ಆಪರೇಷನ್ ಸಿಂದೂರ್ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಪ್ರಧಾನಿ ಮೋದಿ
- Ananthamurthy m Hegde
- Jun 7
- 1 min read

ಪಹಲ್ಗಾಮ್ ದಾಳಿಗೆ ಭಾರತ ಆಪರೇಷನ್ ಸಿಂಧೂರ್ ಮೂಲಕ ಪ್ರತೀಕಾರ ತೀರಿಸಿಕೊಂಡಿತು. ಆಪರೇಷನ್ ಸಿಂಧೂರ್ ಸಮಯದಲ್ಲಿ, ಭಾರತ ಕನಿಷ್ಠ ಆರು ಪಾಕಿಸ್ತಾನಿ ಜೆಟ್‌ಗಳು ಮತ್ತು ಒಂದು ಮಿಲಿಟರಿ ವಿಮಾನವನ್ನು ಹೊಡೆದುರುಳಿಸಿದೆ ಎಂದು ಉನ್ನತ ರಕ್ಷಣಾ ಮೂಲಗಳು ಸಿಎನ್‌ಎನ್-ನ್ಯೂಸ್ 18 ಗೆ ಮಾಹಿತಿ ನೀಡಿದ್ದಾರೆ. ಏಪ್ರಿಲ್ 23 ರಂದು, ಅಂದರೆ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಒಂದು ದಿನದ ನಂತರ, ನರೇಂದ್ರ ಮೋದಿ ಸರ್ಕಾರ ಪಾಕಿಸ್ತಾನದ ಬಹಾವಲ್ಪುರ್ ಮತ್ತು ಮುರಿಡ್ಕೆಯಲ್ಲಿರುವ ಭಯೋತ್ಪಾದಕ ಪ್ರಧಾನ ಕಚೇರಿಗಳನ್ನು ಪ್ರಮುಖ ಗುರಿಗಳಾಗಿ ಆಯ್ಕೆ ಮಾಡಿಕೊಂಡಿತ್ತು ಎಂದು ಹೇಳಲಾಗಿದೆ. ಇನ್ನೂ ಮೇ.10 ರಂದು ಪಾಕಿಸ್ತಾನದೊಂದಿಗೆ ಕದನ ವಿರಾಮಕ್ಕೆ ಭಾರತ ಅಮೆರಿಕ ಅಥವಾ ಡೊನಾಲ್ಡ್ ಟ್ರಂಪ್‌ನಿಂದ ಒತ್ತಡಕ್ಕೆ ಒಳಗಾಗಿತ್ತು ಎಂಬುದು ಸುಳ್ಳು ಎಂದು ಉನ್ನತ ರಕ್ಷಣಾ ಮೂಲಗಳು ತಿಳಿಸಿವೆ. "ಟ್ರಂಪ್ ಮತ್ತು ಪ್ರಧಾನಿ ಮೋದಿ ಎಂದಿಗೂ ಮಾತನಾಡಲಿಲ್ಲ ಎಂಬುದೇ ಸತ್ಯ. ಜೆಡಿ ವ್ಯಾನ್ಸ್ ಕರೆ ಮಾಡಿ ಮಾತನಾಡಿದಾಗಲೂ ಪ್ರಧಾನಿ ತುಂಬಾ ದೃಢವಾಗಿದ್ದರು ಎನ್ನಲಾಗಿದೆ.
ಅಮೆರಿಕದ ಒತ್ತಡಕ್ಕೆ ಮಣಿದ್ರಾ ಪ್ರಧಾನಿ ಮೋದಿ?
ಆಪರೇಷನ್ ಸಿಂಧೂರ್ ವಿಚಾರವಾಗಿ ಕಾಂಗ್ರೆಸ್ ಮತ್ತು ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿಕೊಂಡಿದ್ದಾರೆ. ಮೋದಿಯವರು 'ಅಮೆರಿಕದ ಒತ್ತಡಕ್ಕೆ ಮಣಿದರು' ಎಂದು ಕಾಂಗ್ರೆಸ್ ನಾಯಕರು ಲೇವಡಿ ಮಾಡಿದರು. ಇದೀಗ ಇದಕ್ಕೆ ಉತ್ತರ ಕೊಟ್ಟಿದ್ದು, ಯಾವುದೇ ಕಾರಣಕ್ಕೂ ನಾವು ಟ್ರಂಪ್ ಒತ್ತಡಕ್ಕೆ ಮಣಿದಿಲ್ಲ ಎಂದು ಬಿಜೆಪಿ ಕೇಂದ್ರ ಸರ್ಕಾರ ಹೇಳಿದೆ.















Comments