ಗ್ರಾಹಕನೇ ಎಚ್ಚರ, ಮಾರ್ಚ್ 24 ಮತ್ತು 25ರಂದು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ!
- Ananthamurthy m Hegde
- Mar 21
- 3 min read
ಬೆಂಗಳೂರು : ವಾರಕ್ಕೆ 5 ದಿನ ಮಾತ್ರ ಕೆಲಸ, ನೇಮಕಾತಿ, ತಾತ್ಕಾಲಿಕ ನೌಕರರ ಕೆಲಸ ಕಾಯಂಗೊಳಿಸುವಿಕೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬ್ಯಾಂಕ್ ನೌಕರರ ಒಕ್ಕೂಟವು ಮಾರ್ಚ್ 24 ಸೋಮವಾರ ಮತ್ತು 25 ಮಂಗಳವಾರದಂದು ರಾಷ್ಟ್ರವ್ಯಾಪಿ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದೆ.

ಭಾರತೀಯ ಬ್ಯಾಂಕ್‌ಗಳ ಸಂಘದೊಂದಿಗೆ (IBA) ನಡೆದ ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ 9 ಬ್ಯಾಂಕ್ ನೌಕರರ ಸಂಘಟನೆಯಾದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಅನಿವಾರ್ಯವಾಗಿ ಮುಷ್ಕರದ ನಿರ್ಧಾರಕ್ಕೆ ಬಂದಿದೆ. ಈ ಮುಷ್ಕರದಿಂದಾಗಿ ಸಾರ್ವಜನಿಕ, ಖಾಸಗಿ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ವಹಿವಾಟಿನ ಮೇಲೆ ಪರಿಣಾಮ ಬೀರಲಿದ್ದು, 22ರಂದು 4ನೇ ಶನಿವಾರ ಮತ್ತು 23ರಂದು ಭಾನುವಾರವಿರುವ ಕಾರಣ ಸತತ 4 ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.
ರಾಷ್ಟ್ರೀಯ ಬ್ಯಾಂಕ್ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಲ್ ಚಂದ್ರಶೇಖರ್ ಅವರ ಪ್ರಕಾರ, ಹಲವಾರು ಸುತ್ತಿನ ಮಾತುಕತೆಗಳ ಹೊರತಾಗಿಯೂ, ಭಾರತೀಯ ಬ್ಯಾಂಕ್‌ಗಳ ಸಂಘ ನಿರ್ಣಾಯಕ ಸಮಸ್ಯೆಗಳಗೆ ಯಾವುದೇ ಪರಿಹಾರ ಸೂಚಿಸಿಲ್ಲ. ಸಂಘಟನೆಗಳು ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯು ಹೊರಡಿಸಿರುವ ಕಾರ್ಯಕ್ಷಮತೆ ಪರಿಶೀಲನೆ ಮತ್ತು ಪ್ರೋತ್ಸಾಹ ನಿರ್ದೇಶನಗಳನ್ನು ಹಿಂಪಡೆಯುವುದು, ಗ್ರಾಚ್ಯುಯಿಟಿ ಕಾಯ್ದೆಗೆ ತಿದ್ದುಪಡಿ ತರುವುದು ಕೂಡ ಪ್ರಮುಖ ಬೇಡಿಕೆಗಳಾಗಿವೆ. ಈ ಕ್ರಮಗಳು ಉದ್ಯೋಗ ಭದ್ರತೆಗೆ ಧಕ್ಕೆ ತರುತ್ತವೆ ಎಂದು ಅವು ವಾದಿಸಿವೆ.
ಬ್ಯಾಂಕ್ ನೌಕರರ ಬೇಡಿಕೆಗಳು ಕೆಳಗಿನಂತಿವೆ:
ವಾರಕ್ಕೆ ಸೋಮವಾರದಿಂದ ಶುಕ್ರವಾರದವರೆಗೆ 5 ದಿನ ಮಾತ್ರ ಕೆಲಸ, ಶನಿವಾರ, ಭಾನುವಾರ ರಜಾ.
ಹಿರಿಯ ಹುದ್ದೆಗಳ ನೇಮಕಾತಿ.
ಎಲ್ಲ ತಾತ್ಕಾಲಿಕ ಉದ್ಯೋಗಿಗಳ ಕೆಲಸವನ್ನು ಕಾಯಂ ಮಾಡುವುದು.
