top of page

ಖಲಿಸ್ತಾನಿಗಳಿಗೆ ಬಿಗ್ ಶಾಕ್! ಮೋದಿ ಭೇಟಿಗೂ ಮುನ್ನ ಪ್ರಮುಖ ಒಪ್ಪಂದ ಮಾಡಿಕೊಂಡ ಕೆನಡಾ

  • Writer: Ananthamurthy m Hegde
    Ananthamurthy m Hegde
  • Jun 14
  • 1 min read
ree

ಖಲಿಸ್ತಾನಿಗಳ ಕಾರಣದಿಂದ ಭಾರತದೊಂದಿಗೆ ಸಂಬಂಧ ಹದಗೆಡಿಸಿಕೊಂಡಿದ್ದ ಕೆನಡಾಗೆ ಇದೀಗ ಬುದ್ಧಿಬಂದಂತೆ ಕಾಣುತ್ತಿದೆ. ಹಾಗಾಗಿ, ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಕೆನಡಾದಲ್ಲಿ ನಡೆಯಲಿರುವ ಜಿ 7 ಶೃಂಗಸಭೆಗೆ ಭಾರತ ಸೆಂಟರ್ ಆಫ್ ಅಟ್ರಾಕ್ಷನ್ ಎನ್ನುವ ಮೂಲಕ ಆಹ್ವಾನ ನೀಡಿತ್ತು. ಇದರ ಬೆನ್ನಲ್ಲೇ ಕೆನಡಾ ಸರ್ಕಾರ ಪ್ರಧಾನಿ ಮೋದಿ ಭೇಟಿಗೂ ಮುನ್ನ ಮೂರು ಮಹತ್ವದ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ನಿಜ್ಜರ್ ಹತ್ಯೆಯ ಸಂದರ್ಭ ಭಾರತದ ಮೇಲೆ ವಿನಾಕಾರಣ ಹುಳುಕು ಆರೋಪ ಮಾಡಿದ ಕೆನಡಾ ಮಾಜಿ ಪ್ರಧಾನಿ ಜಸ್ಟೀನ್ ಟ್ರುಡೊ ಅವರ ಕಾಲದಲ್ಲಿ ಭಾರತ ಹಾಗೂ ಕೆನಡಾ ಸಂಬಂಧ ಹಳಸಿತ್ತು. ಆದರೆ, ಇದೀಗ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರ ಅವಧಿಯಲ್ಲಿ ಭಾರತದೊಂದಿಗಿನ ಸಂಬಂಧಕ್ಕೆ ಹೊಸ ರೂಪರೇಷೆ ಸಿಕ್ಕಿರುವ ಸಾಧ್ಯತೆ ಇದೆ.

Comments


Top Stories

bottom of page