ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್ ಗೆ ಅಪ್ಪಳಿಸಿದ ವಿಮಾನ
- Ananthamurthy m Hegde
- Jun 12
- 1 min read

ಅಹಮದಾಬಾದ್: 242 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಪತನಗೊಂಡಿದ್ದು, ಸದ್ಯದ ಮಾಹಿತಿಯ ಪ್ರಕಾರ ವಿಮಾನದಲ್ಲಿದ್ದ 133 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 230 ಪ್ರಯಾಣಿಕರು ಮತ್ತು 12 ಸಿಬ್ಬಂದಿಯೊಂದಿಗೆ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171 ಗುರುವಾರ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿದೆ.
ವಿಮಾನವು ಮೇಘನಿ ನಗರದ ಬಳಿ ಬಿಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್‌ಗೆ ಅಪ್ಪಳಿಸಿದೆ. ಇದರಿಂದಾಗಿ ವಿಮಾನದಲ್ಲಿದ್ದ ಜನರ ಜೊತೆಗೆ ಹಾಸ್ಟೆಲ್‌ನಲ್ಲಿದ್ದ ಹಲವು ಎಂಬಿಬಿಎಸ್ ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 20ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ವಿಮಾನ ಅಪ್ಪಳಿಸಿದ ಸಮಯ ಮಧ್ಯಾಹ್ನ ಊಟದ ಸಂದರ್ಭವಾಗಿದ್ದರಿಂದ ವಿಮಾನ ಹಾಸ್ಟೆಲ್‌ನ ಮೆಸ್ ಭಾಗಕ್ಕೆ ಅಪ್ಪಳಿಸಿದೆ. ಈ ಸಂದರ್ಭದಲ್ಲಿ ಮೆಸ್‌ನಲ್ಲಿ 50ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರು ಎಂದು ತಿಳಿದು ಬಂದಿದೆ.
ಇನ್ನೂ ಈ ವಿಮಾನದಲ್ಲಿ ಯಾವ ಯಾವ ದೇಶದ ನಾಗರೀಕರು ಇದ್ದರು ಎಂಬುದನ್ನು ನೋಡುವುದಾದ್ರೆ, ಭಾರತದ 169, ಇಂಗ್ಲೆಂಡ್‌ನ 53, ಪೋರ್ಚುಗಲ್‌ನ 7 ಹಾಗೂ ಓರ್ವ ಕೆನಡಾ ದೇಶದ ಪ್ರಜೆ ಇದ್ದರು ಎಂದು ಏರ್ ಇಂಡಿಯಾ ಅಧಿಕೃತ ಮಾಹಿತಿ ನೀಡಿದೆ.















Comments