top of page

ಅಕ್ರಮ ಗೋವಾ ಮದ್ಯ ಸಾಗಣೆ : ವ್ಯಕ್ತಿಯ ಬಂಧನ

  • Writer: Ananthamurthy m Hegde
    Ananthamurthy m Hegde
  • Nov 28, 2024
  • 1 min read

ಜೋಯಿಡಾ: ಅಕ್ರಮವಾಗಿ ಲಾರಿಯ ಕಂಪಾರ್ಟನಲ್ಲಿ ಪ್ರತ್ಯೇಕ ಕಂಪಾರ್ಟಮೆಂಟ್ ಮಾಡಿ ಬೇರೆಡೆ ಸಾಗಿಸುತಿದ್ದ ಗೋವಾ ಮದ್ಯವನ್ನು ತಾಲೂಕಿನ ರಾಮನಗರದ ಅನಮೋಡ್ ತನಿಖಾ ಠಾಣೆ ಪೊಲೀಸರು ವಶಕ್ಕೆ ಪಡೆದು ಚಾಲಕನ್ನು ಬಂಧಿಸಲಾಗಿದೆ.

ಬಂಧಿತ ವ್ಯಕ್ತಿಯು ಮಹಾರಾಷ್ಟ್ರ ಮೂಲದ ಬಾಲಾಜಿ ಗೋವಿಂದ ಚವ್ಹಾಣ್ ಎಂದಾಗಿದ್ದು , ಈತನ ಬಳಿ ಇದ್ದ ಗೋವಾ ಮದ್ಯದ 7 ಪೆಟ್ಟಿಗೆಗಳ ಪೈಕಿ 4 ಪೆಟ್ಟಿಗೆಗಳಲ್ಲಿ ಪ್ರತಿಯೊಂದರಲ್ಲಿ 750 ಎಂಎಲ್ ನ 12 ರಂತೆ Golden ace whisky ಯ 48 ಬಾಟಲಿಗಳು, ಒಂದು ರಟ್ಟಿನ ಪೆಟ್ಟಿಗೆಯಲ್ಲಿ 750ಎಮ್.ಎಲ್. ನ Bombay whisky 12 ಬಾಟಲಿಗಳು, ಒಂದು ರಟ್ಟಿನ ಪೆಟ್ಟಿಗೆಯಲ್ಲಿ 750 ಎಂ.ಎಲ್ .ನ Mc. Dowels whisky ಯ12 ಬಾಟಲಿಗಳು ಹಾಗೂ ಒಂದು ರಟ್ಟಿನ ಪೆಟ್ಟಿಗೆಯಲ್ಲಿ 180 ml ನ Golden Ace ವಿಸ್ಕಿಯ 24 ಬಾಟಲಿಗಳು ,180 ml ನ O- choice ವಿಸ್ಕಿಯ 24 ಬಾಟಲಿ ಗಳನ್ನು ವಶಕ್ಕೆ ಪಡೆಯಲಾಗಿದ್ದುಪಡೆಯಲಾಗಿದ್ದು ಒಟ್ಟು 32 ,500 ಮುಖಬೆಲೆಯ ಮದ್ಯ ಹಾಗೂ 15 ಲಕ್ಷ ಮೌಲ್ಯದ ಲಾರಿಯನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ.

Comentarios


Top Stories

bottom of page