ದಶಕಗಳಿಂದ ಬಳಕೆಯಾಗದ ಹಾಸ್ಟೆಲ್; ಕುಡುಕರ ಅಡ್ಡೆಯಾಗಿ ಮಾರ್ಪಾಡು
- Ananthamurthy m Hegde
- Jun 26
- 1 min read

ಅಂಕೋಲಾ: ದಶಕಗಳ ಹಿಂದೆ ಆರಂಭವಾದ ಪೂಜೆಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಆರಂಭಾವಾದ ವಸತಿ ನಿಲಯ ಈಗ ಕುಡುಕರ ತಾಣವಾಗಿದೆ. ವಿಶಾಲವಾದ ಮೈದ್ದನದಲ್ಲಿ ೧ ಕೋಟಿ ರೂಪಾಯಿ ವೆಚ್ಚದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಡಾ ವಿದ್ಯಾರ್ಥಿಗಳಿಗಾಗಿ ೨ ೦ ೧ ೨ ೩ -೧ ೪ ರಲ್ಲಿ ಆರಂಭವಾದ ವಸತಿ ನಿಲಯ ಈಗ ಹಾಳುಬಿದ್ದು, ಕುಡುಕರ ಅಡ್ಡವಾಗಿದೆ . ಹಾಗೆಯೇ ಒಳಗಡೆ ಎಣ್ಣೆಯ ಬಾಟಲಿ ಬಿದ್ದಿರುವುದು ಮತ್ತೆ ಕಿಟಕಿಯ ಗಾಜುಗಳನ್ನು ಕಿಡಿಗೇಡಿಗಳು ಒಡೆದು ಹಾಕಿದ್ದಾರೆ.
ಕಟ್ಟಡ ನಿರ್ಮಿಸಿದ KRIDL ಸಂಸ್ಥೆಯಿಂದ ಇದುವರೆಗೂ ಕಟ್ಟಡ ಹಸ್ತಾಂತರ ಆಗಿಲ್ಲ. ಕಾಲೇಜು ಶಿಕ್ಷನ ಇಲಾಖೆಗೆ ನೀಡಬೇಕೋ ಅಥವಾ ಸಮಾಜ್ ಕಲ್ಯಾಣ ಇಲಾಖೆ ನೀಡಬೇಕೋ ಎನ್ನುವುದು ಗೊಂದಲ ಬಗೆ ಹರಿದಿಲ್ಲ. ಹೀಗಾಗಿ ಕಟ್ಟಡ ಯಥಾಸ್ಥಿತಿಯಲ್ಲಿದೆ. ಎಂದು ಅಧಿಕಾರಿಳು ತಿಳಿಸಿದ್ದಾರೆ. ವಸತಿ ನಿಲಯ್ ನಿರ್ವಹಣೆಯನ್ನು ಕಾಲೇಜಿಗೆ ನೀಡಿಲ್ಲ. ಇದರ ಬಗ್ಗೆ ಹೆಚ್ಚಿನ ಮಾಹಿತಿ ನಮಗೆ ತಿಳಿದಿಲ್ಲ ಎಂದು ಕಾಲೇಜಿನ ಪ್ರಾಚಾರ್ಯೆ ವಿದ್ಯಾ ನಾಯಕ್ ಹೇಳಿದ್ದಾರೆ.
ಇನ್ನಾದರೂ ಸಂಭಂದ ಪಟ್ಟ ಅಧಿಕಾರಿಗಳು ಇದರ ಬಗ್ಗೆ ಅಗತ್ಯ ಕ್ರಮ ಕೈಗೊಂಡರೆ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಈ ಯೋಜನೆ ಲಾಭ ದೊರೆಯುತ್ತದೆ.
Comments