ಯುಪಿಐ ಲೈಟ್‌ನಲ್ಲಿ ಮಹತ್ತರ ಬದಲಾವಣೆ : ಗ್ರಾಹಕರಿಗೆ ಸಿಹಿ ಸುದ್ದಿ
- Ananthamurthy m Hegde
- Nov 1, 2024
- 1 min read

ಯುಪಿಐ ಲೈಟ್ ಪ್ಲಾಟ್‌ಫಾರ್ಮ್ನಲ್ಲಿ ಎರಡು ದೊಡ್ಡ ಬದಲಾವಣೆಗಳು ಆಗಲಿವೆ. ನ.೧ರಿಂದ, ಯುಪಿಐ ಲೈಟ್ ಬಳಕೆದಾರರು ಹೆಚ್ಚಿನ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇತ್ತೀಚೆಗೆ ಯುಪಿಐ ಲೈಟ್‌ನ ವಹಿವಾಟು ಮಿತಿಯನ್ನು ಹೆಚ್ಚಿಸಿದೆ. ಇದರ ಜೊತೆಗೆ ಮತ್ತೊಂದು ಬದಲಾವಣೆ ಕೂಡ ಆಗಿದೆ.
ನವೆಂಬರ್ ೧ ರ ನಂತರ, ಯುಪಿಐ ಲೈಟ್ ಬ್ಯಾಲೆನ್ಸ್ ನಿರ್ದಿಷ್ಟ ಮಿತಿಗಿಂತ ಕಡಿಮೆಯಾದರೆ, ಸ್ವಯಂ ಟಾಪ್-ಅಪ್ ವೈಶಿಷ್ಟ್ಯದ ಮೂಲಕ ಮತ್ತೆ ಯುಪಿಐ ಲೈಟ್ ಗೆ ಹಣವನ್ನು ಸೇರಿಸಲಾಗುತ್ತದೆ. ಇದು ಹಸ್ತಚಾಲಿತ ಟಾಪ್-ಅಪ್ ಅಗತ್ಯವನ್ನು ನಿವಾರಿಸುತ್ತದೆ, ಇದರಿಂದಾಗಿ ಯುಪಿಐ ಲೈಟ್ ಸಹಾಯದಿಂದ ಯಾವಾಗ ಬೇಕಾದರು ಪಾವತಿಗಳನ್ನು ಮಾಡಬಹುದು.
ನಿಮ್ಮ ಬ್ಯಾಲೆನ್ಸ್ ಮಿತಿಗಿಂತ ಕಡಿಮೆಯಾದಾಗ, ಲಿಂಕ್ ಮಾಡಲಾದ ಬ್ಯಾಂಕ್ ಖಾತೆಯಿಂದ ನಿಮ್ಮ ಯುಪಿಐ ಲೈಟ್ ವ್ಯಾಲೆಟ್‌ಗೆ ಅಟೊಮೆಟಿಕ್ ಆಗಿ ಹಣವನ್ನು ಹಾಕಲಾಗುತ್ತದೆ. ರೀಚಾರ್ಜ್ ಮೊತ್ತವನ್ನು ಸಹ ನೀವು ಹೊಂದಿಸಬಹುದು. ಈ ವ್ಯಾಲೆಟ್‌ನ ಮಿತಿಯು ೨,೦೦೦ ರೂಪಾಯಿಗಳನ್ನು ಮೀರುವಂತಿಲ್ಲ. ಯುಪಿಐ ಲೈಟ್ ಖಾತೆಯಲ್ಲಿ ಒಂದು ದಿನದಲ್ಲಿ ಐದು ಟಾಪ್-ಅಪ್‌ಗಳನ್ನು ಅನುಮತಿಸಲಾಗುತ್ತದೆ.
ಯುಪಿಐ ಲೈಟ್ ಪ್ರತಿ ಬಳಕೆದಾರರಿಗೆ ರೂ. ೫೦೦ ವರೆಗಿನ ವಹಿವಾಟುಗಳನ್ನು ಮಾಡಲು ಅನುಮತಿಸುತ್ತದೆ. ಇದರೊಂದಿಗೆ, ಯುಪಿಐ ಲೈಟ್ ವ್ಯಾಲೆಟ್‌ನಲ್ಲಿ ಗರಿಷ್ಠ ೨೦೦೦ ರೂ. ಯುಪಿಐ ಲೈಟ್ ವ್ಯಾಲೆಟ್‌ನ ದೈನಂದಿನ ಖರ್ಚು ಮಿತಿ ೪೦೦೦ ರೂ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಯುಪಿಐ ಲೈಟ್‌ನ ಗರಿಷ್ಠ ವಹಿವಾಟಿನ ಮಿತಿಯನ್ನು ೫೦೦ ರೂ. ನಿಂದ ೧,೦೦೦ ರೂ. ಗೆ ಹೆಚ್ಚಿಸಲು ಪ್ರಸ್ತಾಪಿಸಿದೆ. ಹೆಚ್ಚುವರಿಯಾಗಿ, ಯುಪಿಐ ಲೈಟ್ ವಾಲೆಟ್ ಮಿತಿಯನ್ನು ರೂ. ೨,೦೦೦ ರಿಂದ ರೂ ೫,೦೦೦ ಕ್ಕೆ ಆರ್‌ಬಿಐ ಹೆಚ್ಚಿಸಲಾಗಿದೆ.
Comments