top of page

ಆಪರೇಷನ್‌ ಸಿಂಧೂರ ಮುಗಿದಿಲ್ಲ, ಪಾಕಿಸ್ತಾನದೊಂದಿಗೆ ಸಾಮಾನ್ಯ ಸಂಬಂಧ ಸಾಧ್ಯವಿಲ್ಲ; ಭಾರತದ ದೃಢ ನಿಶ್ಚಯ!

  • Writer: Ananthamurthy m Hegde
    Ananthamurthy m Hegde
  • 5 days ago
  • 1 min read

ಹೊಸದಿಲ್ಲಿ: ಭಾರತ ಮತ್ತು ಪಾ ಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾದ ನಂತರವೂ "ಆಪರೇಷನ್ ಸಿಂಧೂರ" ಸೇನಾ ಕಾರ್ಯಾಚರಣೆ ಇನ್ನೂ ಸಕ್ರಿಯವಾಗಿದೆ ಎಂದು ಭಾರತ ಸ್ಪಷ್ಟಪಡಿಸಿದೆ. ಈ ಸೇನಾ ಕಾರ್ಯಾಚರಣೆಯು ಜಗತ್ತು ಮತ್ತು ಪಾಕಿಸ್ತಾನವು ಒಪ್ಪಿಕೊಳ್ಳಲೇಬೇಕಾದ ಹೊಸ ವಾಸ್ತವತೆಯನ್ನು ಭಾರತ ತೆರೆದಿಟ್ಟಿದೆ.

"ಪ್ರಸ್ತುತ ಪರಿಸ್ಥಿತಿಯಲ್ಲಿ ಪಾಕಿಸ್ತಾನದೊಂದಿಗೆ ಸಾಮಾನ್ಯ ಸಂಬಂಧ ಸಾಧ್ಯವಿಲ್ಲ" ಎಂದು ಸ್ಪಷ್ಟಪಡಿಸಿರುವ ಭಾರತ, "ಆಪರೇಷನ್‌ ಸಿಂಧೂರ" ಸೇನಾ ಕಾರ್ಯಾಚರಣೆಯನ್ನು ಮುಂದುವರೆಸುವುದಾಗಿ ತಿಳಿಸಿದೆ. "ನಮ್ಮ ಯುದ್ಧ ವಿಮಾನಗಳು ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿವೆ" ಎಂಬ ಭಾರತೀಯ ವಾಯು ಸೇನೆ (ಐಎಎಫ್‌)ಯ ಏರ್‌ ಮಾರ್ಷಲ್‌ ಎಕೆ ಭಾರ್ತಿ ಅವರ ಹೇಳಿಕೆ ಇದಕ್ಕೆ ಪುಷ್ಠಿ ನೀಡಿದೆ.

ನಿನ್ನೆ (ಮೇ 11-ಭಾನುವಾರ) ನಡೆದ ಸೇನಾ ಪಡೆಗಳ ಹಿರಿಯ ಅಧಿಕಾರಿಗಳ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಏರ್‌ ಮಾರ್ಷಲ್‌ ಎಕೆ ಭಾರ್ತಿ, "ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಭಾಗವಹಿಸುವುದನ್ನು ಭಾರತೀಯ ವಾಯುಸೇನೆ ಮುಂದುವರೆಸುತ್ತದೆ" ಎಂದು ಸ್ಪಷ್ಟಪಡಿಸಿದ್ದಾರೆ. ಅದೇ ರೀತಿ ಭಾರತೀಯ ಭೂಸೇನೆ ಮತ್ತು ನೌಕಾಸೇನೆ ಕೂಡ, "ಆಪರೇಷನ್‌ ಸಿಂಧೂರ" ಸೇನಾ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿರುವುದಾಗಿ ಹೇಳಿವೆ.

"ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಆದರೆ ಆಪರೇಷನ್ ಸಿಂಧೂರ ಇನ್ನೂ ಸಕ್ರಿಯವಾಗಿದೆ. ಇದು ಜಗತ್ತು ಮತ್ತು ಪಾಕಿಸ್ತಾನವು ಒಪ್ಪಿಕೊಳ್ಳಲೇಬೇಕಾದ ಹೊಸ ವಾಸ್ತವವಾಗಿದೆ. ಸಾಮಾನ್ಯ ಸಂಬಂಧಗಳು ಈ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ" ಎಂದು ಎಂದು ಮೂಲಗಳು ಖಚಿತಪಡಿಸಿವೆ. ಹೇಳಿವೆ.

ಭಾರತವು ಕಾಶ್ಮೀರದ ಬಗ್ಗೆ ಸ್ಪಷ್ಟವಾದ ನಿಲುವನ್ನು ಹೊಂದಿದೆ. ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಮರಳಿ ಪಡೆಯುವುದು ಭಾರತದ ಮುಂದಿರುವ ಗಿರಯಾಗಿದ್ದು, ಈ ಸಂದರ್ಭದಲ್ಲಿ ಪಾಕಿಸ್ತಾನದೊಂದಿಗೆ ಯಾವುದೇ ರಾಜತಾಂತ್ರಿಕ ಮಾತುಕತೆಗೆ ಸಿದ್ಧವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ.

"ಪಾಕಿಸ್ತಾನ ನಮಗೆ ಭಯೋತ್ಪಾದಕರನ್ನು ಹಸ್ತಾಂತರಿಸುವ ಕುರಿತು ಮಾತನಾಡಿದರೆ, ನಾವೂ ಕೂಡ ಅವರೊಂದಿಗೆ ಮಾತುಕತೆಗೆ ಮುಂದಾಗುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಶಾಂತಿ ಮಾತುಕತೆ ಸಾಧ್ಯವಿಲ್ಲ. ಭಾರತ ತನ್ನ ರಕ್ಷಣೆಯ ಹಕ್ಕನ್ನು ಕಾಯ್ದಿರಿಸಿದ್ದು, ಭದ್ರತೆ ಮತ್ತು ಸಾರ್ವಭೌಮತ್ವದ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಕದನ ವಿರಾಮ ಒಪ್ಪಂದದ ಪ್ರಸ್ತಾಪ ಮೊದಲು ಮಾಡಿದ್ದೇ ಪಾಕಿಸ್ತಾನ. ಆದರೆ ಅದೇ ರಾಷ್ಟ್ರ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ ದಾಳಿ ಮುಂದುವರೆಸಿದೆ. ನಾವು ಭಾರತದ ಗಡಿಗಳ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಪಾಕಿಸ್ತಾನಕ್ಕೆ ಸೂಕ್ತ ಪ್ರತ್ಯುತ್ತರ ನೀಡುತ್ತಿದೆ. "ಪಾಕಿಸ್ತಾನ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದರೆ, ಭಾರೀ ಬೆಲೆ ತೆರಬೇಕಾಗುತ್ತದೆ" ಎಂದು ಭಾರತ ಗಂಭೀರ ಎಚ್ಚರಿಕೆ ನೀಡಿದೆ.

ಒಟ್ಟಿನಲ್ಲಿ ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂಬುದು ಖಚಿತವಾಗಿದ್ದು, ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಕಾರ್ಯಾಚರಣೆ ಮಹತ್ವದ ಘಟ್ಟವನ್ನು ತಲುಪಿದೆ. ಈ ಮಧ್ಯೆ ಪಾಕಿಸ್ತಾನವು ಕದನ ವಿರಾಮ ಒಪ್ಪಂದವನ್ನು ಹೇಗೆ ಕಾಯ್ದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Comentarios


Top Stories

bottom of page