ಕಾರ್ಯಕ್ಷಮತೆ ಪರಿಶೀಲನೆ ಮತ್ತು ಪ್ರೋತ್ಸಾಹ ನಿರ್ದೇಶನಗಳನ್ನು ಹಿಂಪಡೆಯುವುದು.
ಗ್ರಾಚ್ಯುಯಿಟಿ ಕಾಯ್ದೆಗೆ ತಿದ್ದುಪಡಿ ತಂದು ಮಿತಿಯನ್ನು 25 ಲಕ್ಷ ರು.ಗೆ ಹೆಚ್ಚಿಸುವುದು.
ಸರ್ಕಾರಿ ನೌಕರರ ಯೋಜನೆಗೆ ಅನುಗುಣವಾಗಿ ಮತ್ತು ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯುವುದು.
"ಬ್ಯಾಂಕಿಂಗ್ ಸೇವೆಗಳಾದ ಕ್ಲಿಯರಿಂಗ್ ಹೌಸ್, ನಗದು ವಹಿವಾಟು, ಚೆಕ್ ರವಾನೆ ಮುಂತಾದ ಸೇವೆಗಳು ಮಾರ್ಚ್ 22ರಿಂದ ನಾಲ್ಕು ದಿನಗಳವರೆಗೆ ಹೆಚ್ಚೂಕಡಿಮೆ ಸ್ಥಗಿತವಾಗಲಿವೆ" ಎಂದು ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಕಾನ್ಫೆಡರೇಶನ್ (AIBOC)ನ ಉಪಾಧ್ಯಕ್ಷ ಪಂಕಜ್ ಕಪೂರ್ ಹೇಳಿದ್ದಾರೆ. ಆದರೆ, ಎಟಿಎಂ ಮತ್ತು ಆನ್‌ಲೈನ್ ಬ್ಯಾಂಕಿಂಗ್ ವಹಿವಾಟುಗಳು ಲಭ್ಯವಿರಲಿವೆ ಎಂದು ಅವರು ತಿಳಿಸಿದ್ದಾರೆ.
ಯಾವ್ಯಾವ ಬ್ಯಾಂಕ್ ಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ?
ಬಹುತೇಕ ಎಲ್ಲ ಸಾರ್ವಜನಿಕ ವಲಯದ ಬ್ಯಾಂಕುಗಳು, ಖಾಸಗಿ ವಲಯದ ಬ್ಯಾಂಕುಗಳು, ವಿದೇಶಿ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಕೂಡ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿವೆ. ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹ ಮತ್ತು ವಿಮರ್ಶೆಗಳಿಗೆ ಸಂಬಂಧಿಸಿದಂತೆ ಸಂಘಟನೆಗಳು ಹಣಕಾಸು ಸೇವೆಗಳ ಇಲಾಖೆ ಇತ್ತೀಚೆಗೆ ಹೊರಡಿಸಿರುವ ನಿರ್ದೇಶನ ಉದ್ಯೋಗಿಗಳಲ್ಲಿ ಅನಿಶ್ಚಿತತೆಯನ್ನು ಸೃಷ್ಟಿಸುತ್ತವೆ ಮತ್ತು ಅವುಗಳನ್ನು ಹಿಂಪಡೆಯಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿವೆ.
ಯುಎಫ್‌ಬಿಯುನಲ್ಲಿ ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್, ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಕಾನ್ಫೆಡರೇಶನ್, ನ್ಯಾಷನಲ್ ಕಾನ್ಫೆಡರೇಶನ್ ಆಫ್ ಬ್ಯಾಂಕ್ ಎಂಪ್ಲಾಯೀಸ್, ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಷನ್, ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ, ಇಂಡಿಯನ್ ನ್ಯಾಷನಲ್ ಬ್ಯಾಂಕ್ ಎಂಪ್ಲಾಯೀಸ್ ಕಾಂಗ್ರೆಸ್, ಇಂಡಿಯನ್ ನ್ಯಾಷನಲ್ ಬ್ಯಾಂಕ್ ಆಫೀಸರ್ಸ್ ಕಾಂಗ್ರೆಸ್, ನ್ಯಾಷನಲ್ ಆರ್ಗನೈಸೇಶನ್ ಆಫ್ ಬ್ಯಾಂಕ್ ವರ್ಕರ್ಸ್ ಮತ್ತು ನ್ಯಾಷನಲ್ ಆರ್ಗನೈಸೇಶನ್ ಆಫ್ ಬ್ಯಾಂಕ್ ಆಫೀಸರ್ಸ್ ಸೇರಿವೆಬೆಂಗಳೂರು : ವಾರಕ್ಕೆ 5 ದಿನ ಮಾತ್ರ ಕೆಲಸ, ನೇಮಕಾತಿ, ತಾತ್ಕಾಲಿಕ ನೌಕರರ ಕೆಲಸ ಕಾಯಂಗೊಳಿಸುವಿಕೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬ್ಯಾಂಕ್ ನೌಕರರ ಒಕ್ಕೂಟವು ಮಾರ್ಚ್ 24 ಸೋಮವಾರ ಮತ್ತು 25 ಮಂಗಳವಾರದಂದು ರಾಷ್ಟ್ರವ್ಯಾಪಿ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದೆ.
