ನಂದೊಳ್ಳಿಯಲ್ಲಿ ವಾಲಿ ಮೋಕ್ಷ ತಾಳಮದ್ದಲೆ
- Ananthamurthy m Hegde
- 17 hours ago
- 1 min read
ಯಲ್ಲಾಪುರ: ತಾಲೂಕಿನ ನಂದೊಳ್ಳಿಯಲ್ಲಿ ಶ್ರೀ ವೀರಮಾರುತಿ ತಾಳಮದ್ದಲೆ ಕೂಟದ ಸಂಯೋಜನೆಯಲ್ಲಿ ವಾಲಿ ಮೋಕ್ಷ ತಾಳಮದ್ದಲೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಮಹಾಬಲೇಶ್ವರ ಭಟ್ಟ ಬೆಳಶೇರು, ಮದ್ದಲೆವಾದಕರಾಗಿ ನಾಗಪ್ಪ ಕೋಮಾರ, ಸಂಜಯ ಕೋಮಾರ ಭಾಗವಹಿಸಿದ್ದರು.
ರಾಮನಾಗಿ ನರಸಿಂಹ ಕೋಣೆಮನೆ, ಹನುಮಂತನಾಗಿ ಶ್ರೀಧರ ಅಣಲಗಾರ, ವಾಲಿಯಾಗಿ ಮಾದೇವ ನಾಯ್ಕ, ಸುಗ್ರೀವನಾಗಿ ಮಂಜುನಾಥ ಸೂರಾ ನಾಯ್ಕ, ತಾರೆಯಾಗಿ ಶಿವಾನಂದ ನಾಯ್ಕ, ಲಕ್ಷ್ಮಣನಾಗಿ ಗಂಗಾಧರ ಗುಮ್ಮಾನಿ ಪಾತ್ರ ನಿರ್ವಹಿಸಿದರು.
ಮಾದೇವ ನಾಯ್ಕ ಅವರ ಕುರಿತು ಎಲ್.ಎಸ್.ಎಂ.ಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ ಅಭಿನಂದನಾ ನುಡಿಗಳನ್ನಾಡಿದರು. ಕೂಟದ ಅಧ್ಯಕ್ಷ ನಾರಾಯಣ ಭಟ್ಟ ಮೊಟ್ಟೆಪಾಲ ಇದ್ದರು.
Comments