆ. ಆದರೆ ಪ್ರಸ್ತುತ ಭಾರತದಲ್ಲಿ ತಯಾರಾದ ಫೋನ್‌ಗಳು ಸದ್ಯಕ್ಕೆ ಮಾರಾಟವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
‘ಇದೇ ಮೊದಲ ಬಾರಿಗೆ ಹಿಂದಿನ ಆವೃತ್ತಿಯ ದುಬಾರಿ ಮಾದರಿಯ ಫೋನ್‌ನ ಬೆಲೆಗಿಂತ ಅಗ್ಗದ ಬೆಲೆಗೆ 16 ಸರಣಿಯ ಐಫೋನ್ ಪ್ರೊ ಸರಣಿ ಮಾರಾಟವಾಗುತ್ತಿರುವುದು ವಿಶೇಷವಾಗಿದೆ. ಐಫೋನ್ 16 ಪ್ರೊ ಬೆಲೆ 1.19 ಲಕ್ಷ ರೂ ಹಾಗೂ ಐಫೋನ್ 16 ಪ್ರೊ ಮ್ಯಾಕ್ಸ್ ಬೆಲೆ 1.44ಲಕ್ಷದಿಂದ ಲಭ್ಯ’ ಎಂದು ಕಂಪನಿ ಹೇಳಿದೆ.
ವಿಶೇಷ ಏನು?
ಐಫೋನ್ 16 ಪ್ರೊ ಹಾಗೂ ಐಫೋನ್ 16 ಪ್ರೊ ಮ್ಯಾಕ್ಸ್ ಫೋನ್‌ಗಳು 128ಜಿಬಿ, 256ಜಿಬಿ, 512ಜಿಬಿ ಹಾಗೂ 1 ಟಿಬಿ ಮೆಮೋರಿ ಸಾಮರ್ಥ್ಯದೊಂದಿಗೆ ಲಭ್ಯವಿದೆ. ಅಂತೆಯೇ ಈವರೆಗಿನ ಐಫೋನ್‌ಗಳಲ್ಲೇ ಅತಿ ದೊಡ್ಡ ಡಿಸ್‌ಪ್ಲೇ 6.3 ಇಂಚು ಹಾಗೂ 6.9 ಇಂಚಿನ ಪರದೆಯುಳ್ಳ ಫೋನ್‌ಗಳು ಇದಾಗಿವೆ. ಐಫೋನ್ 16ರ ಬೆಲೆ 79,900ರಿಂದ ಆರಂಭವಾದರೆ, 16 ಪ್ಲಸ್ ಫೋನ್ ಬೆಲೆ 89,900ರಿಂದ ಲಭ್ಯವಾಗುತ್ತಿದೆ. ಹೊಸ ಐಫೋನ್ 16 ಪ್ರೊ ಸರಣಿಯ ಫೋನ್‌ಗಳಲ್ಲಿ ಎ18 ಪ್ರೊ ಚಿಪ್ ಹಾಗೂ 6 ಕೋರ್ ಜಿಪಿಯು ಚಿಪ್‌ಸೆಟ್ ಇದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಕೃತಕ ಬುದ್ಧಿಮತ್ತೆಯನ್ನು ಪರಿಣಾಮಕಾರಿಯಾಗಿ ಬಳಸಲಾಗಿದೆ. ಎ18 ಚಿಪ್‌ಸೆಟ್ ಹಿಂದಿನ 15 ಸರಣಿಯ ಫೋನ್‌ಗಳಿಗಿಂತ ಶೇ 20ರಷ್ಟು ವೇಗ ಹೊಂದಿದೆ ಎಂದು ಕಂಪನಿ ಹೇಳಿದೆ.
ಭಾರತದಲ್ಲಿ ತಯಾರಾದ ಐಫೋನ್ 16 ಹಾಗೂ ಐಫೋನ್ 16 ಪ್ಲಸ್ ಫೋನ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ವರ್ಷದ ಹಿಂದೆ ಬಿಡುಗಡೆಯಾದ ಐಫೋನ್ 15 ಪ್ರೊ ಹಾಗೂ ಐಫೋನ್ 15 ಪ್ರೊ ಮ್ಯಾಕ್ಸ್ ಬೆಲೆಯು ಕ್ರಮವಾಗಿ 1.34 ಲಕ್ಷ ಹಾಗೂ 1.59 ಲಕ್ಷ ರೂ ಇತ್ತು.
Comentarios