ಭಾರತೀಯ ಬ್ಯಾಂಕ್‌ಗಳ ಸಂಘದೊಂದಿಗೆ (IBA) ನಡೆದ ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ 9 ಬ್ಯಾಂಕ್ ನೌಕರರ ಸಂಘಟನೆಯಾದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಅನಿವಾರ್ಯವಾಗಿ ಮುಷ್ಕರದ ನಿರ್ಧಾರಕ್ಕೆ ಬಂದಿದೆ. ಈ ಮುಷ್ಕರದಿಂದಾಗಿ ಸಾರ್ವಜನಿಕ, ಖಾಸಗಿ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ವಹಿವಾಟಿನ ಮೇಲೆ ಪರಿಣಾಮ ಬೀರಲಿದ್ದು, 22ರಂದು 4ನೇ ಶನಿವಾರ ಮತ್ತು 23ರಂದು ಭಾನುವಾರವಿರುವ ಕಾರಣ ಸತತ 4 ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.
ರಾಷ್ಟ್ರೀಯ ಬ್ಯಾಂಕ್ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಲ್ ಚಂದ್ರಶೇಖರ್ ಅವರ ಪ್ರಕಾರ, ಹಲವಾರು ಸುತ್ತಿನ ಮಾತುಕತೆಗಳ ಹೊರತಾಗಿಯೂ, ಭಾರತೀಯ ಬ್ಯಾಂಕ್‌ಗಳ ಸಂಘ ನಿರ್ಣಾಯಕ ಸಮಸ್ಯೆಗಳಗೆ ಯಾವುದೇ ಪರಿಹಾರ ಸೂಚಿಸಿಲ್ಲ. ಸಂಘಟನೆಗಳು ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯು ಹೊರಡಿಸಿರುವ ಕಾರ್ಯಕ್ಷಮತೆ ಪರಿಶೀಲನೆ ಮತ್ತು ಪ್ರೋತ್ಸಾಹ ನಿರ್ದೇಶನಗಳನ್ನು ಹಿಂಪಡೆಯುವುದು, ಗ್ರಾಚ್ಯುಯಿಟಿ ಕಾಯ್ದೆಗೆ ತಿದ್ದುಪಡಿ ತರುವುದು ಕೂಡ ಪ್ರಮುಖ ಬೇಡಿಕೆಗಳಾಗಿವೆ. ಈ ಕ್ರಮಗಳು ಉದ್ಯೋಗ ಭದ್ರತೆಗೆ ಧಕ್ಕೆ ತರುತ್ತವೆ ಎಂದು ಅವು ವಾದಿಸಿವೆ.
ಬ್ಯಾಂಕ್ ನೌಕರರ ಬೇಡಿಕೆಗಳು ಕೆಳಗಿನಂತಿವೆ
ವಾರಕ್ಕೆ ಸೋಮವಾರದಿಂದ ಶುಕ್ರವಾರದವರೆಗೆ 5 ದಿನ ಮಾತ್ರ ಕೆಲಸ, ಶನಿವಾರ, ಭಾನುವಾರ ರಜಾ.
ಹಿರಿಯ ಹುದ್ದೆಗಳ ನೇಮಕಾತಿ.
ಎಲ್ಲ ತಾತ್ಕಾಲಿಕ ಉದ್ಯೋಗಿಗಳ ಕೆಲಸವನ್ನು ಕಾಯಂ ಮಾಡುವುದು.
ಕಾರ್ಯಕ್ಷಮತೆ ಪರಿಶೀಲನೆ ಮತ್ತು ಪ್ರೋತ್ಸಾಹ ನಿರ್ದೇಶನಗಳನ್ನು ಹಿಂಪಡೆಯುವುದು.
ಗ್ರಾಚ್ಯುಯಿಟಿ ಕಾಯ್ದೆಗೆ ತಿದ್ದುಪಡಿ ತಂದು ಮಿತಿಯನ್ನು 25 ಲಕ್ಷ ರು.ಗೆ ಹೆಚ್ಚಿಸುವುದು.
ಸರ್ಕಾರಿ ನೌಕರರ ಯೋಜನೆಗೆ ಅನುಗುಣವಾಗಿ ಮತ್ತು ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯುವುದು.
"ಬ್ಯಾಂಕಿಂಗ್ ಸೇವೆಗಳಾದ ಕ್ಲಿಯರಿಂಗ್ ಹೌಸ್, ನಗದು ವಹಿವಾಟು, ಚೆಕ್ ರವಾನೆ ಮುಂತಾದ ಸೇವೆಗಳು ಮಾರ್ಚ್ 22ರಿಂದ ನಾಲ್ಕು ದಿನಗಳವರೆಗೆ ಹೆಚ್ಚೂಕಡಿಮೆ ಸ್ಥಗಿತವಾಗಲಿವೆ" ಎಂದು ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಕಾನ್ಫೆಡರೇಶನ್ (AIBOC)ನ ಉಪಾಧ್ಯಕ್ಷ ಪಂಕಜ್ ಕಪೂರ್ ಹೇಳಿದ್ದಾರೆ. ಆದರೆ, ಎಟಿಎಂ ಮತ್ತು ಆನ್‌ಲೈನ್ ಬ್ಯಾಂಕಿಂಗ್ ವಹಿವಾಟುಗಳು ಲಭ್ಯವಿರಲಿವೆ ಎಂದು ಅವರು ತಿಳಿಸಿದ್ದಾರೆ.
ಯಾವ್ಯಾವ ಬ್ಯಾಂಕ್ ಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ?
ಬಹುತೇಕ ಎಲ್ಲ ಸಾರ್ವಜನಿಕ ವಲಯದ ಬ್ಯಾಂಕುಗಳು, ಖಾಸಗಿ ವಲಯದ ಬ್ಯಾಂಕುಗಳು, ವಿದೇಶಿ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಕೂಡ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿವೆ. ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹ ಮತ್ತು ವಿಮರ್ಶೆಗಳಿಗೆ ಸಂಬಂಧಿಸಿದಂತೆ ಸಂಘಟನೆಗಳು ಹಣಕಾಸು ಸೇವೆಗಳ ಇಲಾಖೆ ಇತ್ತೀಚೆಗೆ ಹೊರಡಿಸಿರುವ ನಿರ್ದೇಶನ ಉದ್ಯೋಗಿಗಳಲ್ಲಿ ಅನಿಶ್ಚಿತತೆಯನ್ನು ಸೃಷ್ಟಿಸುತ್ತವೆ ಮತ್ತು ಅವುಗಳನ್ನು ಹಿಂಪಡೆಯಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿವೆ.
ಯುಎಫ್‌ಬಿಯುನಲ್ಲಿ ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್, ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಕಾನ್ಫೆಡರೇಶನ್, ನ್ಯಾಷನಲ್ ಕಾನ್ಫೆಡರೇಶನ್ ಆಫ್ ಬ್ಯಾಂಕ್ ಎಂಪ್ಲಾಯೀಸ್, ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಷನ್, ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ, ಇಂಡಿಯನ್ ನ್ಯಾಷನಲ್ ಬ್ಯಾಂಕ್ ಎಂಪ್ಲಾಯೀಸ್ ಕಾಂಗ್ರೆಸ್, ಇಂಡಿಯನ್ ನ್ಯಾಷನಲ್ ಬ್ಯಾಂಕ್ ಆಫೀಸರ್ಸ್ ಕಾಂಗ್ರೆಸ್, ನ್ಯಾಷನಲ್ ಆರ್ಗನೈಸೇಶನ್ ಆಫ್ ಬ್ಯಾಂಕ್ ವರ್ಕರ್ಸ್ ಮತ್ತು ನ್ಯಾಷನಲ್ ಆರ್ಗನೈಸೇಶನ್ ಆಫ್ ಬ್ಯಾಂಕ್ ಆಫೀಸರ್ಸ್ ಸೇರಿವೆ
Comments